Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಡಿತರ ಚೀಟಿದಾರರ ಇ-ಕೆವೈಸಿ: ಆಗಸ್ಟ್ 31 ಅಂತಿಮ ಗಡುವು

03:04 PM Aug 28, 2024 IST | suddionenews
Advertisement

ಚಿತ್ರದುರ್ಗ. ಆ.28: ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಮಾಡಿಸಲು ಆಗಸ್ಟ್ 31 ಅಂತಿಮ ಗಡುವು ನಿಗದಿಪಡಿಸಿದ್ದು, ಇ-ಕೆವೈಸಿ ಸಂಗ್ರಹಣೆಯಾಗಿಲ್ಲದ ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಪಡಿತರ ಚೀಟಿದಾರರ ಇ.ಕೆ.ವೈ.ಸಿ ಸಂಗ್ರಹಣೆಯನ್ನು 2017ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಸಂಗ್ರಹಣೆ ಮಾಡಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಇ-ಕೆ.ವೈ.ಸಿ ಸಂಗ್ರಹಣೆಯ ಪ್ರಗತಿಯನ್ನು ಪರಾಮರ್ಶೆ ಮಾಡಲಾಗಿ, ಇದುವರೆಗೂ ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಸದಸ್ಯರ ಶೇ.96.34 ಮತ್ತು ಆದ್ಯತಾ ಪಡಿತರ ಚೀಟಿ ಸದಸ್ಯರ ಶೇ.97.18 ಸೇರಿದಂತೆ ಒಟ್ಟು ಶೇ.97.07ರಷ್ಟು ಇ-ಕೆ.ವೈ.ಸಿ ಸಂಗ್ರಹಣೆ ಮಾಡಲಾಗಿದೆ.

ಪಡಿತರ ಚೀಟಿಯಲ್ಲಿನ ಸದಸ್ಯರ ಇ-ಕೆ.ವೈ.ಸಿ ಸಂಗ್ರಹಣೆಯಾಗದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಅಂತಹ ಪಡಿತರ ಚೀಟಿಗಳು, ಸದಸ್ಯರುಗಳ ಹೆಸರುಗಳು ಪಡಿತರ ಚೀಟಿಗಳಿಂದ ಬಿಟ್ಟು ಹೋಗುವ ಮತ್ತು ಆಹಾರಧಾನ್ಯ ಹಂಚಿಕೆ ಸ್ಥಗಿತಗೊಳ್ಳುವ ಸಂಭವವಿರುತ್ತದೆ.

Advertisement

ಆದ್ದರಿಂದ ಇ-ಕೆ.ವೈ.ಸಿ ಸಂಗ್ರಹಣೆಯಾಗಿಲ್ಲದ್ದ ಪಡಿತರ ಚೀಟಿದಾರರು, ಸದಸ್ಯರುg ಇದೇ ಆಗಸ್ಟ್ 31ರೊಳಗೆ ತಾವು ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಯ, ತಾವು ಇರುವ ಸ್ಥಳದಲ್ಲಿಯೇ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಜೀವಮಾಪನ ನೀಡಿ ಇ-ಕೆ.ವೈ.ಸಿ ಸಂಗ್ರಹಿಸಿಕೊಳ್ಳಲು ಪಡಿತರ ಚೀಟಿದಾರರಿಗೆ ಅಂತಿಮ ಗಡುವು ನೀಡಿದ್ದು, ತಪ್ಪದೇ ಇ.ಕೆ.ವೈ.ಸಿ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgaE kycRation Cardration card holderssuddionesuddione newsಇ-ಕೆವೈಸಿಚಿತ್ರದುರ್ಗಪಡಿತರ ಚೀಟಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article