Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜುಲೈ 20 ರಂದು ಗಿನ್ನಿಸ್ ದಾಖಲೆ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಆಚರಣೆ : ಎಸ್.ರವಿಕುಮಾರ್

05:36 PM Jul 07, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ. 07 :ಪಕ್ಷಾತೀತವಾಗಿ ಸಮಾಜವನ್ನು ಸಂಘಟಿಸಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ದೀಕ್ಷಾ ರಜತ್ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಎಲ್ಲಾ ಪಕ್ಷದ ಸಮಾಜದ ಬಾಂಧವರು ಸೇರಿ ಸಮಾಜ ಸಂಘಟಿಸುವುದರೊಟ್ಟಿಗೆ ಗಿನ್ನೀಸ್ ದಾಖಲೆ ಬರೆಯುವ ರೀತಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಜುಲೈ 20 ರಂದು ನಡೆಸಬೇಕು ಎಂದು ತಿಳಿಸಿದರು.

Advertisement

ದೀಕ್ಷಾ ರಜತ ಮಹೋತ್ಸವವನ್ನು 25 ಬಗೆಯ ಕಿರು ಕಾರ್ಯಕ್ರಮಗಳನ್ನು ಸಂಘಟಿಸಿ ಅರ್ಥಪೂರ್ಣಗೊಳಿಸೋಣ. ಶ್ರೀಗಳು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟçಮಟ್ಟದ ಸಂಘಟನೆಯಾಗಲು ಕಾರಣೀಭೂತರಾಗಿದ್ದಾರೆ. ವಿದ್ಯಾವಂತರು ಸಂಘಟನೆಗೆ ಸಮಯ ನೀಡಬೇಕು ಹಾಗೂ ಸಂಘಟನೆಯ ಭಾಗವಾಗಿ ನಿಲ್ಲಬೇಕು ಎಂದು ಹೇಳಿದರು.

ಅಧಿಕಾರಿಗಳು ವೃತ್ತಿಗಂಟಿಕೊಳ್ಳದೆ, ಸ್ವಾರ್ಥಿಗಳಾಗದೇ, ಸಮಷ್ಠಿಯ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎನ್ನುವ ಭಾವ ಬರಬೇಕು. ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಇದಕ್ಕೆ ಸಮಾಜದ ಶ್ರೀಗಳು ದಿಕ್ಸೂಚಿಯಾಗಿ ಸಾಗುತ್ತಿದ್ದಾರೆ. ಕೂಲಿ ಕಾರ್ಮಿಕ ಮಕ್ಕಳು ಬಾಲಕಾರ್ಮಿಕರಾಗದೇ ವಿದ್ಯಾವಂತರಾಗಲು ಅವರನ್ನು ಗುರುತಿಸಿ, ಪರಿವರ್ತಿಸಿ ಪ್ರೇರಣೆ ನೀಡಬೇಕು. ಭೋವಿ ನಿಗಮ ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಶ್ರೀಗಳು ನಿಶ್ಯಬ್ದದಂತೆ ನೂರಾರು ಮಕ್ಕಳನ್ನು ದತ್ತು ಪಡೆದು ಶೈಕ್ಷಣಿಕ ಹಾಗೂ ಔದ್ಯೋಗಿಕ ಸೇವೆಯನ್ನು ಮಾಡಿದ್ದಾರೆ. ಸಂಚಾರಿ ಮೂರ್ತಿಗಳು ಅವರ ಪರಿಶ್ರಮದಿಂದ ಭೋವಿ ಸಮಾಜ ಸಂಘಟನಾ ಸಮಾಜವಾಗಿ ಹೊರಹೊಮ್ಮಿದೆ. ಸರ್ಕಾರದಲ್ಲಿ ರಾಜಕಾರಣಿಗಳ ಮಾತಿಗಿಂತ ಶ್ರೀಗಳ ಮಾತಿಗೆ ಹೆಚ್ಚು ಮೌಲ್ಯ. ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರೀಗಳ ಸಂಘಟನಾ ಶಕ್ತಿ ಪರಿಣಾಮಕಾರಿಯಾಗಿದೆ.

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ರಾಜಕೀಯ ಪ್ರಮುಖರು, ಶ್ರೀಗಳ ಬಳಿ ಬರುತ್ತಿದ್ದಾರೆ. ಸಮಾಜದ ಋಣ ತೀರಿಸುವ ಪ್ರಯತ್ನದಲ್ಲಿರುವವನೇ ನಿಜವಾದ ಸಮಾಜದ ನಾಯಕ ಎಂದು ಹೇಳಿದರು.

ಶ್ರೀಗಳ ಜೊತೆ ಪ್ರವಾಸದಲ್ಲಿ ಶ್ರೀಗಳ ಸಹನೆ, ತಾಳ್ಮೆ, ಜಾಣ್ಮೆ, ಚಾಕಚಕ್ಯತೆ, ಚುರುಕತೆ ತಿಳಿದುಕೊಂಡಿದ್ದೇನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಶ್ರೀಗಳಿಗೆ ತನು ಮನ ಧನ ಸೇವೆಗೆ ತಾಮುಂದು, ನಾಮುಂದು ಎಂಬ ಸ್ಪರ್ಧೆಯಲ್ಲಿ ಸೇವೆ ಮಾಡಬೇಕು ಶ್ರೀಮಠದ ಗುರುಕುಲಕ್ಕೆ ಧವಸ ದಾನ್ಯ ನೀಡುವ ಮೂಲಕ ನಮ್ಮ ಮನೆಗೆ ವಹಿಸುವ ಕಾಳಜಿಯಂತೆ ಶ್ರೀಮಠಕ್ಕೂ ನಾವು ಕಾಳಜಿ ವಹಿಸಬೇಕು ಎಂದು ಹೇಳಿದರು.

ಭೋವಿ ಅಭಿವೃದ್ಧಿ ನಿಗಮ ಸುಲಿಗೆ ಕೇಂದ್ರವಲ್ಲ, ಸುಧಾರಣಾ ಕೇಂದ್ರವಾಗಿ ಪರಿವರ್ತಿಸುವೆ. ಸೌಲಭ್ಯ ಪಡೆಯದವರಿಗೆ ಸೌಲಭ್ಯ ಕಲ್ಪಿಸಲಾಗುವುದು, ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ, ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್.ಐ.ಟಿ ತನಿಖೆಯಿಂದ ಸತ್ಯ ತಿಳಿಯುತ್ತದೆ.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಶ್ರೀ ತಿಪ್ಪೇಸ್ವಾಮಿ ಮಾತನಾಡಿ ಯಾವ ಪಕ್ಷದಿಂದಲೂ ಸಂಸತ್ ಚುನಾವಣೆಗೆ ಜಿಲ್ಲೆಯಲ್ಲಿ ಟಿಕೇಟ್ ಸಿಗದಿರುವುದಕ್ಕೆ ಒಗ್ಗಟ್ಟಿನ ಕೊರತೆ. ಟಿಕೇಟ್ ಬೇಕಾದಾಗ ಎಲ್ಲರೂ ಬರುತ್ತಾರೆ, ನಂತರ ಯಾರು ಸೇರುವುದಿಲ್ಲ ಸ್ವಾಮೀಜಿಯವರಿಂದ ಮಾತ್ರ ಸಮಾಜವನ್ನು ಒಗ್ಗಟ್ಟಾಗಿ ಸಂಘಟಿಸಲು ಸಾಧ್ಯವಾಗಿದೆ. ದಾರ್ಶನಿಕರು ಅವರು ಮಾಡಿದ ಒಳ್ಳೆಯ ಕೆಲಸಗಳಿಂದ ದೇವರಾಗಿದ್ದಾರೆ. ಹಾಗಾಗಿ ಒಳ್ಳೆಯ ಕೆಲಸ ಮಾಡಿದವರಿಗೆ ಎಂದೆAದೂ ಹೆಸರು ಇದ್ದೇ ಇರುತ್ತದೆ. ಮಂಜೂರಿ ಹನುಮಂತಪ್ಪ ಸಮಾಜದ ಆಸ್ತಿಯಾಗಿದ್ದಾರೆ. ಹಾಗೆಯೇ ರಾಜಕಾರಣಿಗಳು ಸಮಾಜವನ್ನು ಕೈಹಿಡಿದು ಎತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.

ಸೂರಗೊಂಡನಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಸಂಕಷ್ಟದಲ್ಲಿರುವವರನ್ನು ಸಂತೈಸುವ ಸಂತ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ. ಸ್ತಿçà ಸಂಕುಲವನ್ನು ಜಾಗೃತಿ ಮೂಡಿಸೋಣ, ಹೋರಾಟದ ಪಥದಲ್ಲಿರುವ ಗುರುಗಳಿಗೆ ರಕ್ಷ ಕವಚವಾಗಿ ಸಂಘ ಸಂಸ್ಥೆಯ ಮುಖಂಡರು ನಿಲ್ಲಬೇಕು. ಸಕುಟುಂಬ ಸಮೇತರಾಗಿ ದೀಕ್ಷಾ ಮಹೋತ್ಸವದಲ್ಲಿ ಭಾಗವಹಿಸಲು ಪ್ರೇರಣಾ ನೀಡುವ ಜಾಗೃತಿ ಯಾತ್ರೆ ಮಾಡೋಣ ಎಂದು ತಿಳಿಸಿದರು.

ಹೊಸದುರ್ಗ ಚಂದ್ರಪ್ಪ ಮಾತನಾಡಿ, ಹಳ್ಳಿ, ಹಟ್ಟಿ, ಗ್ರಾಮ, ಕಾಲೋನಿಗಳಲ್ಲಿ ವಾಸಿಸುವ ಜನಗಳ ಜಾಗೃತಿಗಾಗಿ ಕಂಕಣಬದ್ಧವಾಗಿ ಸಂಘಟನೆಯನ್ನು ಮಾಡಲು ಸಂಪೂರ್ಣ ಸಮಯವನ್ನು ನೀಡಬೇಕು ಎಂದು ಹೇಳಿದರು.

ಹೊಳಲ್ಕೆರೆ ಮಾಸ್ಟರ್ ರಂಗಪ್ಪ ಮಾತನಾಡಿ, ಸಂಘ ಜಿಲ್ಲೆಯಿಂದ ತಾಲ್ಲೂಕು, ತಾಲ್ಲೂಕಿನಿಂದ ಗ್ರಾಮಕ್ಕೆ ಕೇಂದ್ರೀಕರಣವಾದಾಗ ಸಂಘಟನೆ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಎಸ್.ಜೆ.ಎಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ.ಹನುಮಂತಪ್ಪ ಗೋಡೆಮನೆ, ಇ.ಮಂಜುನಾಥ, ಹೆಚ್.ಆಂಜನೇಯ, ಹೊಸದುರ್ಗದ ಸುಬ್ಬಯ್ಯ, ರಾಮಚಂದ್ರಪ್ಪ, ಮಂಜಪ್ಪ, ಎನ್.ಪಿ.ಭರತ್, ಚಂದ್ರಶೇಖರ್, ಉಮೇಶ್, ಭೂತಭೋವಿ, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮುಖಂಡರು ಭಾಗವಹಿಸಿದ್ದರು.

ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ ಸಂಘಟನಾ ಮನೋಭಾವ ಇಲ್ಲದಾಗುತ್ತದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.

ಸಮುದಾಯದ ಜನತೆಗೆ ಸಂಘಟನೆಯನ್ನು ಮೂಡಿಸಿದರೆ ರಾಜಕೀಯವಾಗಿ ತೀಕ್ಷ÷್ಣತೆಯನ್ನು ಬೆಳೆಸಿಕೊಳ್ಳುತ್ತಾರೆ. ಚಿಕ್ಕ ಸಭೆಗಳೇ ಬೃಹತ್ ಸಭೆಗಳಾಗಿ ಹೊರಹೊಮ್ಮುತ್ತವೆ ಹಾಗಾಗಿ ಸಂಘಟನೆಯನ್ನು ನಿರಂತರವಾಗಿ ಸಂಘಟಿಸಬೇಕು ಎಂದು ಹೇಳಿದರು.

ಜನರು ವಿಧಾನಸಭೆಯ ಹೊರಗೆ ಧ್ವನಿ ಎತ್ತಬೇಕು, ಜನಪ್ರತಿನಿಧಿಗಳು ವಿಧಾನಸಭೆಯ ಒಳಗೆ ಸಮಾಜದ ಧ್ವನಿಯಾದಾಗ ಮಾತ್ರ ಸಂಘಟನೆಯಾದAತೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು. ಸಂಘಟನೆ ಜನರ ಜೊತೆ ಇರಬೇಕು ಆಗ ಗಟ್ಟಿಯಾಗುತ್ತದೆ ಹಾಗೂ ಜನರ ಜೊತೆ ಸದಾಕಾಲ ಸಧೃಢವಾಗಿ ಉಳಿಯಲು ಮತ್ತು ಬದುಕಲು ಅವಕಾಶ ಒದಗಿಸುತ್ತದೆ. ಕುಟುಂಬದ ಬಗ್ಗೆ ಹೇಗೆ ಸಮಾಲೋಚನೆ ಮಾಡುತ್ತೇವೆಯೋ ಅದೇ ರೀತಿ ಸಮಾಜ ಸಂಘಟನೆಯ ಬಗ್ಗೆ ನಿರಂತರ ಯೋಜನೆ ಮತ್ತು ಸಮಾಲೋಚನೆ ಮಾಡಬೇಕು. ಆರ್ಥಿಕವಾಗಿ ಸಬಲತೆ ಇರುವ ಸಮಾಜಕ್ಕೆ ಗೌರವ ಹೆಚ್ಚು ಹಾಗಾಗಿ ಶಿಕ್ಷಣ, ಆರ್ಥಿಕ ಸಬಲತೆಗೆ ಹೆಚ್ಚು ಮಹತ್ವ ಕೊಡಬೇಕು, ಸಮಾಜಕ್ಕೆ ಅವಶ್ಯಕವಾದ ಹಕ್ಕುಗಳನ್ನು ಪೂರೈಕೆಗೆ ಸದಾಕಾಲ ಸಂಘಟಿತರಾಗಬೇಕು ಎಂದು ಹೇಳಿದರು.

Advertisement
Tags :
bengaluruchitradurgaDeeksha Rajata Mahotsava celebrationsGuinness World RecordsJagadguru Sri Immadi Siddharameshwar SwamijiS. Ravikumarsuddionesuddione newsಎಸ್.ರವಿಕುಮಾರ್ಗಿನ್ನಿಸ್ ದಾಖಲೆ ರೀತಿಚಿತ್ರದುರ್ಗಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಜುಲೈ 20ದೀಕ್ಷಾ ರಜತ ಮಹೋತ್ಸವ ಆಚರಣೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article