Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಮ್ಮಾ ಕೇಂದ್ರದಲ್ಲಿ ಕಿಶೋರಿಯರಿಗೆ ಬ್ಯಾಗ್, ನೋಟ್ ಪುಸ್ತಕಗಳ ವಿತರಣೆ

06:37 PM Jun 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂನ್.24 : ವಿಮುಕ್ತಿ ವಿದ್ಯಾಸಂಸ್ಥೆ, ದಮ್ಮಾ ಕೇಂದ್ರದಲ್ಲಿ ಕಿಶೋರಿಯರಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ  ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ವಿತರಣೆಮಾಡಲಾಯಿತು.

Advertisement

ದಮ್ಮಾ ಕೇಂದ್ರ, ವಿಮುಕ್ತಿ ವಿದ್ಯಾಸಂಸ್ಥೆ ಅಪ್ಪಿ ಯೋಜನೆ ಇವರ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಅವರು ಮಾತನಾಡಿ, ಕಿಶೋರಿಯರಿಗೆ ಆರೋಗ್ಯ, ಶುಚಿತ್ವ, ಸಮಾನತೆ ಮತ್ತು ಶಿಕ್ಷಣ ಕುರಿತು ಜಾಗೃತಿ ನೀಡುತ್ತಿರುವ ವಿಮುಕ್ತಿ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಗ್ರಾಮೀಣ ಭಾಗದ ಕಿಶೋರಿಯರನ್ನು ಗುರುತಿಸಿ, ಅವರಿಗೆ ಜಾಗೃತಿ, ಅರಿವಿನ ಶಿಕ್ಷಣ ನೀಡುವ ಮೂಲಕ ವಿಮುಕ್ತಿ ವಿದ್ಯಾಸಂಸ್ಥೆ ಕಿಶೋರಿಯರು ಭವಿಷ್ಯದಲ್ಲಿ ಕಂಡುಕೊಳ್ಳಬೇಕಾದ ಬದುಕಿನ ರೀತಿಗಳನ್ನು ಕ್ರೀಡೆ ಮತ್ತು ಪಠ್ಯದ ಮೂಲಕ ಅರಿವು ಮೂಡಿಸುತ್ತಿರುವುದು ಮಾದರಿಯಾಗಿದೆ ಎಂದರು.

Advertisement

ನಗರ ಮತ್ತು ಗ್ರಾಮೀಣ ಭಾಗದ ಕಿಶೋರಿಯರ ಆರೋಗ್ಯ, ಶುಚಿತ್ವ, ಶಿಕ್ಷಣ ಮತ್ತು ಸಮಾನತೆಗಾಗಿ ಕೆಲಸ ಮಾಡುತ್ತಿರುವ ವಿಮುಕ್ತಿ ವಿದ್ಯಾಸಂಸ್ಥೆ ಬಾಲಕಿಯರಿಗೆ ಪ್ರೇರಣೆಯಾಗಿ ಕೆಲಸಮಾಡುತ್ತಿದ್ದು, ಕಿಶೋರಿಯರಿಗೂ ಕೂಡ ಬಹುಮುಖ್ಯ ಬದುಕಿದೆ ಎಂದು ಅರಿವು ಮೂಡಿಸುತ್ತಿರುವುದು ವಿಶೇಷ ಕಾರ್ಯವಾಗಿದೆ ಎಂದರು.

ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಆರ್. ವಿಶ್ವಸಾಗರ್ ಅವರು ಮಾತನಾಡಿ, ಗ್ರಾಮೀಣ ಭಾಗದ ಕಿಶೋರಿಯರಲ್ಲಿ ಜಾಗೃತಿ ಮೂಡಿಸಲು ಕಳೆದೊಂದು ವರ್ಷದಿಂದ ವಿಮುಕ್ತಿ ವಿದ್ಯಾಸಂಸ್ಥೆಯ ವತಿಯಿಂದ ಕಾರ್ಯ ಯೋಜನೆಯನ್ನು ರೂಪಿಸಲಾಗಿದ್ದು, ಈಗಾಗಲೇ ಸುಮಾರು ಇಪ್ಪತ್ತರಿಂದ ಮೂವತ್ತು ಹಳ್ಳಿಗಳಲ್ಲಿ ಬಾಲಕಿಯರನ್ನು ಸಂಘಟಿಸಿ, ಕ್ರೀಡೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಬಾಲಕಿಯರು ಮತ್ತು ಅವರ ಪೋಷಕರಿಂದ ಅತ್ಯುತ್ತಮವಾದ ಸ್ಪಂಧನೆ ಇದ್ದು, ಬಾಲಕಿಯರ ಸಮಾನತೆಗಾಗಿ ಚಿತ್ರದುರ್ಗ ನಗರದಲ್ಲಿ ಜಾಗೃತಿ ಜಾಥಾ ಮತ್ತು ಜಾಗೃತಿ ಸಮಾವೇಷವನ್ನು ಮಾಡುವ ಮೂಲಕ ಜಿಲ್ಲಾ ಆಡಳಿತದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎಂದರು.

ಬ್ಯಾಗ್ ಮತ್ತು ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಸ್ಫೂರ್ತಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಬಿ.ರೂಪಾನಾಯ್ಕ್ ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಂಕರಪ್ಪ, ನಾಗರತ್ನ, ಬಿಬಿಜಾನ್, ಅರಣ್ಯಸಾಗರ್, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Tags :
Damma KendraDistribution of bagKishorinote booksದಮ್ಮಾ ಕೇಂದ್ರನೋಟ್ ಪುಸ್ತಕ ವಿತರಣೆಬ್ಯಾಗ್
Advertisement
Next Article