For the best experience, open
https://m.suddione.com
on your mobile browser.
Advertisement

ಕಬ್ಬಿಣದ ಕೊರತೆ ನೀಗಿಸಿ ಸುರಕ್ಷಿತ ತಾಯ್ತನ ಪಡೆಯಿರಿ : ಡಾ.ಬಿ.ವಿ.ಗಿರೀಶ್

03:48 PM Sep 09, 2024 IST | suddionenews
ಕಬ್ಬಿಣದ ಕೊರತೆ ನೀಗಿಸಿ ಸುರಕ್ಷಿತ ತಾಯ್ತನ ಪಡೆಯಿರಿ   ಡಾ ಬಿ ವಿ ಗಿರೀಶ್
Advertisement

Advertisement
Advertisement

ಚಿತ್ರದುರ್ಗ. ಸೆ.09: ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನೀಗಿಸಿಕೊಂಡು ಸುರಕ್ಷಿತ ಪಡೆಯಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ ಹೇಳಿದರು.

Advertisement

ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜರುಗಿದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.

Advertisement

ಗರ್ಭಿಣಿ ಆರೈಕೆಯಲ್ಲಿ ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ. ಹಿಮೋಗ್ಲೋಬಿನ್ 7 ಗ್ರಾಂಗಿAತ ಕಡಿಮೆ ಇರುವ ಗರ್ಭಿಣಿಯರಿಗೆ ರಕ್ತವನ್ನು ನೀಡಲಾಗುತ್ತದೆ. 7 ಗ್ರಾಂ ಮೇಲೆ 10 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣವಿರುವ ಗರ್ಭಿಣಿಯರಿಗೆ ಕನಿಷ್ಠ 10 ಡೋಸ್ ಐರನ್ ಸುಕ್ರೋಸ್ ಇಂಜೆಕ್ಷನ್ ಮೂಲಕ ಕಬ್ಬಿಣದ ಕೊರತೆ ನೀಗಿಸಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದರು.

Advertisement

ಸಾಮಾನ್ಯ ಗರ್ಭಿಣಿಯರಿಗೆ ಕಬ್ಬಿಣಾಂಶ ಮತ್ತು ಫೋಲಿಕ್ ಅಮ್ಲದ ಮಾತ್ರೆಗಳ ಪೂರೈಕೆ ಮಾಡಿ ಕನಿಷ್ಠ 12 ಗ್ರಾಂನಷ್ಟು ಹಿಮೋಗ್ಲೋಬಿನ್ ಇರುವಂತೆ ನಿರ್ವಹಣೆ ಮಾಡಲಾಗುತ್ತದೆ. ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಂಡ ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನಿಗಿಸಿಕೊಂಡು ಸುರಕ್ಷಿತ ತಾಯ್ತತನ ಪಡೆಯಿರಿ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ತಾಯಿ ಕಾರ್ಡ್ನ ಮಹತ್ವ ತಿಳಿಸಿ, ನಿಮ್ಮ ತಾಯಿ ಕಾರ್ಡ್ನ ಪುಟ 7 ಮತ್ತು 8ರಲ್ಲಿ ತಾವುಗಳು ತಮ್ಮ ಗರ್ಭಾವಸ್ಥೆಯಲ್ಲಿ 8 ಬಾರಿಯಾದರೂ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಿ. ಹೆರಿಗೆ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಸೂಕ್ತ ಚಿಕಿತ್ಸೆ ಪಡೆಯಲು ಸಹಕರಿಸಿ. ಗರ್ಭಿಣಿ ಬಾಣಂತಿ ಸೇವೆಯನ್ನು ಸರ್ಕಾರ ಉಚಿತವಾಗಿ ಒದಗಿಸುತ್ತದೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಅಂತರದ ಹೆರಿಗೆ ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿ, ಪೌಷ್ಟಿಕ ಆಹಾರ ಸೇವನೆ ಬಗ್ಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ ಮಾತನಾಡಿ, ಗರ್ಭಿಣಿ ಬಾಣಂತಿ ಆರೈಕೆ ಮತ್ತು ಸುರಕ್ಷಿತ ಹೆರಿಗೆ ಉಚಿತವಾಗಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಒಟ್ಟ 44 ಗರ್ಭಿಣಿಯರಿಗೆ ಉಚಿತ ರಕ್ತ ಪರೀಕ್ಷೆ, ಮಧುಮೇಹ ಪರೀಕ್ಷೆ ರಕ್ತದೊತ್ತಡ ಪರೀಕ್ಷೆ ನಡೆಸಿ ಪ್ರೋಟೀನ್ ಪೌಡರ್, ಕಬ್ಬಿಣಾಂಶ ಮಾತ್ರೆ, ಕ್ಯಾಲ್ಸಿಯಂ ಮಾತ್ರೆ ನೀಡಲಾಯಿತು.
ಅಭಿಯಾನದಲ್ಲಿ ಫಾರ್ಮಸಿ ಅಧಿಕಾರಿ ಸತೀಶ್, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಉಷಾ, ನರ್ಸಿಂಗ್ ಅಧಿಕಾರಿ ಮಧು, ಸಮುದಾಯ ಆರೋಗ್ಯಾಧಿಕಾರಿ ಪಾಲಯ್ಯ, ಆರೋಗ್ಯ ಸುರಕ್ಷತಾಧಿಕಾರಿಗಳಾದ ರೇಖಾ, ಶ್ರೀ ಮತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅವಿನಾಶ್, ಪ್ರವೀಣ್, ಗರ್ಭಿಣಿಯರು, ಪೋಷಕರು ಇತರರು ಇದ್ದರು.

Tags :
Advertisement