Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಚಿವ ಶಿವರಾಜ್ ತಂಗಡಗಿ ತಾಯಿ ಬಗ್ಗೆ ಅವಹೇಳನವಾಗಿ ಹೇಳಿಕೆ | ಸಿ.ಟಿ.ರವಿ ಕ್ಷಮೆ ಯಾಚಿಸಬೇಕು : ಚಿತ್ರದುರ್ಗ ಜಿಲ್ಲಾ ಭೋವಿ ಸಂಘ ಒತ್ತಾಯ

05:19 PM Mar 27, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿಯ ಬಗ್ಗೆ ಬಿಜೆಪಿ.ಯ ಸಿ.ಟಿ. ರವಿ ಅವಹೇಳನವಾಗಿ ಮಾತನಾಡಿರುವುದು ಭೋವಿ ಸಮಾಜಕ್ಕೆ ಅತ್ಯಂತ ನೋವುಂಟು ಮಾಡಿದೆ. ಈ ಕೂಡಲೆ ಸಿ.ಟಿ.ರವಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಎಲ್ಲಿಗೆ ಬಂದರೂ ಘೇರಾವ್ ಮಾಡಿ ಕಪ್ಪುಬಟ್ಟೆ ಪ್ರದರ್ಶಿಸುತ್ತೇವೆಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.

Advertisement

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೆಣ್ಣನ್ನು ಭೂಮಾತೆ ಎಂದು ಗೌರವಿಸಲಾಗುವುದು. ರಾಜಕೀಯ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳಿರುವುದು ಸಹಜ. ಆದರೆ ಶಿವರಾಜ್ ತಂಗಡಗಿಯವರ ತಾಯಿ ಕುರಿತು ಅವಹೇಳನವಾಗಿ ಮಾತನಾಡಿರುವ ಸಿ.ಟಿ.ರವಿ ಸಂಸ್ಕøತಿ ಎಂತಹುದು ಎಂದು ತೋರಿಸುತ್ತದೆ. ಹಾಗಾಗಿ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದರು.

ಜಿಲ್ಲಾ ಭೋವಿ ಸಂಘದ ಖಜಾಂಚಿ ಈ.ಮಂಜುನಾಥ್ ಮಾತನಾಡಿ ಶಿವರಾಜ್ ತಂಗಡಗಿ ತಾಯಿ ಬಗ್ಗೆ ಹೀನಾಯವಾದ ಮಾತುಗಳನ್ನು ಬಳಸಿರುವ ಸಿ.ಟಿ.ರವಿ ಎಲ್ಲಿಯೇ ಬರಲಿ ಅವರ ವಿರುದ್ದ ಧಿಕ್ಕಾರಗಳನ್ನು ಕೂಗಿ ಘೇರಾವ್ ಹಾಕುತ್ತೇವೆ. ಇನ್ನು ಮುಂದೆ ಯಾವ ಹೆಣ್ಣಿಗೂ ಅವಮಾನವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದೆಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಡೆಮನೆ ಹನುಮಂತಪ್ಪ ಮಾತನಾಡುತ್ತ ಬಿಜೆಪಿ.ಯ ಸಿ.ಟಿ.ರವಿ ನಮ್ಮ ಕಣ್ಣಿಗೆ ಎಲ್ಲಿಯೇ ಕಾಣಿಸಲಿ ಘೇರಾವ್ ಹಾಕಿ ದಿಕ್ಕಾರಗಳನ್ನು ಕೂಗುತ್ತೇವೆ. ಕ್ಷಮೆ ಕೇಳುವತನಕ ಬಿಡುವುದಿಲ್ಲ ಎಂದರು.

ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ದೇವರಾಜ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Advertisement
Tags :
apologizebengaluruchitradurgachitradurga district Bhovi Sanghct ravidisparaging statementMinister Shivraj Tangadagisuddionesuddione newsಅವಹೇಳನವಾಗಿ ಹೇಳಿಕೆಒತ್ತಾಯಕ್ಷಮೆ ಯಾಚಿಸಬೇಕುಚಿತ್ರದುರ್ಗಚಿತ್ರದುರ್ಗ ಜಿಲ್ಲಾ ಭೋವಿ ಸಂಘಬೆಂಗಳೂರುಸಚಿವ ಶಿವರಾಜ್ ತಂಗಡಗಿಸಿ ಟಿ ರವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article