For the best experience, open
https://m.suddione.com
on your mobile browser.
Advertisement

ಪರಸ್ಪರ ಸುದೀರ್ಘ ಸಮಾಲೋಚನೆಯಿಂದ ವಿಘಟನೆ ತಡೆಯಬಹುದು : ಶಿರಸಂಗಿ ಶ್ರೀಗಳು

08:55 PM Jan 22, 2024 IST | suddionenews
ಪರಸ್ಪರ ಸುದೀರ್ಘ ಸಮಾಲೋಚನೆಯಿಂದ ವಿಘಟನೆ ತಡೆಯಬಹುದು   ಶಿರಸಂಗಿ ಶ್ರೀಗಳು
Advertisement

Advertisement
Advertisement

ಸುದ್ದಿಒನ್, ಬೆಂಗಳೂರು, ಜ. 22 : ಇಂದು ವೈವಾಹಿಕ ಬದುಕಿಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಪರಸ್ಪರಲ್ಲಿ ಸಣ್ಣ ಪುಟ್ಟ ಕಾರಣಕ್ಕೆ  ಭಿನ್ನಾಭಿಪ್ರಾಯಗಳು ಹುಟ್ಟಿ  ಸಂಬಂಧ   ಕಡಿದುಕೊಳ್ಳುವ ಸಂದರ್ಭ ಇಂದು ಹೆಚ್ಚಾಗಿ ಆಗುತ್ತಿರುವುದು ಸಮಾಜಕ್ಕೆ ಶೋಭೆ ಅಲ್ಲ ಎಂದು ಬೆಳಗಾವಿ ಜಿಲ್ಲೆ ಶಿರಸಂಗಿ ಮುರುಘಾಮಠದ ಬಸವ ಮಹಾಂತ ಸ್ವಾಮೀಜಿ ಅವರು ಆತಂಕ ವ್ಯಕ್ತಪಡಿಸಿದರು.

Advertisement

ಅವರು ಚಿತ್ರದುರ್ಗದ ಬಸವೇಶ್ವರ ವಧು- ವರರ ಅನ್ವೇಷಣಾ ಕೇಂದ್ರದ ವತಿಯಿಂದ ಭಾನುವಾರ ಬೆಂಗಳೂರು ಗಾಂಧಿನಗರದ ಮರಾಠ ಮಂಡಲ ಸಭಾಂಗಣದಲ್ಲಿ ಏರ್ಪಡಿಸಿದ್ದ  ರಾಜ್ಯಮಟ್ಟದ ಸರ್ವಧರ್ಮೀಯರ ವಧು ವರರ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.

Advertisement

ಯಾವುದೇ ಸಂಬಂಧಗಳು ಏರ್ಪಡುವ ಮುನ್ನ ಸದಸ್ಯರಲ್ಲಿ  ಸುಧೀರ್ಘ ಸಮಾಲೋಚನೆ ನಡೆಸದೆ ಕೇವಲ ಉನ್ನತ ಪದವಿ,  ದೊಡ್ಡ ಉದ್ಯೋಗ, ಅಧಿಕ ಸಂಬಳ,ಹಣ, ಅಂತಸ್ತಿಗೆ ಮಹತ್ವ ಕೊಟ್ಟು ಕುಟುಂಬಗಳ  ಸಂಸ್ಕೃತಿ, ನಡೆ-ನುಡಿ, ಆರೋಗ್ಯದ ಹಿನ್ನೆಲೆ ಈ ರೀತಿಯಾದ ಆರೋಗ್ಯಕರ ವಿಷಯಗಳ ಬಗ್ಗೆ ಯೋಚಿಸದೆ ಇರುವ ಕಾರಣ ಇಂದು ದಿಢೀರ್ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚಾಗಿರುವುದು ಕಳವಳಕಾರಿ ಎಂದು ವಿಷಾದಿಸಿದರು.

ಇದೊಂದು ಸರ್ವಧರ್ಮೀಯ ವೇದಿಕೆ ಆಗಿರುವುದರಿಂದ ಸೇರಿರುವ ಯಾರೇ ಆಗಲಿ  ಒಬ್ಬರನ್ನೊಬ್ಬರು ಪರಸ್ಪರ ಇಷ್ಟ ಪಟ್ಟಲ್ಲಿ ಅಲ್ಲಿ ಜಾತಿ, ಧರ್ಮ, ನೋಡದೆ ಸಂಬಂಧ ಬೆಳೆಸುವುದು ಸೂಕ್ತ ಎಂದು ಸಲಹೆ ಮಾಡಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ  ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ ಹಿಂದೆ  ಒಂದು ಕಾಲ ಇತ್ತು.  ಸಂಬಂಧಗಳ ಕೊಂಡಿ ಹಾಗೆ ಉಳಿಸಿಕೊಳ್ಳಲು ನಮ್ಮ  ಹಿರಿಯರು ಹುಟ್ಟಿದ ಮಗುವಿಗೆ ಇಂಥ ಹುಡುಗನಿಗೆ ಇಂಥಾ ಹೆಣ್ಣು ಎಂದು  ರಕ್ತ ಸಂಬಂಧಿಕರಲ್ಲಿ ತೀರ್ಮಾನಿಸುವುದಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಸ್ವತಂತ್ರ ಆಲೋಚನೆ ಮಾಡುವ ಸಾಮರ್ಥ್ಯ ಇರುವ ಕಾರಣ ಅಂತಾ ಸಂಬಂಧಗಳು ಕಡಿಮೆಯಾಗಿದ್ದು.  ಎಲ್ಲರಿಗೂ ಸರ್ಕಾರಿ ಉದ್ಯೋಗ ಹೊಂದಿದವರೇ  ಬೇಕೆಂದು ಹೋದರೆ ಸಿಗುವುದು ಕಷ್ಟ.

ಉತ್ತಮ ವ್ಯಕ್ತಿತ್ವದ ಹಿನ್ನೆಲೆ ಹೊಂದಿದ,  ಉದ್ಯೋಗ ಯಾವುದೇ ಇರಲಿ  ಕುಟುಂಬ ನಿಭಾಯಿಸುವ ಹೊಣೆಗಾರಿಕೆ ಹೊಂದಿರುವವರಲ್ಲಿ ಸಂಬಂಧ  ಏರ್ಪಾಡು ಮಾಡುವುದು ಉಚಿತ. ಹೆಣ್ಣು  ಬ್ರೂಣ  ಹತ್ಯೆಯಂತಹ ಸಾಮಾಜಿಕ ಅನಿಷ್ಟ ಪದ್ಧತಿ ತೊಲಗಿ,  ಲಿಂಗಾನುಪಾತದಲ್ಲಿ ಸಮಾನತೆ  ಬರಬೇಕೆಂದು ಹೇಳಿದರು.ಬಸವೇಶ್ವರ ವಧು ವರಾ ನ್ವೇಷಣಾ ಕೇಂದ್ರದ ಜೆ.ಎಂ. ಜಂಬಯ್ಯ ಅವರು ಎರಡು ಮೂರು ದಶಕಗಳಿಂದ ಇಂತಹ ಸರ್ವಧರ್ಮೀಯ ಸಮಾವೇಶಗಳನ್ನು ಹೆಗಲ ಮೇಲೆ ಹೊತ್ತು ಮಾಡುತ್ತಿದ್ದಾರೆ. ಅಂತ ಕೆಲಸಕ್ಕೆ ಎಲ್ಲರೂ ಸಹಕಾರ ಕೊಡಬೇಕೆಂದು  ಮತ್ತು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾತಿ,ಧರ್ಮದವರು ಸೇರಿದ್ದ ಸಮಾವೇಶದಲ್ಲಿ ವಧು- ವರನನ್ನು  ವರ- ವಧುವನ್ನು ಆಯ್ಕೆ ಮಾಡಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಬಂದಿದ್ದರು.ಪರಸ್ಪರರು ಸ್ವಪ ಪರಿಚಯ ಮಾಡಿಕೊಂಡರು. ಒಪ್ಪಿತಗೊಂಡವರು ಮುಂದಿನ ಸಿದ್ಧತೆ ಬಗ್ಗೆ ವ್ಯವಸ್ಥಾಪಕರಲ್ಲಿ ಸಲಹೆ ಕೇಳುವುದೂ ಸಹ ನಡೆಯಿತು.

ಸಮಾವೇಶದ ಸಂಘಟಕರು ವ್ಯವಸ್ಥಾಪಕರೂ ಆದ ಜೆ.ಎಂ.ಜಂಬಯ್ಯ ಅವರು ಸ್ವಾಗತ ಹಾಗೂ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ಬಸವರಾಜಪ್ಪ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement
Tags :
Advertisement