ಸಿ.ಟಿ ರವಿಯವರು ರಾಜ್ಯದ ಕ್ಷೌರಿಕ ಕ್ಷಮೆ ಕೇಳಬೇಕು : ಎನ್.ಡಿ.ಕುಮಾರ್
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ.06 : ಯಲ್ಲಾಪುರಲ್ಲಿ ಇತ್ತೀಚಿಗೆ ನಡೆದ ರಾಜಕೀಯ ಸಭೆ ಒಂದರಲ್ಲಿ ಮಾಜಿ ಸಚಿವ ಸಿಟಿ ರವಿಯವರು ಮೋಸ,ವಂಚನೆ, ಕಳ್ಳತನ ಮತ್ತು ದರೋಡೆಯನ್ನು ತಲೆ ಬೋಳಿಸುವುದಕ್ಕೆ ಹೋಲಿಕೆ ಮಾಡಿ ನಿಂದಿಸಿರುವುದು ನಿಜಕ್ಕೂ ಸೋಚನಿಯ ಸಂಗತಿ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಹಾಗೂ ಸವಿತಾ ಸಮಾಜದ ಜಿಲ್ಲಾ ಕಾರ್ಯದರ್ಶಿ ಎನ್.ಡಿ.ಕುಮಾರ್ ಹೇಳಿದರು
ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ಸವಿತಾ ಕ್ಷೌರಿಕ ಸಮಾಜವನ್ನು ಅವಮಾನ ಮಾಡಲೇಬೇಕೇನ್ನುವ ಉದ್ದೇಶದಿಂದ ಬುದ್ದಿ ಇಲ್ಲದ ರಾಜಕಾರಣಿ ಬಿ.ಜೆ.ಪಿಯ ಮಾಜಿ ಶಾಸಕ ಸಿ.ಟಿ.ರವಿಯವರು ದೇಶಭಕ್ತನಂತೆ ಪೂಸ್ ಕೂಡುವ ವ್ಯಕ್ತಿ ಈ ಭಾರತ ದೇಶದಲ್ಲಿ ಅವಿಭಾಜ್ಯ ಅಂಗವಾಗಿರುವ ಕ್ಷೌರಿಕ ವೃತಿಯ ಬಗ್ಗೆ ಕೀಳುಭಾವನೆ ಹೊಂದಿರುವ ಈತ ಯಾವ ದೇಶ ಭಕ್ತ. ಈತ ನಿಜಕ್ಕೂ ರಾಜಕೀಯ ನಾಯಕನಾಗುವುದಕ್ಕೆ ನಾಲಯಕ್ ಸೌಂದರ್ಯ ವರ್ದಕಗಳಿಂದ ಟ್ಯಾಕ್ಸ್ ಕಟ್ಟುತ್ತೆವೆ. ಇಂತಹ ಹಲವಾರು ವೃತ್ತಿಗಳಿಂದ ಬರುವ ಟ್ಯಾಕ್ಸನಿಂದ ಜೀವನ ನೆಡೆಸುವ ಇಂತಹ ರಾಜಕಾರಣಿಗಳು ಅನ್ನ ತಿನ್ನುವ ಬದಲು ಇನ್ನೆನಾದರೂ ತಿನ್ನುತ್ತಾರಾ? ಎಂದಿದ್ದಾರೆ.
ಜವಾಬ್ದಾರಿ ಇಲ್ಲದ ಇಂತವರ ಹೇಳಿಕೆಯಿಂದ ಯಾರ ಹಂಗಿಲ್ಲದೆ ನಿಸ್ವಾರ್ಥದಿಂದ ಸ್ವಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಕ್ಷೌರಿಕ ಸವಿತಾ ಸಮಾಜದ ಕುಲ ಕಾಯಕಕ್ಕೆ ಧಕ್ಕೆ ಉಂಟಾಗಿದೆ ಎಂದು ಎನ್.ಡಿ.ಕುಮಾರ್ ಆಕ್ರೋಶ ವ್ಯಕ್ತ ಪಡಿಸಿ ಮಾತನಾಡಿ ಸಿ ಟಿ ರವಿಯವರೇ ತಾವು ಸುಂದರವಾಗಿ ಕಾಣುತ್ತಿದ್ದಿರಿ ಅಂದರೆ ಅದಕ್ಕೆ ಸವಿತಾ ಕ್ಷೌರಿಕ ಸಮಾಜ ಕಾರಣ ಅನ್ನೋದು ಮರೆಯಬೇಡಿ ಇದೊಂದು ಪುಣ್ಯದ ಕೆಲಸ, ಕರ್ಮ ಕಳೆಯುವ ಕೆಲಸ ದೇವರಿಗೆ ಹರಕೆಯ ಮುಡಿಯನ್ನು ಕೊಟ್ಟು ಭಕ್ತ ಸಂತುಷ್ಟನಾದ ಕೆಲಸ ಸಿ.ಟಿ ರವಿ ಅವರೇ ತಮ್ಮ ಮನೆಯ ಮಕ್ಕಳಿಗೆ ನಾಮಕರಣ ಮಾಡುವ ಮುಂಚೆ ತಲೆಯನ್ನು ಬೋಳಿಸಿ, ನಂತರ ನಾಮಕರಣ ಮಾಡುತ್ತೀರಾ, ಜನ್ಮದಾತರು ಕಾಲುವಾದಾಗ ಜನ್ಮದ ಕರ್ಮವನ್ನು ಕಳೆಯಲು ತಲೆ ಬೋಳಿಸಿಕೊಳ್ಳಿರಾ ತಮ್ಮ ಕಷ್ಟದ ಸಂದರ್ಭದಲ್ಲಿ ದೇವರಿಗೆ ಹರಕೆಯನ್ನು ಹೊತ್ತು ಹರಕೆಯನ್ನು ಸಲ್ಲಿಸುವುದು ಸಾಮಾನ್ಯ ವಿಷಯ ನೀವು ಸಹ ಹರಕೆಯನ್ನು ಸಲ್ಲಿಸಿದವರು ಇದ್ದೀರಾ ಆದರೂ ಸಹ ಇಂಥ ಪುಣ್ಯದ ಕೆಲಸವನ್ನ ನೀಚ ಲಂಪಟ ಮೋಸ ದರೋಡೆಗೆ ಹೋಲಿಕೆ ಮಾಡಿದ್ದು ಎಷ್ಟು ಸರಿ ರೀ ? ಎಂದು ಪ್ರಶ್ನಿಸಿ ಮಾತನಾಡಿ ತಮ್ಮ ನಾಲಿಗೆ ಬೀಗಿ ಹಿಡಿದು ಬುದ್ದಿವಂತ ರಾಜಕಾರಣಿ ಪದ ಬಳಿಸಿ ಮಾತನಾಡಿ ಎಂದು ಸಲಹೆ ನೀಡಿದರು.
ಈ ಕೂಡಲೇ ಮಾಜಿ ಸಚಿವರಾದ ಸಿ.ಟಿ ರವಿಯವರು ರಾಜ್ಯದ ಕ್ಷೌರಿಕರನ್ನು ಕ್ಷಮೆ ಕೇಳಬೇಕಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಎನ್.ಡಿ.ಕುಮಾರ್, ರಂಜಿತ, ಆರ್.ಶ್ರೀನಿವಾಸ್, ಘನಶಾಮ್ ಹಾಗೂ ಇತರರು ಆಗ್ರಹಿಸಿ ಒತ್ತಾಯಿಸಿದ್ದಾರೆ.