Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೋಷಕರು ಕಷ್ಟಪಟ್ಟಾದರೂ ಸರಿ ಮಕ್ಕಳಿಗೆ ಶಿಕ್ಷಣ ಕೊಡಿಸಿ : ಬಿ. ಟಿ.ಸಂಪತ್ ಕುಮಾರ್

08:24 PM Jun 22, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ,
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜೂನ್.22 :
ಪ್ರತಿಯೊಬ್ಬರಿಗೂ ಶಿಕ್ಷಣವೇ ಶಕ್ತಿಯಾಗಿದೆ. ಶಿಕ್ಷಣ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಪೋಷಕರು ಕಷ್ಟಪಟ್ಟಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಬೆಳಗೆರೆ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದ ಬಿ ಟಿ. ಸಂಪತ್ತು ಕುಮಾರ್ ಹೇಳಿದರು.

Advertisement

ಅವರು ಬೆಳಗೆರೆ ಸರ್ಕಾರಿ  ಶಾಲಾ ಮಕ್ಕಳಿಗೆ ಉಚಿತ ನೋಟ್ಸ್ ಬುಕ್ ಪೆನ್ ವಿತರಣೆ ಮಾತನಾಡಿದರು.

ಜೀವನದಲ್ಲಿ ಶಿಕ್ಷಣದ ಪ್ರಾಮುಖ್ಯತೆ ನಮ್ಮ ಬುದ್ಧಿ ಶಕ್ತಿಯನ್ನು ಸುಧಾರಿಸುತ್ತದೆ. ಮತ್ತು ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯವನ್ನು ಸಜ್ಜುಗೊಳಿಸುತ್ತದೆ. ಇದು ನಮಗೆ ಯಶಸ್ಸನ್ನು ಸಾಧಿಸಲು ಮತ್ತು ಪರಾನುಭೂತಿಯ ಮಸೂರದ ಮೂಲಕ ಜಗತ್ತನ್ನ ಗ್ರಹಿಸುವ ಸಾಮರ್ಥ್ಯವನ್ನು ಮಾಡುತ್ತದೆ.

ಇಂದು ನಮ್ಮ ಪೋಷಕರು ನಮಗೆ ಉತ್ತಮ ಶಿಕ್ಷಣ ನೀಡಿದ್ದಕ್ಕೆ ನಾವು ಇಂದು ಪ್ರೊಫೆಸರ್ ಆಗಿದ್ದೇವೆ. ವಿಶ್ವವಿದ್ಯಾಲಯ ಕಾರ್ಯನಿರ್ವಸುತ್ತದ್ದೆವೆ. 10 ದೇವಸ್ಥಾನ ಕಟ್ಟುವ ಬದಲು ಒಂದು ಶಾಲೆ ತೆರೆಯೆಂದು ಹೇಳಿದ್ದಾರೆ. ಇದರಿಂದ ಅದೆಷ್ಟೋ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಕಲಿತು ಭವಿಷ್ಯ ಕಟ್ಟಿಕೊಳ್ಳುತ್ತಾರೆ. ಎಲ್ಲರಿಗೂ ಅಗತ್ಯವಾಗಿ ಶಿಕ್ಷಣ ಬೇಕೇ ಬೇಕು, ಪೋಷಕರು ಸಹ ಕಷ್ಟಪಟ್ಟಾದರೂ ಸಹ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ನಾನು ಓದಿ ಬೆಳೆದ ಈ ಶಾಲೆಗೆ ಪ್ರತಿ ವರ್ಷವೂ ಸಹ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಪೆನ್ ಬ್ಯಾಗುಗಳನ್ನು ವಿತರಣೆ ಮಾಡುತ್ತಿದ್ದೇನೆ. ಇದೇ ರೀತಿಯಾಗಿ ಇದೇ ಶಾಲೆಯಲ್ಲಿ ಓದಿ ಇಂದು ಸಾಕಷ್ಟು ಹಳೆಯ ವಿದ್ಯಾರ್ಥಿಗಳು ಉತ್ತಮವಾದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾನು ಹೋದ ಶಾಲೆಗೆ ಏನಾದರೂ ಸಹಕಾರ ಮಾಡಲು ಮುಂದಾಗಬೇಕು ಎಂದರು.

ನಿವೃತ್ತಿ ಪ್ರೊಫೆಸರ್ ಜಿ.ಆರ್. ರಾಜಶೇಖರಯ್ಯ ಮಾತನಾಡಿ, ಶಿಕ್ಷಣ ವ್ಯಕ್ತಿಯ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಜ್ಞಾನ ಕೌಶಲ್ಯಗಳನ್ನು ಬೆಳೆಸುತ್ತದೆ. ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಣಕ್ಕೆ ವಿದ್ಯೆಯ ಸಂಸ್ಥೆಗಳು ಮೂಲಕ ದೊರೆಯುವ ಒಂದು ನಿರ್ದಿಷ್ಟವಾದ ಗುರಿ ಉದ್ದೇಶದಿಂದ ಔಪಚಾರಿಕ ಶಿಕ್ಷಣವನ್ನು ನಿರ್ವಹಿಸುತ್ತದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವುದು ಎಲ್ಲಕ್ಕಿಂತ ಮೊದಲು  ಆದ್ಯತೆ  ಶಿಕ್ಷಣಕ್ಕೆ ಆಗಬೇಕು. ಏನಾದರೂ ಆಗು ಮೊದಲು ನೀ ಮಾನವನಾಗು ಎಂಬ ಕವಿಯ ವಾಣಿಯಂತೆ ಮಾನವನಾಗಲು ಶಿಕ್ಷಣ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಮುದ್ದು ರಂಗಮ್ಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement
Tags :
b. T. SampathbengaluruchildrenchitradurgaEducateparentsproperlystrugglesuddionesuddione newsಚಿತ್ರದುರ್ಗಪೋಷಕರುಬಿ. ಟಿ.ಸಂಪತ್ ಕುಮಾರ್ಬೆಂಗಳೂರುಶಿಕ್ಷಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article