Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಒತ್ತು ನೀಡಿ : ಡಾ. ಶಿವಕುಮಾರ್

06:51 PM Sep 22, 2024 IST | suddionenews
Advertisement

 

Advertisement

 

ಚಿತ್ರದುರ್ಗ, ಸೆ, 22 : ಸಿಟ್ಟು, ಅಹಂಕಾರ, ದ್ವೇಷ, ಅತಿಯಾಸೆ ಬಿಟ್ಟು, ಇರುಷ್ಟರಲ್ಲಿ ಸಂತೃಪ್ತಿಯಿಂದ ಜೀವನ ಸಾಗಿಸುವ, ಅಗಾಧ ಐಶ್ವರ್ಯ ಇದ್ದರೂ ಸರಳವಾದ ಬದುಕನ್ನ ನಡೆಸುವಂಥದ್ದು ಒತ್ತಡ ಮುಕ್ತ ಬದುಕಿಗೆ ರಹದಾರಿ. ಆಸೆಯಿಂದ ಕೂಡಿದ ಜೀವನ ನಿರಾಶೆಗೆ ಕೊನೆಗೆ ಅದು ಸಾವನ್ನ ಬಯಸುತ್ತದೆ. ಅದರಿಂದ ಹೊರತಾದ ಜೀವನ ಸಾಗಿಸುವುದರಿಂದ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಎಂದು ಆಯುಷ್ ಇಲಾಖೆಯ ಡಾ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

Advertisement

ನಗರದ ರೋಟರಿ ಬಾಲ ಭವನದಲ್ಲಿ ಇಂದು (ಭಾನುವಾರ) ಮುಂಜಾನೆ ಚಿತ್ರದುರ್ಗ ಯೋಗಾಸನ ಕ್ರೀಡಾ ಮತ್ತು ಸಂಸ್ಕೃತಿಕ ಸಂಸ್ಥೆ ವತಿಯಿಂದ ಮಾನಸಿಕ ಒತ್ತಡ ಮತ್ತು ಪರಿಹಾರ ವಿಷಯ ಕುರಿತ ಗೋಷ್ಠಿಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು ನಾವು ಯಾವುದೋ ಒಂದು ಕೆಲಸವನ್ನು ಹಮ್ಮಿಕೊಂಡು ಅದರಲ್ಲಿ ಯಶಸ್ವಿ ಆಗದೇ ಇದ್ದಾಗ ನಿರಾಶರಾಗುತ್ತೇವೆ. ಮರಳಿ ಪ್ರಯತ್ನ ಮಾಡಿದಾಗ ಅದರಲ್ಲಿ ಸಂತೃಪ್ತಿ ಯಶಸ್ಸು ಸಿಕ್ಕೇ ಸಿಗುತ್ತದೆ. ನಾವು ಪ್ರತಿ ಸಾರಿ ಗೆದ್ದೇ ಗೆಲ್ಲಬೇಕು ಎಂಬ ಹಠದ ಪರಿಸ್ಥಿತಿಗೆ ಹೋಗದೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಹಾಗೆ ನಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ಪರಿಣತಿಯನ್ನು ಪಡೆಯುತ್ತಾ ಪಡೆಯುತ್ತಾ ದಿನವೂ ಹೊಸದನ್ನ ಕಲಿಯುತ್ತಾ ಸಾಗುತ್ತಿರಬೇಕು. ನಿತ್ಯ ಮನಸ್ಸಿಗೆ ಹೊಸ ಹೊಸ ವಿಚಾರಗಳನ್ನು ತುಂಬುತ್ತಾ ಉದಾಹರಣೆಗೆ ಸಂಗೀತ ಕೇಳುವುದು, ಪುಸ್ತಕ ಓದುವುದು ,ಮನರಂಜನೆ,ಯೋಗ,ಸಮಾಜ ಸೇವೆ, ಒಳ್ಳೆಯ ಸ್ನೇಹಿತರ,ಹಿತೈಷಿಗಳ ಒಡನಾಟ, ಮಕ್ಕಳೊಂದಿಗೆ ಆಟ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಗ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಹಾಗೆ ನಾವು ಇಂದು ಮಕ್ಕಳಿಗೆ ಅಂಕಗಳಿಕೆ ಶಿಕ್ಷಣ ಕೊಡಿಸುವ ಬದಲಿಗೆ ಕೌಶಲ್ಯಾಭಿವೃದ್ಧಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟರೆ ವಿದ್ಯಾರ್ಥಿಗಳಿಂದ ಸಾಮಾನ್ಯ ಜ್ಞಾನದ ಮೂಲಕ ತಮ್ಮ ಅರಿವನ್ನು ವಿಸ್ತಾರ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಹಾಗೆ ನೋಡಿದಾಗ ನಮ್ಮಲ್ಲಿ ಬಡವರು, ಕಾರ್ಮಿಕರು, ಭಿಕ್ಷೆ ಬೇಡುವವರು ಹಾಗೂ ಮಧ್ಯಮ ವರ್ಗದವರು ಅವರು ಎಂದೂ ಸಹ ಆತ್ಮಹತ್ಯೆಯಂತಹ ಯೋಚನೆ ಮಾಡುವುದಿಲ್ಲ. ಅವರು ಇದ್ದುದ್ದರಲ್ಲಿಯೇ ಜೀವನ ಸಾಗಿಸುವ ಸಂತೃಪ್ತಭಾವ ಅದರಲ್ಲಿಯೇ ಬದುಕನ್ನು ಕಂಡುಕೊಳ್ಳುವ ತವಕದಲ್ಲಿರುತ್ತಾರೆ. ಅತಿ ಆಸೆ ಅವರಿಂದ ದೂರವಿರುತ್ತದೆ. ನೀವು ಇತ್ತೀಚೆಗೆ ನೋಡಿರಬಹುದು. ಅತಿ ಆಸೆಗಳುಳ್ಳವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಒಳಗಾಗಿ ತಮ್ಮ ಬದುಕನ್ನ ಹಾಳು ಮಾಡಿಕೊಳ್ಳುತ್ತಿದ್ದಾರೆ.ನಾವು ಬೇರೆಯವರನ್ನು ತಿದ್ದುವ ಕೆಲಸಕ್ಕೆ ಕೈ ಹಾಕದೆ ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನದಲ್ಲಿ ಸಾಗಿದರೆ ನೆಮ್ಮದಿ ಸದಾ ಇರುತ್ತದೆ ಎಂದರು. ಅದಕ್ಕೆ ಬಸವಣ್ಣ ಹೇಳಿದ್ದು ಲೋಕದ ಡೋಂಕ ನೀವೇಕೆ ತ್ತಿದ್ದುವಿರಿ. ಎಂದು ಮೊದಲು ನಮ್ಮನ್ನು ನಾವು ಸುದಾರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ಕೋಕಿಲಾ ಎಂ.ಜೆ ಅವರ ವಚನ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾದ ಕಾರ್ಯಕ್ರಮದ ವಿಚಾರಗೋಷ್ಠಿಯ ಕೇಂದ್ರ ಬಿಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾಂದ ಅವರು ಕಾರ್ಯಕ್ರಮದ ರೂಪುರೇಷೆ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಯ ಯೋಗ ತರಬೇತುದಾರರು , ಯೋಗ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Advertisement
Tags :
bengaluruchitradurgaDr. Shivakumareducationemphasisskill developmentsuddionesuddione newsಕೌಶಲ್ಯಾಭಿವೃದ್ಧಿ ಶಿಕ್ಷಣಚಿತ್ರದುರ್ಗಡಾ.ಶಿವಕುಮಾರ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article