Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೀರಿನ ಅಸಮರ್ಪಕ ಬಳಕೆಯಿಂದ ಬರ | ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಿ

09:02 PM Feb 23, 2024 IST | suddionenews
Advertisement

ಚಿತ್ರದುರ್ಗ. ಫೆ.23:   ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಸಮಸ್ಯೆ ಹಾಗೂ ಬರ ಹೆಚ್ಚಾಗುತ್ತಿದೆ.  ಪ್ರತಿಯೊಬ್ಬರು ಜಲರಕ್ಷಕರಾಗಿ ಎಚ್ಚೆತ್ತುಕೊಂಡಾಗ ಮಾತ್ರ ಅಮೂಲ್ಯವಾದ ನೀರನ್ನು ಜೋಪಾನವಾಗಿ ಕಾಪಾಡಲು ಸಾಧ್ಯ ಎಂದು ಚಿತ್ರದುರ್ಗ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಎಂ.ರೇಣುಕಾ ಪ್ರಕಾಶ್ ತಿಳಿಸಿದರು.

Advertisement

 

ಇಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ಶುಕ್ರವಾರ ಜಿಯೋ ರೈನ್ ವಾಟರ್ ಬೋರ್ಡ್ ಮತ್ತು ಆಕಾಶವಾಣಿ ವತಿಯಿಂದ ನಡೆದ ಜಿಯೋ ರೈನ್ ವಾಟರ್ ಬೋರ್ಡ್ ಜಲ ರಕ್ಷಕರು ಪ್ರಾಯೋಜಿತ ಸರಣಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ನದಿ, ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ನೀರಿನ ಸಮಸ್ಯೆ ಸಾರ್ವತ್ರಿಕ ಸಮಸ್ಯೆಯಾಗಿದೆ. ಪ್ರತಿಯೊಬ್ಬರು ಜಲಸಂರಕ್ಷಣೆಗೆ ಒತ್ತು ನೀಡಬೇಕು. ಮಳೆ ನೀರು ಕೊಯ್ಲು ಮಾಡುವುದರಿಂದ ನೀರಿಗೆ ಬೇರೆಯವರ ಮೇಲೆ ಅವಲಂಬಿತರಾಗುವುದು ತಪ್ಪಲಿದೆ.  ಜಲ ರಕ್ಷಕ ಸರಣಿ ಕಾರ್ಯಕ್ರಮದಲ್ಲಿ ವಿಜೇತರಾದವರು ಮುಂದಿನ ದಿನಗಳಲ್ಲಿ ಜಲ ತಜ್ಞರು ಹಾಗೂ ಜಲರಕ್ಷಕರಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ನೀರಿಲ್ಲದ ಬದುಕು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನೀರಿಗಾಗಿ ದೇಶ ದೇಶಗಳ ನಡುವೆ ಯುದ್ದವಾದರೂ ಆಶ್ಚರ್ಯವಿಲ್ಲ. ಜನ-ಜಾನುವಾರುಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು  ಜಿಲ್ಲಾಡಳಿತದಿಂದ ಕ್ರಿಯಾ ಯೋಜನೆ ಸಿದ್ದವಾಗಿದೆ. ಪರಿಸರ ಕಾಡುಗಳ ನಾಶ. ಜಾಗತೀಕರಣದಿಂದ ನಗರೀಕರಣದೆಡೆಗೆ ಸಾಗುತ್ತಿರುವುದು ಕೂಡ ನೀರಿನ ಕೊರತೆಗೆ ಕಾರಣವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಜನಸಾಮಾನ್ಯರು ಕೈಜೋಡಿಸಬೇಕು.

Advertisement

ಭೂಮಿಯಿಂದ ನೀರನ್ನು ಮೇಲಕ್ಕೆತ್ತುವ ಕೆಲಸವಾಗುತ್ತಿದೆಯೇ ವಿನಃ ನೀರನ್ನು ಇಂಗಿಸುವ ಕಡೆ ಯಾರು ಗಮನ ಕೊಡದಿರುವುದು ಬೇಸರದ ಸಂಗತಿ ಎಂದು ವಿಷಾಧಿಸಿದರು.
ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ. ಪ್ರತಿ ಮನೆಗಳಲ್ಲಿಯೂ ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಉಪಾಯ ಕಂಡುಕೊಳ್ಳಬಹುದು ಎಂದು ಹೇಳಿದರು.

ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡಿ, ಆಕಾಶವಾಣಿ ಕಾರ್ಯಕ್ರಮದಲ್ಲಿ ನೀರಿನ ಮಿತ ಬಳಕೆ ಹಾಗೂ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮ ನೀಡಬೇಕಾದರೆ ಸಾಕಷ್ಟು ಸಿದ್ದತೆ ಮಾಡಿಕೊಳ್ಳಬೇಕು. ಚಿತ್ರದುರ್ಗ ಆಕಾಶವಾಣಿಗೆ ತನ್ನದೆ ಆದ ಇತಿಹಾಸವಿದೆ. ಇಲ್ಲಿ ನೀಡಿದ ಮೂರು ಕಾರ್ಯಕ್ರಮಗಳಿಂದ ವಿಭಿನ್ನವಾದ ಪಾಠ ಕಲಿತಿದ್ದೇನೆ. ಊಟಕ್ಕೆ ಸಮಸ್ಯೆಯಿಲ್ಲ. ಸಾಕಷ್ಟು ಆಹಾರ ಧಾನ್ಯಗಳಿವೆ. ಆದರೆ ನಮ್ಮ ಮುಂದಿರುವ ಸವಾಲೆಂದರೆ ಜಲ ರಕ್ಷಿಸುವುದು ಎನ್ನುವುದನ್ನು ಯಾರು ಮರೆಯಬಾರದು. ಮಳೆ ನೀರು ಕೊಯ್ಲು ಕುರಿತು ಮನೆ ಮನೆಗಳಲ್ಲಿ ಜಾಗೃತಿ ಮೂಡಬೇಕಿದೆ ಎಂದರು.

ಜಲರಕ್ಷಕ ಕಾರ್ಯಕ್ರಮ ನಿರೂಪಕರಾದ ದ್ಯಾಮಲಾಂಬ ಉಪಸ್ಥಿತರಿದ್ದರು. ಜಲರಕ್ಷಕರು ಆಕಾಶವಾಣಿ ಕಾರ್ಯಕ್ರಮ ಸರಣಿಯ ಸ್ಪರ್ಧೆಯಲ್ಲಿ ವಿಜೇತರಾದ ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನ ಸಂಗಪ್ಪ ತೇರದಾಳ್, ಚಿತ್ರದುರ್ಗ ಜಿಲ್ಲೆ ಚಳ್ಳೆಕೆರೆ ತಾಲ್ಲೂಕಿನ ಜುಂಜರಗುಂಟೆ ಗ್ರಾಮದ ಬಿ.ಶ್ರೇಯಸ್, ನರಸಿಂಹಸ್ವಾಮಿ, ಚಿತ್ರದುರ್ಗ ನಗರದ ಚಿಕ್ಕಪೇಟೆಯ ರೂಪ ಪಾಂಡುರಂಗರಾವ್, ಗೋನೂರು ಗ್ರಾಮದ ಉಷ ಎಂ.ಮಂಜಣ್ಣ, ಬಚ್ಚಬೋರನಹಟ್ಟಿಯ ಸಣ್ಣಬೋರಯ್ಯ, ನಗರದ ಕೆ.ಮೂಗಬಸಪ್ಪ, ಮೊಳಕಾಲ್ಮುರು ತಾಲ್ಲೂಕಿನ ಓಬಣ್ಣ, ಪಾಪಣ್ಣ, ಹಿರಿಯೂರು ತಾಲ್ಲೂಕಿನ ಗಿರೀಶ್, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಗ್ರಾಮದ ಸುಬ್ರಾಯ ಎಲ್.ಹೆಗ್ಡೆ ಇವರುಗಳಿಗೆ ಬಹುಮಾನ ವಿತರಿಸಲಾಯಿತು.

Advertisement
Tags :
bengaluruchitradurgadroughtimproper use of watersuddionesuddione newswater conservationಚಿತ್ರದುರ್ಗಜಲಸಂರಕ್ಷಣೆನೀರಿನ ಅಸಮರ್ಪಕಬಳಕೆಯಿಂದ ಬರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article