For the best experience, open
https://m.suddione.com
on your mobile browser.
Advertisement

ನಾನು ಬೇಕೋ.. ಬಿಜೆಪಿ ಅಭ್ಯರ್ಥಿ ಬೇಕೋ : ಕಿಲೋ ಮೀಟರ್ ಲೆಕ್ಕ ಹೇಳಿ ಮತದಾರರಿಗೆ ಪ್ರಶ್ನಿಸಿದ ಬಿ ಎನ್ ಚಂದ್ರಪ್ಪ...!

07:12 PM Apr 02, 2024 IST | suddionenews
ನಾನು ಬೇಕೋ   ಬಿಜೆಪಿ ಅಭ್ಯರ್ಥಿ ಬೇಕೋ   ಕಿಲೋ ಮೀಟರ್ ಲೆಕ್ಕ ಹೇಳಿ ಮತದಾರರಿಗೆ ಪ್ರಶ್ನಿಸಿದ ಬಿ ಎನ್ ಚಂದ್ರಪ್ಪ
Advertisement

ಸುದ್ದಿಒನ್, ಹಿರಿಯೂರು, ಏಪ್ರಿಲ್. 02 : ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಆರಂಭವಾಗಿದೆ. ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಬಿ. ಎನ್. ಚಂದ್ರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಬಿಜೆಪಿ ಅಭ್ಯರ್ಥಿ ಇರುವ ಕಿಲೋ ಮೀಟರ್ ಹೇಳಿ, ಮತವನ್ನು ಯಾರಿಗೆ ಹಾಕಬೇಕೆಂಬುದನ್ನು ಜನರ ನಿರ್ಧಾರಕ್ಕೆ ಬಿಟ್ಟಿದ್ದಾರೆ.

Advertisement

ನನ್ನನ್ನು ಮೂಡಿಗೆರೆ ಚಂದ್ರಪ್ಪ ಎನ್ನುತ್ತಿದ್ದಾರೆ. ನಾನು ಹೊಸದುರ್ಗಕ್ಕೆ ಹೊಂದಿಕೊಂಡಿರುವ ಅಜ್ಜಂಪುರ ತಾಲ್ಲೂಕಿನವನು. ಭದ್ರಾ ಮೇಲ್ದಂಡೆ ಯೋಜನೆಯ ಕೆಳಭಾಗದ ಊರಿನಲ್ಲಿ ಹುಟ್ಟಿದವನು. ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಆಕಸ್ಮಿಕ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ರಾಜಕೀಯ ಬದುಕು ಆರಂಭಿಸಿದ್ದ ಪ್ರದೇಶದ ಭಾಷೆ ಬೇರೆ ಇಲ್ಲಿನ ಭಾಷೆ ಬೇರೆ. ಇಲ್ಲಿನ ಭಾಷೆ ಅವರಿಗೆ ಅರ್ಥವಾಗುವುದಿಲ್ಲ. ಅವರಿಗೆ ಸಂಸದರಾಗುವ ಅರ್ಹತೆ ಇರಬಹುದು. ಆದರೆ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳ ಪರಿಚಯ ಬೇಕಲ್ಲವೇ ಎಂದು ಚಂದ್ರಪ್ಪ ಪ್ರಶ್ನಿಸಿದರು.

100 ಕಿ.ಮೀ. ದೂರ ಇರುವ ಅಜ್ಜಂಪುರ ತಾಲ್ಲೂಕಿನ ನಾನು ಬೇಕೋ ಅಥವಾ 500 ಕಿಲೋ ಮೀಟರ್ ದೂರದಿಂದ ಬಂದು ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬೇಕೋ? ಎಂಬುದನ್ನು ಮತದಾರರು ನಿರ್ಧರಿಸಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು.

Advertisement

ನಾನು ಹಿಂದಿನ ಹತ್ತು ವರ್ಷಗಳಿಂದ ನಿಮ್ಮ ಮನೆಯ ಮಗನಂತೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಬದುಕಿನಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಭ್ರಷ್ಟಾಚಾರ, ಜಾತಿತಾರತಮ್ಯ ಆರೋಪಗಳಿಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದೇನೆ.

ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿರೋಧ ಪಕ್ಷದವರಿಗೆ ನಮ್ಮ ಶಕ್ತಿ ತೋರಿಸಬೇಕು ಎಂದು ಚಂದ್ರಪ್ಪ ಮನವಿ ಮಾಡಿದರು.

Tags :
Advertisement