ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಮೌಢ್ಯಚರಣೆ ಹಾಗೂ ದುಶ್ಚಟಗಳಿಂದ ದೂರವಿರಿ : ಷಡಕ್ಷರಮುನಿ ಸ್ವಾಮೀಜಿ ಕಿವಿಮಾತು
ಹೊಸದುರ್ಗ : ದೇವರು, ಭಕ್ತಿ, ಧಾರ್ಮಿಕ ಕಾರ್ಯಗಳು ಮೌಢ್ಯಾಚರಣೆ ಕೇಂದ್ರಗಳಾಗದೇ, ಪರಸ್ಪರ ಸಹಬಾಳ್ವೆ, ಸಂಘಟನೆ ಕೇಂದ್ರಗಳಾಗಬೇಕು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಮೌಢ್ಯಚರಣೆ ಹಾಗೂ ದುಶ್ಚಟಗಳಿಂದ ದೂರವಿರಿ ಎಂದು ಹಿರಿಯೂರಿನ ಕೋಡಿಹಳ್ಳಿ ಆದಿಜಾಂವ ಮಠದ ಷಡಕ್ಷರಮುನಿ ಸ್ವಾಮೀಜಿ ಕಿವಿಮಾತು ಹೇಳಿದರು.
ಪೀಲಾಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಭಾನುವಾರ ಆಯೋಜಿಸಿದ್ದ 'ದುಗಾ೯ಂಭಿಕ ದೇವಿಯ ನೂತನ ದೇವಸ್ಥಾನದ ಪ್ರರಂಭೋತ್ಸವ'ದ ಧಾರ್ಮಿಕ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಪ್ರಜೆಗಳು ಸಂವಿಧಾನದ ಆಶಯದಂತೆ ವಿದ್ಯಾವಂತರಾಗಿ, ಆಥಿ೯ಕ , ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಅನ್ಯ ಸಮಾಜದವರೊಂದಿಗೆ ಸ್ನೇಹ, ಸಹಬಾಳ್ವೆಯಿಂದ ಇದ್ದು, ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದರು.
ಶಾಸಕ ಬಿ.ಜಿ. ಗೋವಿಂದಪ್ಪ ದುಗಾ೯ಬಿಂಕ ದೇವಿ ನೂತನ ಶಿಲಾಮೂತಿ೯ ಗೆ ಪುಷ್ಪಾರ್ಚನೆ ನೇರವೇರಿಸಿದರು.
ಸದ್ಗುರು ಆಯುರ್ವೇದಿಕ್ ಉತ್ಪನ್ನಗಳ ಮಾಲೀಕ ಡಿ.ಎಸ್.ಪ್ರದೀಪ್ ಮಾತನಾಡಿ, ದೇವರು ಧರ್ಮದ ಜೊತೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಂಬೇಡ್ಕರ್ ಅವರ ಆಶಯದಂತೆ ಪ್ರತಿ ಊರುಗಳಲ್ಲಿ ಗ್ರಂಥಾಲಯಗಳಿರಬೇಕು. ನಾವು ಕೂಡ ಹೆಚ್ಚು ಒತ್ತು ಕೊಡುತ್ತಿರುವುದು ಶಿಕ್ಷಣಕ್ಕೆ ಆಗಾಗಿ ಕೆಲವು ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಎಲ್ಲಾ ವಗ೯ದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಒಂದು ಸಣ್ಣ ಸಾಮಾಜಿಕ ಸೇವೆಯನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಮಾಜ ಮುಖಂಡ ಗೂಳಿಹಟ್ಟಿ ಕೃಷ್ಣಮೂತಿ೯, ಮೈಸೂರಿನ ಪ್ರಧಾನ ಋತ್ವಿಜರಾದ ದಯಾನಂದ ಶರ್ಮ, ಶಿಲ್ಪಿ ಬಾಬುಚರಣ, ಇಂಜಿನಿಯರ್ ಹೆಚ್. ಅಂಜಿನಪ್ಪ, ಶಿಕ್ಷಕ ಆರ್. ನಾಗೇಶ್, ಗ್ರಾ.ಪಂ ಸದಸ್ಯ ಪ್ರಕಾಶ್, ಆರ್.ಡಿ.ಪಿ.ಆರ್ ಇಲಾಖೆಯ ಸೌಮ್ಯ ಕೆ, ಎಸ್.ಆರ್.ಟಿ.ಸಿ ಇಲಾಖೆಯ ಶಶಿರೇಖಾ, ಮುಖಂಡರುಗಳಾದ ರಂಗಪ್ಪ, ಬೆಳ್ಳುಳ್ಳಿ ರಂಗಪ್ಪ, ಔ .ಹನುಮಂತಪ್ಪ, ಶಿ.ಹನುಮಂತಪ್ಪ, ಪಿ .ಇ .ರವಿ , ಬಸವರಾಜ್, ಡಿ.ರಂಗಪ್ಪ, ಹೆಚ್.ರಾಜ್ ಕುಮಾರ್ , ಪಿ.ಹೆಚ್.ಲೋಕೇಶ್, ರಾಜ್ಯಸಂಪನ್ಮೂಲ ವ್ಯಕ್ತಿ ಪೀಲಾಪುರ ಆರ್ .ಕಂಠೇಶ್ ಸೇರಿದಂತೆ ಹಲವರಿದ್ದರು.