Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

06:59 PM Apr 26, 2024 IST | suddionenews
Advertisement

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ ಫೇಲ್ ಆಗುತ್ತಿದೆ. ಇನ್ನು ಕೆಲವೆಡೆ ಗ್ರಾಮಸ್ಥರೆ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಜನಪ್ರತಿನಿಧಿಗಳು ಎನಿಸಿಕೊಂಡವರು ಗೆದ್ದ ಮೇಲೆ ಐದು ವರ್ಷ ಜನರ ಕಡೆಗೆ, ಗ್ರಾಮದ ಕಡೆಗೆ ತಿರುಗಿ ನೋಡುವುದೇ ಇಲ್ಲ. ಹೀಗಾಗಿ ಮೂಲ ಸೌಕರ್ಯಕ್ಕೆ ಒದ್ದಾಡುತ್ತಿರುವ ಕೆಲ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕಾರ ಮಾಡಿದ್ದಾರೆ. ಅದರಲ್ಲಿ ಕೋಟೆನಾಡಿನ ಕಾಟನಾಯಕನಹಳ್ಳಿ ಕೂಡ ಒಂದು.

Advertisement

 

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ತುಂಬಿಸುವ ಯೋಜನೆಗೆ ಚಾಲನೆ‌ ನೀಡಿಲ್ಲ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು, ಚುನಾವಣೆ ಬಹಿಷ್ಕಾರ ಮಾಡಿ, ಮುಂಜಾನೆಯಿಂದ‌‌ ಒಬ್ಬನೇ ಒಬ್ಬ ಕೂಡ ಮತ ಹಾಕಲು ಬಂದಿರಲಿಲ್ಲ. ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಇದು ತಿಳಿಯುತ್ತಿದ್ದಂತೆ ಗ್ರಾಮದ ಜನರ ಮನವೊಲಿಸಲು ತಹಶೀಲ್ದಾರ್ ಓಡೋಡಿ ಬಂದಿದ್ದಾರೆ. ಕಡೆಗೂ ಸಂಧಾನ ಸಭೆ ಸಫಲವಾಗಿದ್ದು, ಗ್ರಾಮಸ್ಥರು ಮತದಾನಕ್ಕೆ ಒಪ್ಪಿದ್ದಾರೆ.

Advertisement

ಅಷ್ಟರಲ್ಲಾಗಲೇ ಸಂಜೆ 4.30. ಇನ್ನರ್ಧ ಗಂಡೆಯಲ್ಲಿ ಮತದಾನವೇ ಮುಗಿಯಬೇಕಾಗಿತ್ತು. ಗ್ರಾಮದ ಸರಕಾರಿ ಹಿರಿಯ ಪ್ರಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 263 ರಲ್ಲಿ ಘಟನೆ ನಡೆದಿದ್ದು, ಮತದಾನದ ಸಮಯ ಮುಕ್ತಾಯವಾಗುತ್ತಿದ್ದಂತೆ ಮತಗಟ್ಟೆಗೆ ಜನರ ದೌಡು ಬಂದಿದೆ. ಒಟ್ಟು 1322 ಮತದಾರರಿರುವ ಕಾಟನಾಯಕನಹಳ್ಳಿ ಗ್ರಾಮ ಇದಾಗಿದೆ. ಮುಂಜಾನೆಯಿಂದ ಚಲಾವಣೆಯಾದ ಮತಗಳು ಸುಮಾರು ಕೇವಲ 300. 4:30 ರ ಮತರ ಮತಗಟ್ಟೆಗೆ ಒಮ್ಮೆಲೇ ಆಗಮಿಸಿದ 300-400 ಮತದಾರರು ಮತ ಹಾಕಿದ್ದಾರೆ. ಕಡೆಗೂ ಜನರ ಮನಸ್ಸನ್ನು ಬದಲಾಯಿಸಿ ತಹಶಿಲ್ದಾರ್ ಮತ ಹಾಕುವಂತೆ ಮಾಡಿದ್ದಾರೆ.

Advertisement
Tags :
bengaluruboycotted votingchitradurgadrinking water problemsuddionesuddione newsಕುಡಿಯುವ ನೀರಿನ ಸಮಸ್ಯೆಚಿತ್ರದುರ್ಗಬೆಂಗಳೂರುಮತದಾನ ಬಹಿಷ್ಕರಸಂಜೆ ವೇಳೆಗೆ ಮತದಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article