For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ : ಲಿಂಗಾಯತ ಯುವ ಪಡೆ ಆಗ್ರಹ

04:48 PM Dec 12, 2024 IST | suddionenews
ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ   ಲಿಂಗಾಯತ ಯುವ ಪಡೆ ಆಗ್ರಹ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಡಿ. 12 : ವೀರಶೈವ ಲಿಂಗಾಯುತ ಜನಾಂಗದ ವಿರೋಧಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರನ್ನು ಲಿಂಗಾಯತ ಯುವ ಪಡೆ ಆಗ್ರಹಿಸಿದ್ದರು.

ಚಿತ್ರದುರ್ಗ ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ವೃತದ ಬಳಿ ಪ್ರತಿಭಟನೆಯನ್ನು ನಡೆಸಿದ ಲಿಂಗಾಯತ ಯುವ ಪಡೆಯ ಪದಾಧಿಕಾರಿಗಳು ಪಂಚಮಸಾಲಿ ಸಮಾಜದ ಬಂಧುಗಳು ಪ್ರವರ್ಗ-2ಎ ಮೀಸಲಾತಿಗಾಗಿ ಶಾಂತಿಯುತವಾಗಿ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮನವಿ ಸಲ್ಲಿಸಲು ಆಗಮಿಸಿದಾಗ ಅದರಲ್ಲೂ ನ್ಯಾಯಾಲಯದ ಆದೇಶದ ಅನುಮತಿ ಪಡೆದಿದ್ದರೂ ಸಹ ಏಕಾಏಕೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಪ್ರತಿಭಟನೆ ನಿರಂತರ ಮೇಲೆ ಲಾಠಿಛಾರ್ಜ್ ಮಾಡಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ನೂರಾರು ಜನ ಹೋರಾಟಗಾರರಿಗೆ ಮರಣಾಂತಿಕ ಹಲ್ಲೆಯಾಗಿದೆ ಕೈ ಕಾಲುಗಳು ಮುರಿಯಲಾಗಿದೆ. ಜೊತೆಗೆ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧನ ಸಹ ಮಾಡಿರುತ್ತಾರೆ ಎಂದು ದೂರಿದ್ದಾರೆ.

Advertisement

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯುತ ಜನಾಂಗದ ಮೇಲೆ ಪದೇ ಪದೇ ದೌರ್ಜನ್ಯ ವೆಸಗುತ್ತಿದೆ. ಈ ಹಿಂದೆ ನಮ್ಮ ಸಮಾಜವನ್ನು ಹೊಡೆಯಲು ಪ್ರತ್ಯೇಕ ಲಿಂಗಾಯುತ ಧರ್ಮದ ಹೋರಾಟವನ್ನು ಅಧಿಕಾರ ದಹಕ್ಕಾಗಿ ಬಳಸಿಕೊಂಡಿರುವುದು ದುರಂತ. ವೀರಶೈವ ಲಿಂಗಾಯುತ ಪಂಚಮ ಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಮತ್ತು ಮುಖಂಡ ಮೇಲೆ ದೌರ್ಜನ್ಯ ಮಾಡಿರುವ ಸಂವಿಧಾನ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಈ ಕೂಡಲೆ ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೀತೇಂದ್ರ ಹುಲಿಕುಂಟೆ, ಪಿ.ರುದ್ರೇಶ್ ವಿ.ಹೆಚ್.ಪಿ, ತಿಪ್ಪೇಶ್ ಗಾರೇಹಟ್ಟಿ, ಮಂಜುನಾಥ್, ವೀರೇಶ್, ಸಂಜಯ್ ಜಾಲಿಕಟ್ಟೆ, ಗುರುರಾಜ್, ಅಭಿಲಾಶ್, ದೀಲಿಪ್, ಮಲ್ಲಿಕಾರ್ಜುನ್ ಇನ್ನು ಇತರರು ಉಪಸ್ಥಿತರಿದ್ದರು.

Tags :
Advertisement