Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವರದಕ್ಷಿಣೆ ಕಿರುಕುಳ : ಆರೋಪಿಗೆ 5 ವರ್ಷ ಶಿಕ್ಷೆ ವಿಧಿಸಿ ಚಿತ್ರದುರ್ಗ ಕೋರ್ಟ್ ತೀರ್ಪು

04:32 PM Mar 19, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.19 : ವರದಕ್ಷಿಣೆ ಕಿರುಕುಳ ನೀಡಿದ ಆರೋಪಿಗೆ ನ್ಯಾಯಾಲಯ 5 ವರ್ಷಗಳ ಸಾದಾ ಸಜೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿದೆ.

ಚಿತ್ರದುರ್ಗ ನಗರದ ಸೈಯದ್ ಸೈಪುಲ್ಲಾ ಶಿಕ್ಷೆಗೊಳಗಾವವನು. ಸುಮಾರು 7 ವರ್ಷಗಳ ಹಿಂದೆ ಹೊನ್ನಾಳಿ ತಾಲೂಕಿನ ಸಾನ್ವೆಹಳ್ಳಿ ಗ್ರಾಮದ ಅಪ್ಜಪರ್ವಿನ್ ಅವರ ವಿವಾಹವು ದಿನಾಂಕ 15-12-2016 ರಂದು ದಾವಣಗೆರೆಯ ರಾಯಲ್ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಪದ್ದತಿಯಂತೆ ನಡೆದಿದ್ದು, ಮದುವೆ ಮಾತುಕತೆ ಕಾಲದಲ್ಲಿ ವರದಕ್ಷಿಣೆಯಾಗಿ ರೂ. 5,00,000/- ಗಳ ಬೇಡಿಕೆ ಇಟ್ಟಿದ್ದು, ಅದಕ್ಕೆ ಅಪ್ಜಪರ್ವಿನ್ ಇವರ ತಮ್ಮ ಬ್ಯಾಂಕ್ ಖಾತೆಯಿಂದ ರೂ 4,50,000/- ಗಳನ್ನು ವರ್ಗಾವಣೆ ಮಾಡಿರುತ್ತಾರೆ. ಮದುವೆಯ ನಂತರ ಉಳಿದ 50,000/- ಹಣವನ್ನು ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ದಿನಾಂಕ: 19-08-2019 ರಂದು ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ಪಟ್ಟಿರುತ್ತಾನೆ.

Advertisement

ಈ ಸಂಬಂಧವಾಗಿ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಅಪ್ಜಪರ್ವಿನ್ ತನ್ನ ಪತಿಯ ವಿರುದ್ಧ ದೂರು ನೀಡಿರುತ್ತಾರೆ. ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ. ಗೀತಾ ಅವರು ಸೈಯದ್ ಸೈಫುಲ್ಲಾ ಮದುವೆ ಸಂದರ್ಭದಲ್ಲಿ ಅಪ್ಜಪರ್ವಿನ್ ಅವರಿಂದ ರೂ. 4,50,000/- ಹಣವನ್ನು ವರದಕ್ಷಿಣೆಯಾಗಿ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ವರದಕ್ಷಿಣೆ ನಿಷೇಧ ಕಾಯ್ದೆಯನ್ವಯ 5 ವರ್ಷಗಳ ಸಾದಾ ಸಜೆ ಹಾಗೂ ರೂ. 10,000/- ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಅಷ್ಟೇ ಅಲ್ಲದೇ ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ಪಡೆದಿದ್ದ  ರೂ. 4,50,000/- ಗಳನ್ನು ಅಪ್ಜಪರ್ವಿನ್ ಅವರಿಗೆ ವಾಪಸು ನೀಡುವಂತೆ ಆದೇಶ ಮಾಡಿರುತ್ತಾರೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಿ.ಗಣೇಶ ನಾಯ್ಕ ಇವರು ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.

ಬಿ.ಗಣೇಶ ನಾಯ್ಕ ಅವರ ಫೋನ್ ನಂಬರ್ : 9972977047

Advertisement
Tags :
Accusedbengaluruchitradurgachitradurga courtcourt verdictdowry harassmentSentencedsuddionesuddione newsyearsಆರೋಪಿಕೋರ್ಟ್ಚಿತ್ರದುರ್ಗತೀರ್ಪುಬೆಂಗಳೂರುವರದಕ್ಷಿಣೆ ಕಿರುಕುಳವರ್ಷಶಿಕ್ಷೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article