Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಳಿ ಇರುವ ಆಸ್ತಿ ಎಷ್ಟು ಕೋಟಿ ಗೊತ್ತಾ..?

12:31 AM Apr 05, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್.  05  : ಲೋಕಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾಗಿತ್ತು. ಹೀಗಾಗಿ ನಾಮಪತ್ರ ಸಲ್ಲಿಕೆ ಮಾಡದವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡೆವಿಟ್ ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಮಾಡಿರುತ್ತಾರೆ. ಇಂದು ಚಿತ್ರದುರ್ಗದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರೂ ನಾಮಿನೇಷನ್ ಫೈಲ್ ಮಾಡಿದ್ದಾರೆ.

Advertisement

ಚಿತ್ರದುರ್ಗ ಎನ್.ಡಿ.ಎ ಅಭ್ಯರ್ಥಿ ಗೋವಿಂದ ಕಾರಜೋಳ ಆಸ್ತಿ ವಿವರ ಘೋಷಣೆಯಾಗಿದ್ದು, ಒಟ್ಟು ಆಸ್ತಿಯ ಮೌಲ್ಯ 2.96 ಕೋಟಿ ಇದೆ. ಗೋವಿಂದ ಕಾರಜೋಳ ಬಳಿ ಸದ್ಯ ಇರುವ ಹಣ 9 ಲಕ್ಷ ಹಣವಿದೆ. ಒಟ್ಟು ಚರಾಸ್ತಿ 1.26 ಕೋಟಿ, ಸ್ಥಿರಾಸ್ತಿ 1.62 ಕೋಟಿ ಇದೆ. ಕಾರಜೋಳ ಬಳಿ ವಾಹನ, ಚಿನ್ನ, ಬೆಳ್ಳಿ ಇಲ್ಲ , ಸಾಲವೂ ಇಲ್ಲವಂತೆ.

ಇನ್ನು ಅಭ್ಯರ್ಥಿ ಗೋವಿಂದ ಕಾರಜೋಳ ಮೇಲೆ ಅಪರಾಧ ಪ್ರಕರಣಗಳಿಲ್ಲ. ಪತ್ನಿ ಶಾಂತಾದೇವಿ ಕಾರಜೋಳರ
ಒಟ್ಟು ಆಸ್ತಿಯ ಮೌಲ್ಯ 1.46 ಕೋಟಿ ಹೊಂದಿದ್ದು, ಪತ್ನಿ ಬಳಿ ಇರುವ ಹಣ 2.5 ಲಕ್ಷ ಹೊಂದಿದ್ದಾರೆ. ಒಟ್ಟು ಚರಾಸ್ತಿ 79.13 ಲಕ್ಷ, ಸ್ಥಿರಾಸ್ತಿ 65 ಲಕ್ಷವಿದ್ದು, ಗೋವಿಂದ ಕಾರಜೋಳ ಶಾಂತದೆರವಿ ಹೆಸರಲ್ಲಿ ವಾಹನ ಇಲ್ಲ. ಪತ್ನಿ ಬಳಿ 1 ಕೆ.ಜಿ. 50 ಗ್ರಾಂ, ಚಿನ್ನ, 6 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಶಾಂತಾದೇವಿ ಕಾರಜೋಳ ಹೆಸರಲ್ಲಿ ಸಾಲ ಇಲ್ಲ.

Advertisement

Advertisement
Tags :
bengalurubjp candidatechitradurgaFormer Minister Govinda KarajolaLok Sabha constituencypropertysuddionesuddione newsಗೋವಿಂದ ಕಾರಜೋಳಚಿತ್ರದುರ್ಗಬೆಂಗಳೂರುಮೈತ್ರಿ ಅಭ್ಯರ್ಥಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article