Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕುಡಿಯುವ ನೀರಿನ ಸಮಸ್ಯೆ : ಪ್ರಚಾರಕ್ಕೆ ಬರುತ್ತಿದ್ದ ಸಚಿವ ಸುಧಾಕರ್ ಕಾರಿಗೆ ಮುತ್ತಿಗೆ

07:45 PM Apr 12, 2024 IST | suddionenews
Advertisement

ಹಿರಿಯೂರು : ಎಷ್ಟೋ ಹಳ್ಳಿಗಳಲ್ಲಿ ಈಗಲೂ ಮೂಲಭೂತ ಸೌಕರ್ಯಕ್ಕೆ ಕೊರತೆ ಇದೆ. ಆದರೆ ಜನಪ್ರತಿನಿಧಿಗಳು ಮಾತ್ರ ಅತ್ತಕಡೆ ಗಮನ ಹರಿಸುವುದೇ ಇಲ್ಲ. ಚುನಾವಣೆಯ ಹೊಸ್ತಿಲಲ್ಲಿ ಮಾತ್ರ ಜನರ ಮುಂದೆ ಬಂದು ಭರವಸೆಗಳನ್ನ ನೀಡಿ ಹೋಗುತ್ತಾರೆ. ಇದೀಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆಗೆ ತೆರಳಿದ ಸಂದರ್ಭದಲ್ಲಿ ಸಚುವ ಸುಧಾಕರ್ ಅವರಿಗೆ ದಿಂಡವರ ಗ್ರಾಮದ ಜನ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

Advertisement

 

ತಾಲೂಕಿನ ದಿಂಡವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆ ಸಮಸ್ಯೆಯನ್ನು ಬಗೆಹರಿಸದೆ ಈಗ ಚುನಾವಣೆಯ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ಮತಯಾಚನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಚಿವರು ಗ್ರಾಮದೊಳಗೆ ಬರುತ್ತಿದ್ದಂತೆಯೇ ಸಚಿವರ ಕಾರಿಗೆ ಗ್ರಾಮಸ್ಥರು ಕಾರಿಗೆ ಅಡ್ಡಲಾಗಿ ಮಲಗಿ ನೇರವಾಗಿ ವಾಪಾಸ್ ಕಳಿಸಿರುವ ಘಟನೆ ನಡೆದಿದೆ.

Advertisement

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಚಿವರು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗಷ್ಟೇ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ದಿಂಡವಾರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ನೀರು ಪೂರೈಕೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ ಸಚಿವ ಡಿ ಸುಧಾಕರ್ ಅವರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಎನ್‌ ಚಂದ್ರಪ್ಪ ಅವರ ಪರವಾಗಿ ಮತಯಾಚನೆ ಮಾಡಲು ಗ್ರಾಮಕ್ಕೆ ತೆರಳುತ್ತಿದ್ದಂತೆಯೇ ಗ್ರಾಮದ ಮಹಿಳೆಯರು, ಪುರುಷರು, ಮಕ್ಕಳು ಸಚಿವರ ಕಾರಿಗೆ ಅಡ್ಡ ಮಲಗಿ, ಮುತ್ತಿಗೆ ಹಾಕಿದ್ದಾರಲ್ಲದೆ, ಸಚಿವರಿಗೆ ಘೇರಾವ್ ಹಾಕಿ ವಾಪಸ್ ಕಳುಹಿಸಿದ್ದಾರೆ. ಸಚಿವರು ಕಾರಿನಿಂದ ಇಳಿದು ಮಾತನಾಡಲು ಗ್ರಾಮಸ್ಥರು ಅವಕಾಶ ಕೊಟ್ಟಿಲ್ಲ. ಪ್ರತಿಭಟನೆ ಕಾವು ರಂಗೇರುತ್ತಿದ್ದಂತೆಯೇ ಸಚಿವರು ಕಾರು ಇಳಿಯದೇ ಬಂದ ದಾರಿಗೆ ಸುಂಕ ಇಲ್ಲಂತೆ ವಾಪಸ್ ತೆರಳಿದ್ದಾರೆ.

Advertisement
Tags :
CampaigningD. SudhakarDrinking waterdrinking water problemhiriyurMinister sudhakarಕಾರಿಗೆ ಮುತ್ತಿಗೆಕುಡಿಯುವ ನೀರಿನ ಸಮಸ್ಯೆಪ್ರಚಾರಸಚಿವ ಸುಧಾಕರ್ಹಿರಿಯೂರು
Advertisement
Next Article