Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೊಸದುರ್ಗ | ಕೃಷಿ‌ ಮಾರುಕಟ್ಟೆಯಲ್ಲಿ ಡಿ. ಗ್ರೂಪ್ ನೌಕರ ಆತ್ಮಹತ್ಯೆ..!

05:03 PM May 20, 2024 IST | suddionenews
Advertisement

ಸುದ್ದಿಒನ್, ಹೊಸದುರ್ಗ, ಮೇ. 20 : ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ. 55 ವರ್ಷದ ಜಗದೀಶ್ ಆತ್ಮಹತ್ಯೆಗೆ ಶತಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Advertisement

ಜಗದೀಶ್ ಎಪಿಎಂಸಿ ಇಲಾಖೆಯ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇಂದು ಇದ್ದಕ್ಕಿದ್ದ ಹಾಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಗದೀಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದೇ ಡೆತ್ ನೋಟ್ ಆಗಲಿ ಸಿಕ್ಕಿಲ್ಲ.

ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ತನಿಖೆಯ ಬಳಿಕವಷ್ಟೆ ಮೃತನ ಸಾವಿಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸ್ಥಳಕ್ಕೆ ಹೊಸದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ.

Advertisement

Advertisement
Tags :
agricultural marketbengaluruchitradurgaD Group employeesuddionesuddione newssuicideಆತ್ಮಹತ್ಯೆಕೃಷಿ‌ ಮಾರುಕಟ್ಟೆಚಿತ್ರದುರ್ಗಡಿ. ಗ್ರೂಪ್ ನೌಕರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article