Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದ್ವಾರಕೀಶ್ ಗಾಡ್ ಫಾದರ್ ಆಗಿದ್ದರು ಚಿತ್ರದುರ್ಗದ ಜಾಫರ್ ಶರೀಫ್ : ಜಾಫರ್ ನಿಧನದ ದಿನ ದ್ವಾರಕೀಶ್ ಏನ್ ಹೇಳಿದ್ರು ಗೊತ್ತಾ..?

03:04 PM Apr 16, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಇಂದು ದ್ವಾರಕೀಶ್ ಅವರು ಇಲ್ಲ. ಜಾಫರ್ ಶರೀಫ್ ಅವರೂ ಇಲ್ಲ. ಆದರೆ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿತ್ತು. ಆತ್ಮೀಯತೆ ಹೆಚ್ಚಾಗಿತ್ತು. ಅಣ್ಣ ತಮ್ಮಂದಿರಂತೆ ಸಂಬಂಧ ಹೊಂದಿದ್ದವರು. ವಯೋಸಹಜ ಕಾಯಿಲೆಯಿಂದ ಇಂದು ದ್ವಾರಕೀಶ್ ನಿಧನ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಜಾಫರ್ ಶರೀಫ್ ನಿಧನದ ಸಂದರ್ಭದಲ್ಲಿ ಮಾತನಾಡಿದ ಆಡಿಯೋ ಕೂಡ ಹರಿದಾಡುತ್ತಿದೆ.

Advertisement

 

ಕೇಂದ್ರ ಸಚಿವರಾಗಿದ್ದ ಜಾಫರ್ ಶರೀಫ್ ಕಳೆದ 5 ವರ್ಷಗಳ ಹಿಂದೆ ಅಂದರೆ 25‌ ನವೆಂಬರ್ 2018ರಲ್ಲಿ ನಿಧನ ಹೊಂದಿದ್ದರು. ಆಗ ಅವರ ವಯಸ್ಸು 85 ಆಗಿತ್ತು.  1993ರಲ್ಲಿ ಚಳ್ಳಕೆರೆಯಲ್ಲಿ ಜನಿಸಿದ್ದವರು ಜಾಫರ್ ಶರೀಫ್. ಕೇಂದ್ರ ರೈಲ್ವೆ ಸಚಿವರಾಗಿದ್ದರು, ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದವರು. ರಾಜ್ಯದ ರೈಲ್ವೆಯ ಗೇಜ್ ಮಾರ್ಪಾಡು ಸಾಧನೆಯಲ್ಲಿ ಇವರದ್ದು ಮಹತ್ವದ ಪಾತ್ರವಿದೆ. ಆದರೆ ಕಳೆದ ಐದು ವರ್ಷಗಳ ಹಿಂದೆ‌ ನಿಧನ ಹೊಂದಿದರು.

Advertisement

ಇನ್ನು ನಟ, ನಿರ್ದೇಶಕ ದ್ವಾರಕೀಶ್ ಅವರಿಗೂ ಜಾಫರ್ ಶರೀಫ್ ಅವರಿಗೂ ಗಟ್ಟಿಯಾದ ನಂಟೊಂದಿತ್ತು. ಅವರ ಸಾವಿನ ದಿನ ಮಾತನಾಡಿದ್ದ ದ್ವಾರಕೀಶ್, ನಂಗೆ ಗಾಡ್ ಫಾದರ್ ಅಂತ ಇದ್ದರೆ ಅದು ಜಾಫರ್ ಶರೀಫ್ ಮಾತ್ರ. ನಂಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ನನ್ನ ಹೆಂಡತಿಯೂ ಚಿತ್ರದುರ್ಗ, ಅವರು ಚಿತ್ರದುರ್ಗ‌ದವರು. ಮದ್ರಾಸ್ ನಲ್ಲಿದ್ದಾಗ ನಮ್ಮನ್ನ ನೋಡುವುದಕ್ಕೆ ಬರುತ್ತಾ ಇದ್ದರು. ಇಂದು ಈ ಸಾವಿನ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ' ಎಂದು ಕಣ್ಣೀರು ಹಾಕಿದ್ದರು. ಆದರೆ ಇಂದು ದ್ವಾರಕೀಶ್ ಕೂಡ ಪ್ರೀತಿ ಪಾತ್ರರನ್ನು ಬಿಟ್ಟು ಗೆಳೆಯನನ್ನು ಸೇರುವುದಕ್ಕೆ ಹೊರಟೆ ಹೋಗಿದ್ದಾರೆ.

Advertisement
Tags :
bangalorebengaluruchitradurgaDwarkeeshsuddionesuddione newsZafar Sharifಗಾಡ್ ಫಾದರ್ಚಿತ್ರದುರ್ಗಜಾಫರ್ ಶರೀಫ್ದ್ವಾರಕೀಶ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article