Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿರುವ ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ : ಬಿಇಒ ಎಸ್.ನಾಗಭೂಷಣ್

08:26 PM Apr 05, 2024 IST | suddionenews
Advertisement

 

Advertisement

ಚಿತ್ರದುರ್ಗ . ಏ.05:  ನಗರದ ಕೆ.ಬಿ.ಬಡಾವಣೆಯ ಕಿಂಟೋ ಕಾನ್ವೆಂಟ್ ಕಿರಿಯ ಪ್ರಾಥಮಿಕ ಶಾಲೆ, ಕೋಟೆ ರಸ್ತೆಯ ಮಿನರ್ವ ಕಾನ್ವೆಂಟ್ ಪ್ರಾಥಮಿಕ ಶಾಲೆ, ಜೈನ್ ಕಾಲೋನಿಯ ಮಾಡಲ್ ಸೈನಿಕ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಾಳಪ್ಪನಹಟ್ಟಿಯ ಗುಡ್ ಷಫರ್ಡ್ ಶಾಲೆಗಳು ಮಾನ್ಯತೆ ಪಡೆಯದೇ ಅನಧಿಕೃತವಾಗಿ ಶಾಲೆ ಸ್ಥಳಾಂತರಿಸಿ ನಡೆಸುತ್ತಿವೆ. ಈ ಶಾಲೆಗಳಿಗೆ ಪ್ರಸಕ್ತ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಾಗೂ ಮುಂದಿನ ಶೈಕ್ಷಣಿಕ ಸಾಲಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಾರದು.

 

Advertisement

ಯಾವುದೇ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮುನ್ನ ಶಾಲೆ ಮಾನ್ಯತೆ, ನವೀಕರಣ ಹಾಗೂ ಮಂಜೂರಾತಿ ಪಡೆದ ಸ್ಥಳದಲ್ಲಿಯೇ ನಡೆಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದರೆ ಪೋಷಕರೇ ಹೊಣೆಗಾರರು ಎಂದು ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಎಚ್ಚರಿಸಿದ್ದಾರೆ.

Advertisement
Tags :
admitbengaluruBEO S. NagabhushanchildrenchitradurgaSchoolssuddionesuddione newsಚಿತ್ರದುರ್ಗಬಿಇಒ ಎಸ್.ನಾಗಭೂಷಣ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article