Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಡಿ : ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಕೆ

06:17 PM Apr 29, 2024 IST | suddionenews
Advertisement

ಚಿತ್ರದುರ್ಗ. ಏ.29: ಚಿತ್ರದುರ್ಗ ತಾಲ್ಲೂಕಿನ ಹಲವು ಕಡೆ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸರ್ಕಾರದಿಂದ ಸೂಕ್ತ ಮಾನ್ಯತೆ ಪಡೆಯದೆ ಶಾಲೆ ನಡೆಸುತ್ತಿವೆ. ದಯಮಾಡಿ ಪೋಷಕರು ಹೊಸದಾಗಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಥವಾ ಒಂದು ಶಾಲೆಯಿಂದ ಇನ್ನೊಂದು ಶಾಲೆ ಮಕ್ಕಳನ್ನು ದಾಖಲಿಸುವಾಗ ಎಚ್ಚರಿಕೆಯನ್ನು ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷನ್ ತಿಳಿಸಿದ್ದಾರೆ.

Advertisement

ತಾಲ್ಲೂಕಿನಲ್ಲಿ ರಾಜ್ಯ ಪಠ್ಯಕ್ರಮದ 77, ಸಿಬಿಎಸ್‌ಸಿ ಪಠ್ಯಕ್ರಮದ 05 ಮತ್ತು ಸಿ.ಐ.ಎಸ್.ಸಿ.ಇ ಪಠ್ಯಕ್ರಮದ 3 ಶಾಲೆಗಳು ಅಧಿಕೃತವಾಗಿ ನೊಂದಣಿಯಾಗಿವೆ. ಈ ಶಾಲೆಗಳ ಹೆಸರು, ಆಡಳಿತ ಮಂಡಳಿ ವಿಳಾಸ, ಶಾಲಾ ವಿಳಾಸ, ಡೈಸ್ ಸಂಖ್ಯೆ, ನೊಂದಣಿ ಪಡೆದ ವರ್ಷ, ನೊಂದಣಿ ಪಡೆದ ಮಾಧ್ಯಮ, ಮಾನ್ಯತೆ ನವೀಕರಣ, ಅನುಮತಿ ಪಡೆದ ತರಗತಿಗಳು, ಪಠ್ಯಕ್ರಮ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟ ಮಾಡಲಾಗಿದೆ.

ಈ ಶಾಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸಿದಲ್ಲಿ ಶಾಲಾ ಶಿಕ್ಷಣ ಇಲಾಖೆ ಯಾವುದೇ ರೀತಿಯಾ ಜವಾಬ್ದಾರಿಯಾಗಿರುವುದಿಲ್ಲ. ಆಯಾ ಪೋಷಕರೇ ಜವಾಬ್ದಾರಿಯಾಗಿರುತ್ತಾರೆ. ಆದ್ದರಿಂದ ಪೋಷಕರು ಅಧಿಕೃತವಾಗಿ ಮಾನ್ಯತೆ ಪಡೆದ ಶಾಲೆಗಳ ಬಗ್ಗೆ ಮಾಹಿತಿ ಪಡೆದು ಮಕ್ಕಳನ್ನು ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಕೋರಿದ್ದಾರೆ.

Advertisement

Advertisement
Tags :
bengaluruchildrenchitradurgaDo not enrollField Education OfficerS. Nagabhushansuddionesuddione newsunauthorized schoolsಅನಧಿಕೃತ ಶಾಲೆಎಸ್.ನಾಗಭೂಷಣ್ಕ್ಷೇತ್ರ ಶಿಕ್ಷಣಾಧಿಕಾರಿಚಿತ್ರದುರ್ಗಬೆಂಗಳೂರುಮಕ್ಕಳನ್ನು ದಾಖಲಿಸಬೇಡಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article