Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಏಪ್ರಿಲ್ 8 ರಂದು ಸಂಪೂರ್ಣ ಸೂರ್ಯಗ್ರಹಣ ಭಯ ಬೇಡ : ಎಚ್.ಎಸ್.ಟಿ.ಸ್ವಾಮಿ

08:35 PM Apr 06, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏ. 06 :  ಏಪ್ರಿಲ್ 8 ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣ ಜನರಲ್ಲಿ ಭಯ, ಆತಂಕ ಮೂಡಿಸಿದೆ. ವೈಜ್ಞಾನಿಕವಾಗಿ ಗ್ರಹಣವು ಬಾಹ್ಯಾಕಾಶದಲ್ಲಿ ನಡೆಯುವ ನೆರಳು ಬೆಳಕಿನ ಆಟ. ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ಸುತ್ತುವಾಗ ಈ ಮೂರು ಆಕಾಶಕಾಯಗಳು ಒಂದೇ ನೇರದಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತವೆ.

Advertisement

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣಗಳು ಸಂಭವಿಸುತ್ತವೆ. ಏಪ್ರಿಲ್ 8 ರಂದು ಅಮಾವಾಸ್ಯೆ ಯಂದು ನಡೆಯಲಿರುವ ಈ ಗ್ರಹಣವು ನಮ್ಮ ಭಾರತದಲ್ಲಿ  ಗೋಚರಿಸುವುದಿಲ್ಲ.

ಕೇವಲ 8 ನಿಮಿಷಗಳ ಕಾಲ ಮಧ್ಯಾಹ್ನದ ಸಮಯದಲ್ಲಿ ಅಂದರೆ ಭಾರತೀಯ ಕಾಲಮಾನ ರಾತ್ರಿ 9.20 ರಿಂದ 1.25 ರವರೆಗೆ. ಅಲ್ಲಿ ಮದ್ಯಾಹ್ನ ಕತ್ತಲು ಆವರಿಸುವ
ಈ-ಸಂಪೂರ್ಣ ಸೂರ್ಯಗ್ರಹಣವನ್ನು ನೋಡಲು ಜನ ಕಾತರರಾಗಿದ್ದಾರೆ. ಇದು ಉತ್ತರ ಅಮೆರಿಕಾ, ಕೆನಡಾ, ಮೆಕ್ಸಿಕೊ ಮುಂತಾದ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಇದರಿಂದ ಯಾವುದೇ ರೀತಿಯ ಆತಂಕ, ಭಯ ಬೇಡ. ಗ್ರಹಣದ ಬಗ್ಗೆ ವೈಜ್ಞಾನಿಕ ಮನೋಭಾವದ ಅಗತ್ಯತೆ ಇದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಎಚ್.ಎಸ್.ಟಿ.ಸ್ವಾಮಿ
ಹವ್ಯಾಸಿ ಖಗೋಳ ವೀಕ್ಷಕ,
ಚಿತ್ರದುರ್ಗ
ಮೊ : 94485 65534

Advertisement
Tags :
bengaluruchitradurgaH.S.T.SwamiSolar Eclipsesuddionesuddione newsಎಚ್.ಎಸ್.ಟಿ.ಸ್ವಾಮಿಚಿತ್ರದುರ್ಗಬೆಂಗಳೂರುಭಯ ಬೇಡಸಂಪೂರ್ಣ ಸೂರ್ಯಗ್ರಹಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article