For the best experience, open
https://m.suddione.com
on your mobile browser.
Advertisement

ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಶಿಕ್ಷಕರಿಂದ ಸಂಸ್ಕಾರ ಬೆಳೆಯಲು ಸಾಧ್ಯ : ರಾಮಲಿಂಗಶೆಟ್ಟಿ

04:37 PM Dec 09, 2023 IST | suddionenews
ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಶಿಕ್ಷಕರಿಂದ ಸಂಸ್ಕಾರ ಬೆಳೆಯಲು ಸಾಧ್ಯ   ರಾಮಲಿಂಗಶೆಟ್ಟಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ.ಡಿ. 09 : ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಶಿಕ್ಷಕರಿಂದ ಸಂಸ್ಕಾರ ಬೆಳೆಯಲು ಸಾಧ್ಯವಿದೆ. ಕಲ್ಲುಗಳನ್ನು ಮೂರ್ತಿಗಳನ್ನಾಗಿ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ ಎಂದು ವಾಸವಿ ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿ ರಾಮಲಿಂಗಶೆಟ್ಟಿ ತಿಳಿಸಿದರು.

Advertisement
Advertisement

ನಗರದ ವಾಸವಿ ವಿದ್ಯಾ ಸಂಸ್ಥೆಯಲ್ಲಿ 1993-94ನೇ ಇಸವಿಯಲ್ಲಿ ಅಭ್ಯಾಸವನ್ನು ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅಂದು ನಮ್ಮ ಬಳಿಯಲ್ಲಿ ಅಭ್ಯಾಸವನ್ನು ಮಾಡಿದ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ವಿವಿಧ ರೀತಿಯಲ್ಲಿ ಉದ್ಯೋಗವನ್ನು ಮಾಡುತ್ತಾ ಬದುಕನ್ನು ನಡೆಸುತ್ತಿದ್ದಾರೆ. ತಾವು ಓದಿದ ಶಾಲೆಯನ್ನು ಮರೆಯದೆ ಇಲ್ಲಿಗೆ ಬಂದು ನಿಮಗೆ ಪಾಠವನ್ನು ಹೇಳಿಕೊಟ್ಟ ಶಿಕ್ಷಕರನ್ನು ಕರೆಯಿಸಿ ಅವರನ್ನು ಗೌರವಿಸಿದ್ದು ತಂಬಾ ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.

ನೀವುಗಳು ಈಗ ದೊಡ್ಡವರಾಗಿ ವಿವಿಧ ರೀತಿಯ ಉದ್ಯೋಗದಲ್ಲಿದ್ದಿರ, ನಮ್ಮ ಶಾಲೆಯಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರಿಗೆ ಓದಲು ಇಷ್ಠ ಆದರೆ ಫೀಜನ್ನು ಭರಿಸಲಾಗದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಸಹಾಯಾರ್ಥ ನೀವುಗಳು ಫಂಡ್‍ನ್ನು ನಿರ್ಮಾಣ ಮಾಡಿ ಅವರ ಶಿಕ್ಷಣಕ್ಕೆ ದಾರಿಯಾಗಿ ಎಂದು ಮನವಿ ಮಾಡಿದ ಅವರು, ನಮ್ಮ ವಾಸವಿ ಶಾಲೆ ತಾಯಿಯ ಹೆಸರಿನಲ್ಲಿ ಪ್ರಾರಂಭವಾಗಿ ನಡೆಯುತ್ತಿದೆ ಇಲ್ಲಿ ಓದಿದವರೆಲ್ಲಾ ಉನ್ನತ ಹುದ್ದೆಯಲ್ಲಿದ್ದಾರೆ. ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ. ರಾಜಕೀಯದಲ್ಲಿರುವವರು ಮುಂದಿನ ದಿನಮಾನದಲ್ಲಿ ಉನ್ನತವಾದ ಹುದ್ದೆಯನ್ನು ಪಡೆಯುವುದರ ಮೂಲಕ ಶಾಲೆಗೆ ಜಿಲ್ಲೆಗೆ ಹೆಸರನ್ನು ತರುವಂತೆ ಹೇಳಿದರು.

1993-94ನೇ ಬ್ಯಾಚ್ ಉತ್ತಮವಾದ ಬ್ಯಾಚ್ ಆಗಿತ್ತು ಓದಿನಲ್ಲಿಯೂ ಸಹಾ ಮುಂದೆ ಇದ್ದು ಯಾವುದೇ ಕ್ರೀಡಾಕೂಟಕ್ಕೆ ಹೋದರು ಸಹಾ ಪದಕವನ್ನು ತೆಗೆದುಕೊಂಡೇ ಬರುತ್ತಿದ್ದರು, ಶಾಲೆ ಎಂದ ಮೇಲೆ ತರಲೇ ಕೀಟಲೇ ಇದ್ದೇ ಇರುತ್ತವೆ ಅವುಗಳನ್ನು ಮೀರಿ ಸಹಾ ಉತ್ತಮವಾದ ಭಾಂಧವ್ಯವನ್ನು ನೀವುಗಳು ಹೊಂದಿದ್ದಾರೆ ನಿಮ್ಮ ಈ ಗೆಳತನ ಹೀಗೇಯೇ ಮುಂದುವರೆಯಲಿ ಎಂದು ರಾಮಲಿಂಗಾಶೆಟ್ಟಿ ಆಶಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿರಾದ ವಿಜಯ ಮಧುಕರ್, ಮಾಯಾವತಿ, ಕುಮುದಾ, ಶೋಭಾ, ಹೇಮಾ, ಶೈಲಜ, ವಿಮಲ, ಸರಸ್ವತಿ, ಲೀಲಾವತಿ, ಸೇರಿದಂತೆ ಇತರರು ಭಾಗವಹಿಸಿದ್ದರು.

93-94ನೇ ಸಾಲಿನ ವಿದ್ಯಾರ್ಥಿಗಳಾದ ಸುಭಾಷ್, ನರೇಂದ್ರ ಸುರೇಶ್, ಹರ್ಷ, ಉಮೇಶ್, ಅಂಬುಜ, ಯೋಗಿತಾ, ಮಂಜುಳ, ಶಿಲ್ಪ, ರೂಪ ಸೇರಿದಂತೆ ಇತರೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
Advertisement