For the best experience, open
https://m.suddione.com
on your mobile browser.
Advertisement

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜ ಸುಧಾರಣೆಗಾಗಿ ಅನುಭವಿಸಿದ ನೋವನ್ನು ಎಲ್ಲೂ ಬಹಿರಂಗಪಡಿಸಲಿಲ್ಲ : ಸಿ.ಎನ್ ಮೋಹನ್ 

04:24 PM Apr 14, 2024 IST | suddionenews
ಡಾ ಬಿ ಆರ್  ಅಂಬೇಡ್ಕರ್ ಅವರು ಸಮಾಜ ಸುಧಾರಣೆಗಾಗಿ ಅನುಭವಿಸಿದ ನೋವನ್ನು ಎಲ್ಲೂ ಬಹಿರಂಗಪಡಿಸಲಿಲ್ಲ   ಸಿ ಎನ್ ಮೋಹನ್ 
Advertisement

ಸುದ್ದಿಒನ್, ಚಿತ್ರದುರ್ಗ, ಏ,14 : ಚಿಕ್ಕ ಕೆಲಸ ಮಾಡಿ ದೊಡ್ಡ ಪ್ರಶಂಸೆ ಪಡೆಯುವ ಈ ಹೊತ್ತಿನಲ್ಲಿ, ಅಗಾಧವಾಗಿ ಕೆಲಸ ಮಾಡಿ,ಅಪರಿಮಿತ ನೋವನ್ನು ಅನುಭವಿಸಿದರೂ ಅದನ್ನೆಂದು ಬಹಿರಂಗವಾಗಿ ಹೇಳಿಕೊಳ್ಳದ ಘನ ವ್ಯಕ್ತಿತ್ವ ಡಾ.ಅಂಬೇಡ್ಕರ್ ಅವರದಾಗಿತ್ತು ಎಂದು ಎಸ್ ಜೆ ಎಂ ಪಾಲಿಟೆಕ್ನಿಕ್ ನ ಅಧೀಕ್ಷಕ ಸಿ.ಎನ್.ಮೋಹನ್ ಅವರು ಸ್ಮರಿಸಿದರು.

Advertisement

ನಗರದ ಎಸ್ ಜೆ ಎಂ ಪಾಲಿಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನದ ಅಂಗವಾಗಿ ಅವರ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತಾಡಿದ ಅವರು ಮಹಿಳೆಯರ ಹೆರಿಗೆ ರಜಾವನ್ನು ಆರು ತಿಂಗಳ ನಿಗದಿ, ಕಾರ್ಮಿಕರಿಗಿದ್ದ ಹನ್ನೆರಡು ಗಂಟೆಗಳ ಕೆಲಸವನ್ನು ಎಂಟು ತಾಸಿಗೆ ಕಡಿತಗೊಳಿಸಿದ್ದು ಸೇರಿದಂತೆ ಅನೇಕ ಜನಕಲ್ಯಾಣ ಕಾರ್ಯಕ್ರಮ ಮಾಡಿದ ಶ್ರೇಯಸ್ಸು ಅವರದಾಗಿತ್ತು ಎಂದು ಹೇಳಿದರು.

ಕೆಳ ವರ್ಗದಲ್ಲಿ ಹುಟ್ಟಿ ಮೇಲ್ ಸ್ಥರದ ಕೆಲಸಗಳನ್ನು ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ಮೊಟ್ಟಮೊದಲಿಗರು ಎಂಬಿತ್ಯಾದಿ ವಿವರ ಜತೆಗೆ ಕುಟುಂಬದ ಹಿನ್ನೆಲೆಯನ್ನು ಗ್ರಂಥಪಾಲಕ ವೀರಯ್ಯ.ಎಂ ಅವರು ಹಂಚಿಕೊಂಡರು.

Advertisement

ಜಾತಿ ಮತ ಪಂಥ ಭೇದವಿಲ್ಲದ,ಲಿಂಗ ತಾರತಮ್ಯವಿರದ ಅವರ ಕನಸಿನ ಕಲ್ಯಾಣ ರಾಜ್ಯ ಸ್ಥಾಪನೆಗೆ ಶ್ರಮಿಸಿದ ಅವರ ಕಾಳಜಿ, ಹಾಗೆ ಅವರು ಮಹಿಳೆಯರು ಶಿಕ್ಷಣ ಹೊಂದಿ ಸ್ವಾವಲಂಬನೆಯಾಗಬೇಕೆಂಬ ಹಂಬಲ ಪ್ರಶ್ನಾತೀತ. ಹೀಗಾಗಿ ಅವರು ಎಲ್ಲ ಕಾಲಕ್ಕೂ ಸ್ಮರಣೆಗೆ ಭಾಜನರು ಎಂದು ಕಾಲೇಜಿನ ಎನ್. ಟಿ.ಲಿಂಗರಾಜುಅಭಿಪ್ರಾಯ ಪಟ್ಟರು.

ಪೂಜೆ ಎಂಬ ಯಾಂತ್ರಿಕ  ಶಿಷ್ಟಾಚಾರವನ್ನ ಪಕ್ಕಕ್ಕಿರಿಸಿ ಅವರು ಪ್ರತಿಪಾದಿಸಿದ  ಸರ್ವ ಸಮಾನತೆಯ ಪ್ರಜಾಪ್ರಭುತ್ವವಾದಿ ಸಂವಿಧಾನ ಅನುಸರಿಸಿದರೆ ಅದು ಎಲ್ಲಕ್ಕಿಂತ ದೊಡ್ಡದು ಎಂದು ರುದ್ರಮೂರ್ತಿ ಎಂ. ಜೆ ಅವರು ಹೇಳಿದರು.

ಜೆಎಂಐಟಿ ಕಛೇರಿ ಸಿಬ್ಬಂದಿ ನಿಟುವಳ್ಳಿಮಾಂತೇಶ್ ಅವರು ಶಸ್ತ್ರಾಸ್ರ್ತಕ್ಕಿಂತ ನಾವು ಅರಿವು ಮತ್ತು ಜ್ಞಾನ ನೀಡಬೇಕು ಎಂದು ಹೇಳಿದವರು ನಮ್ಮ ಬಾಬಾಸಾಹೇರು. ಅವನ್ನ ಪಡೆದರೆ ಯಾವುದೇ ಅವಘಡಗಳಾಗುವುದಿಲ್ಲ ಎಂದು ಹೇಳಿದ್ದಾರೆ ಎಂದರು.

ಎಸ್ ಜೆ ಎಂ ಐಟಿಐ ಕಾಲೇಜಿನ ಸಹ ತರಬೇತುದಾರ ಚಲ್ಮೇಶ್ ಮಾತನಾಡಿ ಬಹುತೇಕ ಜಾಗತಿಕ ಪದವಿ ಪಡೆದ ಪ್ರಪಂಚದ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಅವರೊಬ್ಬರೇ.ಆ ಕಾರಣಕ್ಕೆ ಸಂವಿಧಾನ ರಚನೆಯ ಮುಖ್ಯಸ್ಥರಾಗಿ ಅವರ ಆಯ್ಕೆಗೆ ಕಾರಣ ಎಂದು ಹೇಳಿದ ಅವರು ಸಾಧಕರ ಸಾಧನೆಯೇ ಮುಖ್ಯವಾಗಬೇಕೆ ಹೊರತು ಹಿನ್ನೆಲೆಯಲ್ಲಿ ಎಂದರು.

ಸಹ ಬೋಧಕರಾದ ಕೆ .ಸುರೇಶ್ ಮಾತನಾಡಿ ಯುವ ಜನಾಂಗ ಇಂದು  ಅಂಬೇಡ್ಕರ್ ಅವರ ವ್ಯಕ್ತಿತ್ವ ಅರಿಯಬೇಕಾದ ಅನಿವಾರ್ಯವಿದೆ ಎಂದರು.ಈ ಸಂದರ್ಭದಲ್ಲಿ ವೈಭವ್ ಮತ್ತಿತರರು ಪಾಲ್ಗೊಂಡಿದ್ದರು.

Tags :
Advertisement