Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೌಢ್ಯ ಕಂದಾಚಾರಗಳಿಗೆ ಮಕ್ಕಳ ಬಾಲ್ಯ ಬಲಿ ಕೊಡದಿರಿ : ಸಿಡಿಪಿಓ ಸುಧಾ

05:53 PM Aug 29, 2024 IST | suddionenews
Advertisement

 

Advertisement

ಚಿತ್ರದುರ್ಗ : ಆಗಸ್ಟ್.29: ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇನ್ನೂ ಮೌಢ್ಯ ಹಾಗೂ ಕಂದಾಚಾರಗಳು ಇರುವುದು ಬೇಸರದ ಸಂಗತಿಯಾಗಿದೆ. ಪೋಷಕರು ಇಂತಹ ಮೌಢ್ಯ ಹಾಗೂ ಕಂದಾಚಾರಗಳ ಪ್ರಭಾವಕ್ಕೆ ಒಳಗಾಗಿ ಬಾಲ್ಯ ವಿವಾಹ ಮಾಡಬಾರದು. ಮಕ್ಕಳ ಬಾಲ್ಯ ಬಲಿ ಕೊಡಬಾರದು ಎಂದು ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಹೇಳಿದರು.

ಗುರುವಾರ ಹಿರೇಗುಂಟನೂರು ಗ್ರಾಮದ ಹುಣಸೇಕಟ್ಟೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಹಾಗೂ ಭರಮಸಾಗರ ಪೊಲೀಸ್ ಠಾಣೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತ ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಗೊಲ್ಲರಹಟ್ಟಿಯಲ್ಲಿ ಅನಕ್ಷರತೆ ಪರಿಣಾಮ ಮಹಿಳೆಯರ ಸಾಮಾಜಿಕ ಸ್ಥಾನಮಾನ ಕಡಿಮೆಯಿದೆ. ಹೆಣ್ಣು ಮಕ್ಕಳು ಋತುಮತಿಯಾದರೆ, ಹೆರಿಗೆಯಾದರೆ ಇಂದಿಗೂ ಗ್ರಾಮದ ಹೊರಗಡೆ ಇಡುವ ಅಮಾನವೀಯ ಪದ್ದತಿ ಇರುವುದು ಖೇದಕರ. ಇದರೊಂದಿಗೆ ದಿನೇ ದಿನೇ ಹೆಚ್ಚುತ್ತಿರುವ ಬಾಲ್ಯ ವಿವಾಹ ಮತ್ತು ಬಾಲ ತಾಯಂದಿರ ಪ್ರಕರಣಗಳ ಕಳವಳ ಉಂಟು ಮಾಡುತ್ತಿವೆ ಎಂದರು.

ಭರಮಸಾಗರ ಪೊಲೀಸ್ ವೃತ್ತನಿರೀಕ್ಷಕ ಮುತ್ತುರಾಜ್ ಮಾತನಾಡಿ ಆಧುನಿಕ ಸಮಾಜದಲ್ಲೂ ಗೊಲ್ಲರಹಟ್ಟಿಗಳಲ್ಲಿ ಮೌಢ್ಯಾಚರಣೆಗಳು, ಅನಿಷ್ಠ ಪದ್ದತಿಗಳು, ಗೊಡ್ಡು ಸಂಪ್ರದಾಯಗಳ ಜೀವಂತವಾಗಿವೆ. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾದವಾಗಿದೆ. ಬಾಲ್ಯ ವಿವಾಹ ಮಾಡುವ ಪೋಷಕರು ಹಾಗೂ ಸಂಬಂಧಿಗಳ ವಿರುದ್ದವೂ ಪ್ರಕರಣ ದಾಖಲಿಸಲಾಗುವುದು. ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಯ ಪೊಕ್ಸೋ ಕಾಯ್ದೆ ಜಾರಿ ಮಾಡಲಾಗಿದೆ ಎಂದರು.

ಲಿಂಗತಜ್ಞೆ ಗೀತಾ.ಡಿ ಮಾತನಾಡಿ ಹದಿಹರೆಯದ ಮಕ್ಕಳು ಮದುವೆಯಾದರೆ ಆಗುವಂತಹ ಅನಾನುಕೂಲಗಳು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಬಾಲ್ಯ ವಿವಾಹ ಹಾಗೂ ದೌರ್ಜನ್ಯ ತಡೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಪೋಲಿಸ್ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವಂತೆ ಮಾಹಿತಿ ನೀಡಿದರು.

ಜಿಲ್ಲಾ ಸಂಯೋಜಕ ಚೇತನ್ ರವರು ಬಾಲ್ಯ ವಿವಾಹ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಧಮ್ಮ, ಪಿಡಿಓ ವನಜಾಕ್ಷಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಹೈಮಾವತಿ, ಗ್ರಾ.ಪಂ.ಸದಸ್ಯ ಸಿದ್ದೇಶ್, ಮಾಜಿ ತಾ.ಪಂ ಸದಸ್ಯೆ ಸುರೇಶ್, ವೃತ್ತ ಮೇಲ್ವಿಚಾರಕಿ ವಿನೋದ, ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Tags :
bengaluruCDPO Sudhachildhoodchildrenchitradurgasacrificespoilstupiditysuddionesuddione newsಕಂದಾಚಾರಚಿತ್ರದುರ್ಗಬಾಲ್ಯಬೆಂಗಳೂರುಮಕ್ಕಳುಮೌಢ್ಯಸಿಡಿಪಿಓ ಸುಧಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article