ಗರುಡ ಪಕ್ಷಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು
ಹಿರಿಯೂರು : ಮನುಷ್ಯತ್ವವನ್ನೇ ಮರೆತ ಜಗದಲ್ಲಿ ಅಲ್ಲೊಂದು ಇಲ್ಲೊಂದು ಮಾನವೀಯ ಗುಣಗಳು ಆಗಾಗ ಕಾಣಿಸುತ್ತವೆ. ಅದರಲ್ಲಿ ಇದೀಗ ಹಿರಿಯೂರಿನಲ್ಲಿ ಪಶು ವೈದ್ಯರೊಬ್ಬರು ಗರುಡ ವಿಚಾರದಲ್ಲಿ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಗರುಡ, ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿತ್ತು. ಆ ಪಕ್ಷಿಗೆ ಪಶು ವೈದ್ಯಾಕಾರಿಗಳು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ನಗರದ ಉದಯ್ ಹೋಟೆಲ್ ಪಕ್ಕದಲ್ಲಿ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಗರುಡ ಪಕ್ಷಿಯು ಹಾರಾಟ ನಡಸದೇ ಕುಂತಲ್ಲೇ ಕುಳಿತು ಸಮಸ್ಯೆಯಿಂದ ಬಳಲುತ್ತಿತ್ತು. ಇದನ್ನು ಗಮನಿಸಿದ ನಾಗರೀಕರು ಸಂಬಂಧಪಟ್ಟ ಪಶುವೈದ್ಯಾಕಾರಿ ಡಾ.ಹುಸೇನ್ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ವೈದ್ಯರು ಸಿಬ್ಬಂದಿಗಳನ್ನು ಕಳಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ಸ್ಥಳೀಯರು ಅರಣ್ಯಾಕಾರಿಗಳ ಗಮನಕ್ಕೆ ತಂದಾಗ, ಸ್ಥಳಕ್ಕಾಗಮಿಸಿ ಗರುಡ ಪಕ್ಷಿಯನ್ನು ತೆರೆದ ಬಾಕ್ಸ್ ನಲಆರೈಕೆಗೆ ಕೊಂಡೊಯ್ದ ಘಟನೆ ನಡೆದಿದೆ. ಅಧಿಕಾರಿಗಳ ಮಾನವಿಯತೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗರುಡ ವಿಷ್ಣುವಿನ ವಾಹನ, ಜೊತೆಗೆ ದೇವರ ಸಮಾನ, ನಾವು ಅದನ್ನು ನೋಡಿದರೆ ಕೈ ಮುಗಿಯುತ್ತವೆ. ಹೆಚ್.ಡಿ. ಪುರದ ಶ್ರೀ ರಂಗನಾಥಸ್ವಾಮಿ ರಥೋತ್ಸವ ಸಂಧರ್ಭದಲ್ಲಿ ಗರುಡ ಪ್ರದಕ್ಷಿಣೆ ಹಾಕಿ ಬಳಿಕ ರಥೋತ್ಸವ ಜರುಗುವ ಉದಾಹರಣೆ ಗಮನಿಸಬಹುದು. ಸಮಸ್ಯೆಯಿಂದ ಬಳಲುತ್ತಿದ್ದ ಗರುಡ ಪಕ್ಷಿಗೆ ವೈಧ್ಯರು ಚಿಕಿತ್ಸೆ ನೀಡಿದರೇ, ಅರಣ್ಯಾಧಿಕಾರಿಗಳು ಆರೈಕೆ ಮಾಡುವ ಮೂಲಕ ಮಾನವೀಯತೆ ತೋರಿದ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾದುದು. ಇಂತಹ ಕಾರ್ಯದಿಂದ ಮನುಷ್ಯ ಮತ್ತು ಪಕ್ಷಿಗಳ ನಡುವೆ ಸಂಬಂಧ ವೃದ್ಧಿಸುತ್ತದೆ.