ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ : ತಾರಿಣಿ ಶುಭದಾಯಿನಿ
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.01 : ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ ಎಂದು ಶ್ರೀಮತಿ ತಾರಿಣಿ ಶುಭದಾಯಿನಿ ಹೇಳಿದರು.
ಎಸ್.ಆರ್. ಎಸ್. ಹೆರಿಟೇಜ್ ಶಾಲೆಯಲ್ಲಿ
10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ “ಪ್ರಗತಿಪಥಂ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅದು ವ್ಯಕ್ತಿಯಲ್ಲಿನ ವಿಷಯ ಜ್ಞಾನವನ್ನು ಒಡಮೂಡಿಸುವುದರೊಂದಿಗೆ ವರ್ತನೆ,ನಡವಳಿಕೆ, ಬದುಕುವ ಕಲೆ, ಕೌಶಲ, ಮೌಲ್ಯಗಳು, ನಡೆನುಡಿ, ಆಚಾರವಿಚಾರ ಕಲಿತು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಶ್ರೀಮತಿ ತಾರಿಣಿ ಶುಭದಾಯಿನಿ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕುರಿತು ಸ್ಫೂರ್ತಿದಾಯಕ ನುಡಿಮುತ್ತುಗಳನ್ನು ತಿಳಿಸುವುದರ ಜೊತೆ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ|| ರವಿ ಟಿ ಎಸ್ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಂ ಎಸ್, ಐಸಿಎಸ್‍ಈ ವಿಭಾಗದ ಪ್ರಾಂಶುಪಾಲರಾದ ಅರ್ಪಿತಾ ಎಮ್ ಎಸ್, ಸ್ಟೇಟ್‍ಬೋರ್ಡ್ ವಿಭಾಗದ ಶ್ರೀಮತಿ ಪದ್ಮಾವತಮ್ಮ ಕೆ ಜೆ, ಶೈಕ್ಷಣಿಕ ಸಹಸಂಯೋಜಕರಾದ ರಾಕೇಶ್ ಬಿ ವಿ, ಶಾಲೆಯ ಬೋಧಕ ಸಿಬ್ಬಂದಿವರ್ಗ ಮತ್ತು ಪೋಷಕರು ಉಪಸ್ಥಿತರಿದ್ದರು.