For the best experience, open
https://m.suddione.com
on your mobile browser.
Advertisement

ಸಣ್ಣ ಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದವರು ದೇವರಾಜ್ ಆರಸ್ : ಎನ್.ಡಿ.ಕುಮಾರ್

05:40 PM Jun 06, 2024 IST | suddionenews
ಸಣ್ಣ ಸಣ್ಣ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಿದವರು ದೇವರಾಜ್ ಆರಸ್   ಎನ್ ಡಿ ಕುಮಾರ್
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜೂ. 06 :‌ ಸಣ್ಣ ಸಣ್ಣ ಸಮಾಜವನ್ನು ಗುರುತಿಸಿ ಅವರಿಗೆ ರಾಜಕೀಯ ಪ್ರಾತಿನಿಧ್ಯವನ್ನು ನೀಡಿದವರು ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಆರಸ್ ಎಂದು ಕಾಂಗ್ರೆಸ್ ಇತರೆ ಹಿಂದುಳಿದವರ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ತಿಳಿಸಿದರು.

Advertisement

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇತರೆ ಹಿಂದುಳಿದವರ ವರ್ಗಗಳ ವಿಭಾಗದವತಿಯಿಂದ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದೇವರಾಜ್ ಆರಸ್ ರವರ 42ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅರಸು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅರಸು ರವರು ಅಧಿಕಾರದಲ್ಲಿದ್ದಾಗ ಉತ್ತಮವಾದ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಸಣ್ಣ ಸಣ್ಣ ಸಮಾಜವನ್ನು ಸಹಾ ಗುರುತಿಸಿ ರಾಜಕೀಯವಾಗಿ ಅವರು ಬೆಳೆಯುವಂತೆ ಮಾಡಿದ್ದಾರೆ. ಉಳುವವನೆ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡುವುದರ ಮೂಲಕ ದೊಡ್ಡ ದೊಡ್ಡ ಜಮೀನ್ದಾರ್‍ರ ಬಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವವರಿಗೆ ಭೂಮಿಯನ್ನು ಕೂಡಿಸುವ ಕೆಲಸವನ್ನು ಮಾಡಿದರು ಎಂದರು.

Advertisement
Advertisement

ಅರಸು ರವರು ಅಧಿಕಾರ ಮಾಡಿದ ಸಮಯದಲ್ಲಿ ರಾಜ್ಯದ ಜನತೆಗೆ ಉತ್ತಮವಾದ ಆಡಳಿತವನ್ನು ನೀಡಿದ ಮಹಾನ್ ವ್ಯಕ್ತಿ, ಇಂದಿರಾಗಾಂಧಿಯವರ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಅರಸು ರವರು ಕೇಂದ್ರದಲ್ಲಿ ಜಾರಿ ಮಾಡಿದ ಯೋಜನೆಗಳನ್ನು ರಾಜ್ಯದಲ್ಲಿಯ ಸಹಾ ಜಾರಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದರು. ಸಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅರಸು ರವರ ಪಾತ್ರ ಅಧಿಕವಾಗಿದೆ. ಬಹಳ ದೂರದೃಷ್ಟಿಯಿಂದ ಯೋಜನೆಗಳನ್ನು ನಿರ್ಮಾಣ ಮಾಡಿ ಜನರಿಗೆ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ಸಹಾ ನೆನೆಯಲಾಗುತ್ತಿದೆ. ಅವರ ಪುಣ್ಯ ಸ್ಮರಣೆಯನ್ನು ಮಾಡಲಾಗುತ್ತಿದೆ ಎಂದು ಕುಮಾರ್ ತಿಳಿಸಿದರು.

ಸರ್ಕಾರದ ಗ್ಯಾರೆಂಟಿಗಳ ಯೋಜನೆಯ ಅದ್ಯಕ್ಷರಾದ ಶಿವಣ್ಣ ಮಾತನಾಡಿ, ಅರಸು ರವರು ಜನಪರವಾದ ಕಾರ್ಯಕ್ರಮಗಳನ್ನು ಜಾರಿ ಮಾಡಿ ಉತ್ತಮವಾದ ಸರ್ಕಾರ ಎಂದು ಹೆಸರನ್ನು ಪಡೆದಿದ್ದರು. ಹಿಂದುಳಿದ ವರ್ಗದವರಿಗೆ ವಿವಿಧ ರೀತಿಯ ಸಹಾಯವನ್ನು ಮಾಡಿದರು. ಸಣ್ಣ ಸಮಾಜವನ್ನು ಮೇಲೆತ್ತುವ ಕಾರ್ಯವನ್ನು ಮಾಡಿದವರು ಅರಸು ರವರು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಮಾತನಾಡಿ, ಆರಸು ರವರು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು, ಎಲ್ಲಾ ಜಾತಿಯ ಬಡವರಿಗೂ ಸಹಾ ಸಹಾಯವನ್ನು ಮಾಡಿದ್ದಾರೆ. ಇಂದು ಮೀಸಲಾತಿ ಇದೆ ಎಂದರೆ ಅದಕ್ಕೆ ಅರಸು ರವರು ಕಾರಣರಾಗಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಶ್ರೀಮಂತರನ್ನು ಓಲೈಕೆ ಮಾಡದೇ  ಬಡವರನ್ನು ನೋಡಿ ಅಧಿಕಾರವನ್ನು ನಡೆಸಿದ್ದಾರೆ.ಬಂಡವಾಳ ಶಾಹಿಗಳನ್ನು, ಜಾತಿವಾದಿಗಳನ್ನು, ದೂರ ಇಟ್ಟಿದ್ದರು. ಕಾಂಗ್ರೆಸ್‍ನಲ್ಲಿ ಸಾಮಾನ್ಯ ವ್ಯಕ್ತಿಯೂ ಸಹಾ ರಾಜಕೀಯವಾಗಿ ಬೆಳೆಯಬಹುದೆಂದು ತೋರಿಸಿ ಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದಾಗಿನಿಂದಲೂ ಸಹಾ ಉತ್ತಮವಾದ ಆಡಳಿತವನ್ನು ನೀಡಿದೆ. ಕೇಂದ್ರದಲ್ಲಿ ಗಾಂಧಿ ಮನೆತನದವರಾದರೆ ರಾಜ್ಯದಲ್ಲಿ ಅರಸು ರವರು ಉತ್ತಮವಾದ ಆಡಳಿತವನ್ನು ನೀಡಿದ್ದಾರೆ. ಉತ್ತಮವಾದ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಬಡವರ ಪರವಾದ ಸರ್ಕಾರವನ್ನು ನೀಡಿದ್ದಾರೆ. ಅರಸು ರವರು ಸಹಾ ತಮ್ಮ ಅಧಿಕಾರದಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ಜಾರಿ ಮಾಡಿ ಕೂಲಿ ಕೆಲಸ ಮಾಡುತ್ತಿದ್ದವರನ್ನು ಭೂಮಿಯ ಮಾಲಿಕರನ್ನಾಗಿ ಮಾಡಿದರು. ಹಳೆ ಮೈಸೂರು ಕಡಿಮೆ ಇತ್ತು ಅದನ್ನು ವಿಸ್ತರಣೆ ಮಾಡಿದ ಕೀರ್ತಿ ಅರಸುರವರಿಗೆ ಸಲುತ್ತದೆ. ನಿಜಲಿಂಗಪ್ಪರವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಇದಕ್ಕೆ ಅರಸುರವರು ಕಾರಣರಾಗಿದ್ದಾರೆ. ಸಾಮಾಜಿಕ ನ್ಯಾಯದಡಿಯಲ್ಲಿ ರಾಜ್ಯವನ್ನು ಅಳಿದವರು ಅರಸು ರವರು, ಇವರನ್ನು ಕಾಂಗ್ರೆಸ್ ಪಕ್ಷ ಮರೆಯುವಂತಿಲ್ಲ ಎಂದರು.

ಆಯೋಧ್ಯೆಯ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಲೋಕಸಭಾ ಸದಸ್ಯರನ್ನಾಗಿ ಮಾಡುವುದರ ಮೂಲಕ ಅಲ್ಲಿನ ಮತದಾರರು ಪ್ರಪಂಚಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ್ದಾರೆ ರಾಮನು ಸಹಾ ಹಿಂದುತ್ವನ್ನು ವಿರೋಧಿಸಿ ಪರಿಶಿಷ್ಟರಿಗೆ ಮಣೆಯನ್ನು ಹಾಕಿದ್ದಾನೆ ಇದೇ ರೀತಿ ಸಂದೇಶವನ್ನು ಚಿತದುರ್ಗ ಲೋಕಸಭಾ ಸಾಮಾನ್ಯ ಕ್ಷೇತ್ರವಾಗಿದ್ದಾಗ ರಂಗನಾಥ್‍ರವರನ್ನು ಗೆಲ್ಲಿಸುವುದರ ಮೂಲಕ ನೀಡಲಾಗುತ್ತೆಂದು ತಾಜ್ ಪೀರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಾಂದ್ ಪೀರ್, ಮೀನಾಕ್ಷಿ, ಚೊಟು, ಸುಧಾ, ಷಬ್ಬಿರ್, ನಂದೀಶ್, ಬಷೀರ್, ಪರಿವಿನ್, ಮುದಾಸಿರ್ ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement