For the best experience, open
https://m.suddione.com
on your mobile browser.
Advertisement

ಜುಲೈ 20 ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ : ನೇರ್ಲಗುಂಟೆ ರಾಮಪ್ಪ

07:27 PM Jul 17, 2024 IST | suddionenews
ಜುಲೈ 20 ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ   ನೇರ್ಲಗುಂಟೆ ರಾಮಪ್ಪ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ. 17 : ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ ಜುಲೈ 20 ರಂದು ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ನಡೆಯಲಿದೆ ಎಂದು ಭೋವಿ ಸಮಾಜದ ಮುಖಂಡರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನೇರ್ಲಗುಂಟೆ ರಾಮಪ್ಪ ತಿಳಿಸಿದರು.

Advertisement

ಭೋವಿ ಗುರುಪೀಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಶಿವರಾಜ್‍ತಂಗಡಗಿ, ಬಿಜೆಪಿ. ಕಾಂಗ್ರೆಸ್ ಶಾಸಕರು, ರಾಜ್ಯದ ನಾನಾ ಭಾಗಗಳಿಂದ ಭೋವಿ ಸಮಾಜದ ಮುಖಂಡರುಗಳು ಆಗಮಿಸಲಿದ್ದಾರೆ. ಸಾಲು ಮರದ ತಿಮ್ಮಕ್ಕನವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ವಧು-ವರರ ಅನ್ವೇಷಣೆ, ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ಐ.ಎ.ಎಸ್. ಐ.ಪಿ.ಎಸ್. ಮಾಡಿರುವ ಭೋವಿ ಜನಾಂಗದವರಿಗೆ ಸನ್ಮಾನ. ಭೋವಿ ಅಭಿವೃದ್ದಿ ನಿಗಮಕ್ಕೆ ನೇಮಕಗೊಂಡಿರುವ ರವಿಕುಮಾರ್ ಹಾಗೂ ಕೆ.ಪಿ.ಎಸ್.ಸಿ. ಸದಸ್ಯರಾಗಿರುವ ಒಬ್ಬರನ್ನು ಗೌರವಿಸಲಾಗುವುದು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು ನಾಡಿನಾದ್ಯಂತ ಸಂಚರಿಸಿ ಭೋವಿ ಜನಾಂಗವನ್ನು ಆಹ್ವಾನಿಸುತ್ತಿದ್ದಾರೆ. ಭೋವಿ ಜನೋತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದು, ಭೋವಿ ಸಮಾಜ ಜಾಗೃತರಾಗಿ ಸಂಘಟನೆಯಲ್ಲಿ ತೊಡಗಿದೆ ಎನ್ನುವುದನ್ನು ಎಲ್ಲಾ ಪಕ್ಷಗಳಿಗೂ ಎಚ್ಚರಿಕೆ ನೀಡುತ್ತಿದ್ದೇವೆಂದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಪೀಠಾಧ್ಯಕ್ಷರಾಗಿ 25 ವರ್ಷಗಳಾಗಿರುವುದರಿಂದ ದೀಕ್ಷಾ ರಜತ ಮಹೋತ್ಸವ ಆಚರಿಸುತ್ತಿದ್ದೇವೆ. ರಾಜ್ಯದಲ್ಲಿ 35 ಲಕ್ಷದಷ್ಟು ಜನಸಂಖ್ಯೆಯಿದ್ದು, ಸಂಘಟನೆಯಾಗುವುದು ಇದರ ಉದ್ದೇಶ. ಜನಾಂದೋಲನ ರೂಪದಲ್ಲಿ ಆಚರಿಸುತ್ತಿರುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲರನ್ನು ಆಹ್ವಾನಿಸಲಾಗಿದೆ ಎಂದು ನುಡಿದರು.

ಭೋವಿ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಡಿ.ತಿಮ್ಮಣ್ಣ ಮಾತನಾಡಿ 1982 ರಲ್ಲಿ ಭೋವಿ ಸಮಾಜ ಅಷ್ಟೊಂದು ಸಂಘಟಿತರಾಗಿರಲಿಲ್ಲ. ನಮ್ಮ ಸಮಾಜಕ್ಕೆ ಮಂಜರಿ ಹನುಮಂತಪ್ಪನವರ ಕೊಡುಗೆಯಿದೆ. ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ದೀಕ್ಷಾ ರಜತ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಭೋವಿ ಸಮಾಜದ ಮುಖಂಡರುಗಳಾದ ತಿಪ್ಪೇಸ್ವಾಮಿ, ಈ.ಮಂಜುನಾಥ್, ಹೆಚ್.ಲಕ್ಷ್ಮಣ್, ಗೌನಳ್ಳಿ ಗೋವಿಂದಪ್ಪ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Advertisement
Tags :
Advertisement