For the best experience, open
https://m.suddione.com
on your mobile browser.
Advertisement

ರಾಜಕಾಲುವೆಯನ್ನು ಅಕ್ರಮವಾಗಿ ಬಂದ್ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

07:34 PM Jan 14, 2024 IST | suddionenews
ರಾಜಕಾಲುವೆಯನ್ನು ಅಕ್ರಮವಾಗಿ ಬಂದ್ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.14 : ನಗರದ ಹೊಳಲ್ಕೆರೆ ಟೋಲ್‍ಗೇಟ್ ಸಮೀಪವಿರುವ 150 ವರ್ಷ ಹಳೆಯದಾದ ರಾಜಕಾಲುವೆಯನ್ನು ಅರಣ್ಯ ಇಲಾಖೆಯ ನಿವೃತ್ತ ನೌಕರನೋರ್ವ ಅಕ್ರಮವಾಗಿ ಮುಚ್ಚಿರುವುದರಿಂದ ನೀರು ಹರಿಯದೆ ನಿಂತಿದ್ದು, ನಲವತ್ತು ವರ್ಷಗಳಿಂದಲೂ ಇಲ್ಲಿ ವಾಸಿಸುತ್ತಿರುವ 140 ಬಡ ಕುಟುಂಬಗಳು ದುರ್ವಾಸನೆಯಿಂದ ಸಹಿಸಿಕೊಂಡು ಕಾಲ ಕಳೆಯುವಂತಾಗಿದೆ.

Advertisement

ಅರಣ್ಯ ಇಲಾಖೆಯ ನಿವೃತ್ತ ನೌಕರ ತನ್ನ ಹೆಂಡತಿ ಹೆಸರಿನಲ್ಲಿ ಜಮೀನಿದೆ ಎಂದು ದೌರ್ಜನ್ಯವೆಸಗಿ ರಾಜಕಾಲುವೆಯ ಒಂದು ಭಾಗವನ್ನು ಮಣ್ಣಿನಿಂದ ಮುಚ್ಚಿ ಚರಂಡಿ ಹೊಡೆದು ರಾಜಕಾಲುವೆಯ ಹಳ್ಳದೆ ದಿಕ್ಕನ್ನೆ ಬದಲಾಯಿಸಿದ್ದಾನೆ. ಅಕ್ರಮವಾಗಿ ಇಲ್ಲಿ ಪ್ರವೇಶಿಸಲು ಯಾರಿಗೂ ಅಧಿಕಾರವಿಲ್ಲದಿದ್ದರೂ ಗೂಂಡಾಗಿರಿ ತೋರಿ ರಾಜಕಾಲುವೆಯನ್ನು ಬಂದ್ ಮಾಡಿರುವುದರಿಂದ ಕೊಳಚೆ ನೀರು ಹರಿಯಲು ಜಾಗವಿಲ್ಲದಂತಾಗಿ ಬಡಪಾಯಿಗಳ ಮನೆ ಎದುರು ನಿಂತಿದೆ. ಇದರಿಂದ ಸೊಳ್ಳೆಗಳ ತಾಣವಾಗಿ ವಾಸಿಸಲು ಆಗದೆ ಬೇರೆ ಕಡೆ ಹೋಗಲು ಆಗದಂತ ಅತಂತ್ರ ಸ್ಥಿತಿಯಲ್ಲಿ ಹಳ್ಳದ ಏರಿಯಾ ಕೊಳಚೆ ಪ್ರದೇಶದ ನಿವಾಸಿಗಳು ಮಮ್ಮಲ ಮರುಗುತ್ತಿದ್ದಾರೆ.

ಹೊಳಲ್ಕೆರೆ ರಸ್ತೆ, ಬಸವೇಶ್ವರ ಬಾಡಿ ಬಿಲ್ಡಿಂಗ್ ಹಿಂಭಾಗದ ನಿವಾಸಿಗಳಾದ ಅನ್ವರ್‍ಭಾಷ ಮತ್ತಿತರರು ರಾಜಕಾಲುವೆಯನ್ನು ಬಂದ್ ಮಾಡಿರುವ ವ್ಯಕ್ತಿ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

Tags :
Advertisement