ಪೆಟ್ರೋಲ್ ಬಂಕ್, ಲಾಡ್ಜ್, ಪ್ರಿಂಟರ್ ಹಾಗೂ ಫೋಟೊಗ್ರಾಫಿ ಸ್ಟೋಡಿಯೋಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆ
ಚಿತ್ರದುರ್ಗ. ಮಾ. 20: ಲೋಕಸಭಾ ಚುನಾವಣೆ ನೀತೆ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯ ಪೆಟ್ರೋಲ್ ಬಂಕ್, ಲಾಡ್ಜ್, ಪ್ರಿಂಟಿAಗ್ ಪ್ರೆಸ್ ಹಾಗೂ ಫೋಟೊಗ್ರಾಫಿ ಸ್ಟೋಡಿಯೋಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದರು.
ಕರಪತ್ರ, ಭಿತ್ತಿಪತ್ರ, ಬ್ಯಾನರ್ ಸೇರಿದಂತೆ ಇತರೆ ಚುನಾವಣೆ ಪ್ರಚಾರ ಸಾಮಾಗ್ರಿಗಳ ಮುದ್ರಣ ಸಂಬಂಧಿಸಿದಂತೆ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸರಿಯಾದ ಲೆಕ್ಕ ಇಡಬೇಕು. ನಿಗದಿತ ನಮೂನೆಯೊಳಗೆ ವಿವರಗಳನ್ನು ಭರ್ತಿ ಮಾಡಿ ಚುನಾವಣೆ ಶಾಖೆ ನೀಡಬೇಕು. ಪ್ರತಿ ಕರಪತ್ರ ಹಾಗೂ ಭಿತ್ತಿಪತ್ರಗಳ ಮೇಲೆ ಮುದ್ರಿಸಿದ ಪ್ರತಿಗಳ ಸಂಖ್ಯೆ ಹಾಗೂ ಮುದ್ರಣಕಾರರ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಪೇಪರ್, ಇಂಕ್ ಹಾಗೂ ಇತರೆ ಸಾಮಗ್ರಿಗಳ ಖರೀದಿ ರಿಜಿಸ್ಟರ್‌ಗಳನ್ನು ಚುನಾವಣೆ ಶಾಖೆಯಿಂದ ಆಡಿಟ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಇದೇ ವೇಳೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಮತದಾನದ ಆಮಿಷವಾಗಿ ಪೆಟ್ರೋಲ್ ಹಂಚುವುದು ಕಂಡುಬAದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದೇ ವೇಳೆ ಲಾಡ್ಜ್ ಹಾಗೂ ಫೋಟೊಗ್ರಾಫಿ ಸ್ಟೋಡಿಯೋಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಜಿ.ಪಂ.ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು ಉಪಸ್ಥಿರಿದ್ದರು.