For the best experience, open
https://m.suddione.com
on your mobile browser.
Advertisement

ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ : ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಒತ್ತಾಯ

04:41 PM Feb 15, 2024 IST | suddionenews
ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ   ಪಿಲ್ಲಹಳ್ಳಿ ಸಿ ಚಿತ್ರಲಿಂಗಪ್ಪ ಒತ್ತಾಯ
Advertisement

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ ಫೆ. 15 :  ಆಂಧ್ರ ಗಡಿಭಾಗದಲ್ಲಿ ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳವರ ಮೂಲಕ ಸರ್ಕಾರವನ್ನು ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಒತ್ತಾಯಿಸಿದ್ದಾರೆ. 

Advertisement

ಹುಂಡೇಕರ್ ಸಮಿತಿ, 2008ರ ಎಂ.ಬಿ.ಪ್ರಕಾಶ್ ಸಮಿತಿ ವರದಿ ಅನ್ವಯ ಆಂಧ್ರ ಗಡಿಭಾಗದ ಚಿತ್ರದುರ್ಗ ಜಿಲ್ಲೆಯ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾದ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಬಹುದು ಎನ್ನುವ ಶಿಫಾರಸ್ಸು ಮಂಡಿಸಲಾಗಿತ್ತು. ಶಿಫಾರಸ್ಸಿನ ವರದಿ ಅನ್ವಯ ನಮ್ಮಗಳ ಆಳುವ ಸರ್ಕಾರಗಳು ಈಗಾಗಲೇ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಿದ್ದರೆ ಇತಿಹಾಸದ ಪುಟ ಸೇರುತಿತ್ತು ಪರಶುರಾಂಪುರ. ತಾಲ್ಲೂಕ್ ಆಗಲಿಕ್ಕೆ ಮಾನದಂಡದ ಕಡತಗಳು ಹಾಗೂ ವಿಷಯಗಳು ಸರ್ಕಾರದ ಬಳಿಯಿವೆ. ಕಳೆದ 30 ವರ್ಷಗಳಿಂದ ಆಯಾ ಪಕ್ಷದ ಸರ್ಕಾರಗಳಿಗೆ, ಆಯಾಪಕ್ಷದ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ನಿರಂತರ ವಿವಿಧ ತೆರನಾದ ಹೋರಾಟಗಳನ್ನು ಮಾಡುತ್ತಾ ಬಂದು ಸರ್ಕಾರದ ಗಮನ ಸೆಳೆದಿದ್ದೇವೆ.

Advertisement
Advertisement

ರಾಜಕೀಯ ಸ್ಥಿತ್ಯಾಂತರ ಕಾರಣಗಳ ನೆಪದೊಡ್ಡಿ ಮೀನಾಮೇಷ ಏಣಿಸುತ್ತಾ ಪರಶುರಾಂಪುರವನ್ನು ತಾಲ್ಲೂಕು ಆಗಿ ಘೋಷಣೆ ಮಾಡದಿರುವುದು ಈ ಭಾಗದ ಜನ ಸಾಮಾನ್ಯರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. 2019ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಸಲ್ಲಿಸಲಾಗಿತ್ತು. ಆಗ ಅವರು ಬಹಿರಂಗ ಸಭೆಯಲ್ಲಿ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದರು.

2023ರ ವಿಧಾನಸಭಾ ಚುನಾವಣೆ ಸಂದರ್ಭದ ಬಹಿರಂಗ ಸಭೆಯಲ್ಲಿ ಸೇರಿದ್ದ ಜನರಿಗೆ ನಮ್ಮ ಸರ್ಕಾರ ಬರುವುದು ನಿಶ್ಚಿತ, ಪರಶುರಾಂಪುರ ತಾಲ್ಲೂಕ್ ಆಗುವುದು ನಿಶ್ಚಿತ ಎಂದು ಭರವಸೆಯಿತ್ತಿದ್ದರು. ಆದರೆ ಸರ್ಕಾರ ಬಂದು ಇಷ್ಟು ದಿನವಾದರೂ ಸಹಾ ಪರಶುರಾಂಪುರ ತಾಲ್ಲೂಕ್ ಆಗಿ ಘೋಷಣೆ ಆಗಿಲ್ಲ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 3ನೇ ಬಾರಿ ಶಾಸಕರಾದ  ಟಿ.ರಘುಮೂರ್ತಿ ರವರು, 2023ರ 3ನೇ ಬಾರಿ ಶಾಸಕರಾದ ಸಂದರ್ಭದಲ್ಲಿ ಪರಶುರಾಂಪುರ ತಾಲ್ಲೂಕ್ ಆಗಿ ಘೋಷಣೆ ಆಗದಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ' ಎಂದು ಶಪಥ ಮಾಡಿದ್ದಲ್ಲದೆ ಎರಡು ಬಾರಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಮಾತನಾಡಿದ್ದಾರೆ. ಹಾಗೂ ಮಾಡಲೇಬೇಕು, ಪರಶುರಾಂಪುರ ಹೋಬಳಿಯ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಾಗೂ ಅಧಿವೇಶನದಲ್ಲಿ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಲೆಬೇಕೆಂದು ಇಡೀ ಪರಶುರಾಮಪುರ ಜನಸಾಮಾನ್ಯರ ಪರವಾಗಿ ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಪ್ರಗತಿಪರ ರೈತ ಹೋರಾಟಗಾರರಾದ ಹಾಲಿಗೊಂಡನಹಳ್ಳಿ, ಕೆ.ವಿ.ರುದ್ರಮುನಿಯಪ್ಪ, ಪರಶುರಾಂಪುರದ ರೈತ ಮುಖಂಡ ಬಿ.ಕೆ.ರಜಾಕ್ ಸಾಬ್, ಚಂದ್ರಣ್ಣ, ಪಿಲ್ಲಹಳ್ಳಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.

Advertisement
Tags :
Advertisement