Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯೋಗ್ಯತೆಗೆ ತಕ್ಕ ಹುದ್ದೆ ಸಿಗದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ : ರುದ್ರಪ್ಪ ಹನಗವಾಡಿ

05:49 PM Aug 26, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಪದವಿಯ ಜೊತೆ ಜ್ಞಾನ ಸಂಪಾದನೆ ಮುಖ್ಯ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ.ಹೆಚ್.ಜಿ.ದೇವರಾಜ್ ಹೇಳಿದರು.

ಪ್ರೊ.ಹೆಚ್.ಜಿ.ದೇವರಾಜ್‍ರವರು ತಮ್ಮ 82 ನೇ ಜನ್ಮದಿನದ ಅಂಗವಾಗಿ ಪ್ರೊ.ಟಿ.ಹೆಚ್.ಕೃಷ್ಣಮೂರ್ತಿ, ಡಾ.ಟಿ.ಆರ್.ಮಂಜುನಾಥ್ ಹಾಗೂ ನೂರಾರು ಅರ್ಥಶಾಸ್ತ್ರ ಪ್ರಾಧ್ಯಾಪಕರು ಚಿಂತಕರ ಬಳಗದಿಂದ ದುರ್ಗದ ಸಿರಿಯಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.

Advertisement

ನಾಡಿನ ಎಲ್ಲಾ ಕಾಲೇಜುಗಳಲ್ಲಿಯೂ ಅರ್ಥಶಾಸ್ತ್ರದ ಬಗ್ಗೆ ಉಪನ್ಯಾಸ ನೀಡಿದ್ದೇನೆ. ವಿದೇಶಿ ಕಂಪನಿಗಳು ನಮ್ಮ ದೇಶವನ್ನು ಹೇಗೆ ಶೋಷಣೆ ಮಾಡುತ್ತಿವೆ ಎನ್ನುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದೇನೆ. ಅಧ್ಯಯನಶೀಲರಾಗಬೇಕೆಂದು ತಿಳಿಸಿದರು.

ಕೆ.ಪಿ.ಎಸ್.ಸಿ. ಮಾಜಿ ಸದಸ್ಯ ಪ್ರೊ.ಎಂ.ಮಹದೇವ ಮಾತನಾಡಿ ಅರ್ಥಶಾಸ್ತ್ರ ಬೆಳೆಸುವುದರಲ್ಲಿ ಎಲ್ಲರ ಪಾತ್ರವಿದೆ. ಪ್ರೊ.ಹೆಚ್.ಜಿ.ದೇವರಾಜ್‍ರವರು ಅರ್ಥಶಾಸ್ತ್ರದಲ್ಲಿ ಎತ್ತರಕ್ಕೆ ಬೆಳೆದಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾನಿಲಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅವರು ಅರ್ಥಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದು ನೂರಾರು ಶಿಷ್ಯ ವೃಂದದವರನ್ನು ಹೊಂದಿದ್ದಾರೆಂದು ಗುಣಗಾನ ಮಾಡಿದರು.

ಪ್ರೊ.ಹೆಚ್.ಜಿ.ದೇವರಾಜ್‍ರವರಲ್ಲಿ ಬದ್ದತೆ, ಶ್ರೇಷ್ಠತೆ, ಪ್ರಾಮಾಣಿಕತೆಯಿದ್ದುದರಿಂದ ಆರ್ಥಶಾಸ್ತ್ರದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಹಿರಿಯ ಕೆ.ಎ.ಎಸ್.ಅಧಿಕಾರಿ ರುದ್ರಪ್ಪ ಹನಗವಾಡಿ ಮಾತನಾಡಿ ಪ್ರೊ.ಹೆಚ್.ಜಿ.ದೇವರಾಜ್‍ರವರ ಸಾಧನೆ ಹಿಂದೆ ಅವರ ಕುಟುಂಬದವರ ಕೊಡುಗೆಯಿದೆ. ವಿಶ್ವವಿದ್ಯಾನಿಲಯ, ದೇಶ ಕಟ್ಟುವ ಶಕ್ತಿ ಅವರಲ್ಲಿದೆ. ಮತ್ತೊಬ್ಬರಲ್ಲಿರುವ ಮೌಲ್ಯವನ್ನು ಗೌರವಿಸಬೇಕು. ಯೋಗ್ಯತೆಗೆ ತಕ್ಕ ಹುದ್ದೆ ಯಾರಿಗಾದರೂ ಸಿಗದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಟಿ.ಆರ್.ಮಂಜುನಾಥ್ ವೇದಿಕೆಯಲ್ಲಿದ್ದರು.

ಡಾ.ರಾಘವೇಂದ್ರ, ಪ್ರೊ.ಹೆಚ್.ಲಿಂಗಪ್ಪ, ಪ್ರೊ.ನಾಗರಾಜ್, ಪ್ರೊ.ವೀರಭದ್ರಪ್ಪ ಜಿ.ಸಿ. ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ದುಗ್ಗಪ್ಪ ಗೆಳೆಯರ ಬಳಗ ಹಾಗೂ ಪ್ರೊ.ಹೆಚ್.ಜಿ.ದೇವರಾಜ್‍ರವರ ಕುಟುಂಬದವರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

 

Advertisement
Tags :
bengaluruchitradurgademocracyRudrappa Hanagavadisuddionesuddione newsಚಿತ್ರದುರ್ಗಪ್ರಜಾಪ್ರಭುತ್ವಬೆಂಗಳೂರುಯೋಗ್ಯತೆರುದ್ರಪ್ಪ ಹನಗವಾಡಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article