Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಧರಣಿ

05:01 PM Oct 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 : ಡಿ.ಸಿ.ಆರ್.ಜೆ. ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೆ ವೇತನ ಆಯೋಗದ ಅನುಸಾರ ನೀಡಲು ಪರಿಷ್ಕøತ ಆದೇಶ ಹೊರಡಿಸುವಂತೆ ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಒಂದು ದಿನದ ಧರಣಿ ನಡೆಸಲಾಯಿತು.

Advertisement

ದಿನಾಂಕ : 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ನೌಕರರು ಏಳನೆ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿದ್ದು, ಆರನೇ ವೇತನ ಆಯೋಗದಂತೆ ನಿವೃತ್ತಿ ಸೌಲಭ್ಯ ದೊರಕುತ್ತಿದೆ. ಡಿ.ಸಿ.ಆರ್.ಜಿ. ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೆ ವೇತನ ಆಯೋಗದ ಲೆಕ್ಕಾಚಾರದಂತೆ ನೀಡುವಂತೆ ನಿವೃತ್ತ ನೌಕರರು ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟರು.

ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಹೆಚ್.ಗೋವಿಂದಯ್ಯ, ಜಿಲ್ಲಾ ಸಂಚಾಲಕರುಗಳಾದ ಡಿ.ಟಿ.ಜಗನ್ನಾಥ್, ಸುಗೇಂದ್ರನಾಯ್ಕ, ನಾಗರಾಜಪ್ಪ, ಪದ್ಮಾವತಿ, ಬಿ.ಕೆ.ಹನುಮಂತಪ್ಪ, ನೀಲಕಂಠಾಚಾರ್, ಡಿ.ದಯಾನಂದ, ರಮೇಶ್ ಮಧುರಿ ಸೇರಿದಂತೆ ನೂರಾರು ನಿವೃತ್ತ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 

Advertisement
Tags :
bengaluruchitradurgaDharanifulfillment of various demandsKarnataka Retired Employees Forumsuddionesuddione newsಕರ್ನಾಟಕ ನಿವೃತ್ತ ನೌಕರರ ವೇದಿಕೆಚಿತ್ರದುರ್ಗಧರಣಿಬೆಂಗಳೂರುವಿವಿಧ ಬೇಡಿಕೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article