Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

09:38 PM Sep 18, 2024 IST | suddionenews
Advertisement

ಚಿತ್ರದುರ್ಗ :  ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

Advertisement

ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಬಂದೋಬಸ್ತ್ ಕಾರ್ಯಕ್ಕೆ 14 ಡಿವೈಸ್‌ಪಿ, 33 ಸಿಪಿಐ, 112 ಪಿಎಸ್‌ಐ, 167 ಎಎಸ್‌ಐ, 1997 ಪೊಲೀಸ್ ಕಾನ್ಸ್ಟೇಬಲ್, 658 ಗೃಹ ರಕ್ಷಕರು ಸೇರಿ 3000 ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಇದರೊಂದಿಗೆ 15 ಕೆಎಸ್‌ಆರ್‌ಪಿ, 11 ಡಿಎಆರ್, 4 ಕ್ಯೂಆರ್‌ಟಿ ತುಕಡಿಗಳನ್ನು ನಿಯೋಜಿಸಲಾಗುವುದು. 81 ಕಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. 20 ವಿಡಿಯೋಗ್ರಾಫರ್‌ಗಳು ಮೆರವಣಿಗೆ ಚಿತ್ರೀಕರಣವನ್ನು ಮಾಡಲಿದ್ದಾರೆ. 9 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗುವುದು. ಪಟಾಕಿ ಬಳಕೆಗೆ ಅವಕಾಶವಿಲ್ಲ. ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಪೊಲೀಸ್ ಸಿಬ್ಬಂದಿಗೆ ತಂಗಲು ನಗರದ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ಸಭೆಯಲ್ಲಿ ತಿಳಿಸಿದರು.

ಸೆ.27 ಹಾಗೂ 28 ರಂದು ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಆದೇಶಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಕೋರಿಕೆ ಸಲ್ಲಿಸಲಾಗಿದೆ. ಶೋಭಾಯಾತ್ರೆಯ ದಿನ ಬಿ.ಡಿ.ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಿ, ಬದಲಿ ಮಾರ್ಗದಲ್ಲಿ ಬಸ್ ಹಾಗೂ ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ ಆದೇಶ ಹೊರಡಿಸಲು ಕೋರಿಕೆ ಸಲ್ಲಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಅಬಕಾರಿ ಉಪನಿರೀಕ್ಷಕ ಮಾದೇಶ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿಯ ಬದ್ರನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.

Advertisement
Tags :
3000 police personnel appointed3000 ಪೊಲೀಸ್ ಸಿಬ್ಬಂದಿ ನೇಮಕbandobast workbengaluruchitradurgaHindu MahaganapatiRanjit Kumar Bandarusuddionesuddione newsಚಿತ್ರದುರ್ಗಬಂದೋಬಸ್ತ್ ಕಾರ್ಯಬೆಂಗಳೂರುರಂಜಿತ್ ಕುಮಾರ ಬಂಡಾರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿಂದೂ ಮಹಾಗಣಪತಿ ವಿಸರ್ಜನೆ
Advertisement
Next Article