Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆವರಣದಲ್ಲಿ ಕೀಟಜನ್ಯ ರೋಗಗಳು ಹರಡದಂತೆ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಿ : ಡಾ.ಆನಂದ ಪ್ರಕಾಶ್

05:10 PM Jul 20, 2024 IST | suddionenews
Advertisement

ಚಿತ್ರದುರ್ಗ. ಜುಲೈ20:  ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಪ್ರತಿ ಶುಕ್ರವಾರ ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶಪಡಿಸುವ ಚಟುವಟಿಕೆ ನಡೆಯಿತು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದಿಂದ ಹಮ್ಮಿಕೊಂಡಿದ್ದ ಲಾರ್ವಾ ಉತ್ಪತ್ತಿ ತಾಣ ನಾಶ ಕಾರ್ಯಕ್ಕೆ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಕೀಟಜನ್ಯ ರೋಗಗಳ ಹರಡದಂತೆ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವಂತೆ ಕರೆ ನೀಡಿದರು.

Advertisement

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಕಾಶಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಶುದ್ಧವಾದ ನೀರಿನಲ್ಲಿ ಬೆಳೆಯುವ ಲಾರ್ವ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಡೆಂಗ್ಯೂ ನಿಯಂತ್ರಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ತಂಡ ರಚಿಸಿ ಜಿಲ್ಲಾಸ್ಪತ್ರೆ, ಸರ್ವೇಕ್ಷಣ ಘಟಕ, ತರಬೇತಿ ಕೇಂದ್ರ, ರಕ್ತ ನಿಧಿ ಕೇಂದ್ರ, ಸ್ಕ್ಯಾನಿಂಗ್ ಸೆಂಟರ್, ಔಷಧಿ ಉಗ್ರಾಣ, ಮೆಡಿಕಲ್ ಕಾಲೇಜು ಕಾಮಗಾರಿ ಸ್ಥಳದಲ್ಲಿ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹಣೆ ನೀರನ್ನು ಖಾಲಿ ಮಾಡಿ ಲಾರ್ವಾಗಳನ್ನು ನಾಶಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ, ಕೀಟ ಜನ್ಯ ರೋಗಗಳ ವಿಭಾಗದ ಸುರೇಶ್ ಬಾಬು, ಮಲ್ಲಿಕಾರ್ಜುನ್ ಯೋಗೀಶ್ ಶ್ರೀನಿವಾಸ್. ಓ ಶ್ರೀನಿವಾಸ್.ವಿ.ನಾಗರಾಜ ಪಾಂಡು, ರುದ್ರಮುನಿ, ಕಾವ್ಯ, ಶ್ರೀಕಾಂತ್ ಇದ್ದರು.

Advertisement
Tags :
bengaluruchitradurgadestroyDr. Ananda Prakashlarva breedingpest diseasespremisespreventspreadsuddionesuddione newsಆವರಣಉತ್ಪತ್ತಿ ತಾಣಕೀಟಜನ್ಯ ರೋಗಗಳುಚಿತ್ರದುರ್ಗಡಾ.ಆನಂದ ಪ್ರಕಾಶ್ಬೆಂಗಳೂರುಲಾರ್ವಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article