Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾರ್ಥಿಯ ಪ್ರತಿಭೆಯ ವಿಕಾಸಕ್ಕೆ ವೇದಿಕೆಯ ಅವಶ್ಯಕತೆ ಇದೆ : ಡಿ.ಆರ್.ಪುಷ್ಪ

05:18 PM Aug 31, 2024 IST | suddionenews
Advertisement

 

Advertisement

ಹೊಳಲ್ಕೆರೆ : ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ವಿಕಾಸಕ್ಕೆ ಭಯಮುಕ್ತ ವಾತಾವರಣ ಸೃಷ್ಟಿಸಬೇಕಿದೆ. ಪ್ರತಿ ವಿದ್ಯಾರ್ಥಿಯ ಪ್ರತಿಭೆ ವಿಕಾಸಕ್ಕೆ ವೇದಿಕೆಗಳ ಅವಶ್ಯಕತೆ ಇದೆ ಎಂದು ತುಪ್ಪದಹಳ್ಳಿ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಡಿ.ಆರ್ ಪುಷ್ಪ ಹೇಳಿದರು.

ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಳಿಕಟ್ಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ವಿವಿಧ ಸೃಜನಶೀಲ ಕೌಶಲಗಳ ವಿಕಾಸಕ್ಕೆ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಹಾಡು ಕತೆ ಚಟುವಟಿಕೆಗಳ ಮೂಲಕ ಕಲಿಸುವುದರಿಂದ ಕಲಿಕೆ ಸರಳ ಸುಲಭವಾಗಿ ಸಾಗುತ್ತದೆ. ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಲು ಸಮವಸ್ತ್ರ ಪಠ್ಯಪುಸ್ತಕದ ಜೊತೆ ಗುಣಾತ್ಮಕ ಶಿಕ್ಷಣ ನೀಡಲು ಸಕಲ ಸೌಲಭ್ಯ ಕಲ್ಪಿಸಿದೆ. ಪೋಷಕರು ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ ನಮ್ಮ ಮಕ್ಕಳ ಶಿಕ್ಷಣ ಉತ್ತಮವಾಗಿ ಸಾಗಲು ಶಿಕ್ಷಕರುಗಳಿಗೆ ಸಹಕರಿಸೋಣ ಎಂದು ತಿಳಿಸಿದರು.

Advertisement

 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಶ್ರೀನಿವಾಸರವರು, ಶಾಲೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಬಹಳ ಮುಖ್ಯ. ತುಪ್ಪದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಹೊಳಲ್ಕೆರೆ ತಾಲ್ಲೋಕಿನಲ್ಲಿ ಮಾದರಿಯಾದ ಶಾಲೆಯಾಗಿದೆ. ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಪ್ರತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಉತ್ತಮವಾಗಿದೆ. ಗ್ರಾಮಸ್ಥರು ಇನ್ನು ಹೆಚ್ಚಿನ ರೀತಿಯಲ್ಲಿ ಶಾಲೆಗೆ ಮೂಲಭೂತ ಸೌಲಭ್ಯಗಳ ಕಲ್ಪಿಸಲು ಸರ್ಕಾರದ ಜೊತೆ ನೆರವು ನೀಡಬೇಕು ಎಂದು ಹೇಳಿದರು.

 

ಮಾಜಿ ಶಾಸಕರಾದ ತುಪ್ಪದಹಳ್ಳಿ ಯು.ಹೆಚ್.ತಿಮ್ಮಣ್ಣನವರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಶಿಕ್ಷಣ ಬೇಕು. ಶಿಕ್ಷಕರು ಹಾಗು ತಂದೆ ತಾಯಿ ಮಕ್ಕಳ ಎರಡು ಕಣ್ಣುಗಳಿದ್ದಂತೆ. ವಿದ್ಯಾರ್ಥಿಗಳ ಏಳ್ಗೆಯಲ್ಲಿ ಕುಟುಂಬದ ಹಾಗು ಗ್ರಾಮ ದೇಶದ ಏಳ್ಗೆಯಿದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದ ಮಕ್ಕಳ ವಿಕಾಸಕ್ಕೆ ನೆರವಾಗುವುದು. ಎಲ್ಲ ಮಕ್ಕಳು ಬೆಳೆದು ಉತ್ತಮ ಪ್ರಜೆಗಳಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಾಳಿಕಟ್ಟೆ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಕಲೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ಹಾಗು ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಸಿ.ಮಹೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಿಬಾಯಿ, ಸದಸ್ಯರಾದ ಸುಭಾಷ್ ಚಂದ್ರ, ಧನಂಜಯ, ಗ್ರಾಮ ಮುಖಂಡರಾದ ಎಮ್.ಎಸ್.ಶೇಖರಪ್ಪ, ಸತೀಶ್, ಸುರೇಶ್, ನಾಗರಾಜ, ಶಂಕರಮೂರ್ತಿ, ಜಯಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ, ಇ.ಸಿ.ಓ ಬಸವರಾಜಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕಲ್ಲೇಶ್, ಶ್ರೀ ರಂಗನಾಥ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸುಜಾತ ಬಿ.ಎಸ್, ಪ್ರಾಥಮಿಕ ಶಾಲಾ ಸಂಘದ ನಿರ್ದೇಶಕರಾದ ಕೆ.ಪಿ.ಪ್ರಕಾಶ, ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ.ತಿಪ್ಪೇಸ್ವಾಮಿ, ತುಪ್ಪದಹಳ್ಳಿ ಶಾಲಾ ಮುಖ್ಯೋಪಾಧ್ಯಾಯರಾದ ಹೆಚ್.ನಾಗರಾಜ ಸಹಶಿಕ್ಷಕರಾದ ಮಹೇಶ್ವರಪ್ಪ, ಬಸವರಾಜಪ್ಪ, ಮನೋಹರ್, ಹೇಮಲತಾ, ಟಿ.ಬಿ.ಅನಿತಾ ಉಮೇಶ್, ದಿವ್ಯ, ದೀಪ, ಅಡಿಗೆ ಸಹಾಯಕರು, ತಾಳಿಕಟ್ಟೆ ಕ್ಲಸ್ಟರ್ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿವಿಧ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗು ತುಪ್ಪದಹಳ್ಳಿ ಗ್ರಾಮಸ್ಥರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
bengaluruchitradurgadevelopmentDR Pushpaplatformstudentsuddionesuddione newstalentಚಿತ್ರದುರ್ಗಡಿ.ಆರ್.ಪುಷ್ಪಪ್ರತಿಭೆಬೆಂಗಳೂರುವಿಕಾಸವಿದ್ಯಾರ್ಥಿವೇದಿಕೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article