Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೊಲೀಸರ ಭಯಕ್ಕೋಸ್ಕರ ಹೆಲ್ಮೆಟ್ ಧರಿಸ್ಬೇಡಿ, ಪಿಎಸ್ಐ ಬಾಹುಬಲಿ ಪಡನಾಡ

07:28 PM Mar 01, 2024 IST | suddionenews
Advertisement

 

Advertisement

ಸುದ್ದಿಒನ್, ಹಿರಿಯೂರು, ಮಾರ್ಚ್. 01 : ಪೊಲೀಸರ ಭಯಕ್ಕೋಸ್ಕರ ಹೆಲ್ಮೆಟ್ ಧರಿಸಬೇಡಿ, ಬದಲಿಗೆ ತಮ್ಮನ್ನು ನಂಬಿಕೊಂಡು ಬದುಕುತ್ತಿರುವ ಕುಟುಂಬದ ಸದಸ್ಯರ ಜೀವ ಉಳಿಸಲು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಪಡನಾಡ ಹೇಳಿದರು.

ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಂಗೇನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬೈಕ್ ಸವಾರರನ್ನು ಕುರಿತು
ಮಾತನಾಡಿದರು.

Advertisement

ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದಲ್ಲಿ 500 ರೂಪಾಯಿ ದಂಡ ಕಟ್ಟುವುದು ಅಥವಾ ರಾಜಕಾರಣಿಗಳಿಂದ ಪೋನ್ ಮಾಡಿಸಿ ಪೋಲಿಸರಿಂದ ತಪ್ಪಿಸಿಕೊಳ್ಳುವುದು ಮುಖ್ಯವಲ್ಲ, ಬದಲಿಗೆ ತಮ್ಮ ಪ್ರಾಣ ಉಳಿಯುವುದು ಬಹುಮುಖ್ಯವಾಗಿರುತ್ತದೆ. ಜೀವ ಉಳಿದರೆ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಬ್ಬಂದಿ ನಾಗರಾಜ್, ನಿಂಗಣ್ಣ,
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರಮೂರ್ತಿ,‌ರಮೇಶ್, ವಿನೋದ್, ರಮೇಶ್, ಬೈಕ್ ಸವಾರು ಹಾಗೂ ಗ್ರಾಮಸ್ಥರು ಇದ್ದರು.

Advertisement
Tags :
bengaluruchitradurgahelmethiriyurupolicePsisuddionesuddione newsಚಿತ್ರದುರ್ಗಪಿಎಸ್ಐ ಬಾಹುಬಲಿ ಪಡನಾಡಪೊಲೀಸರುಬೆಂಗಳೂರುಭಯಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರುಹೆಲ್ಮೆಟ್
Advertisement
Next Article