For the best experience, open
https://m.suddione.com
on your mobile browser.
Advertisement

ವಸ್ತುಗಳನ್ನು ಖರೀದಿಸುವ ಗ್ರಾಹಕರು ರಸೀದಿಯನ್ನು ಕೇಳಿ ಪಡೆಯಬೇಕು : ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

03:39 PM Dec 28, 2023 IST | suddionenews
ವಸ್ತುಗಳನ್ನು ಖರೀದಿಸುವ ಗ್ರಾಹಕರು ರಸೀದಿಯನ್ನು ಕೇಳಿ ಪಡೆಯಬೇಕು   ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ
Advertisement

Advertisement

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್.28 : ತೂಕ ಮತ್ತು ಅಳತೆಯಲ್ಲಿ ಗ್ರಾಹಕರನ್ನು ವಂಚಿಸುವವರ ವಿರುದ್ದ ಕ್ರಮ ಜರುಗಿಸಿದಾಗ ಗ್ರಾಹಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement
Advertisement

ಎಲ್ಲರೂ ಒಂದಲ್ಲ ಒಂದು ರೀತಿಯ ಗ್ರಾಹಕರೆ. ಅರಿವಿನ ಕೊರತೆಯಿಂದ ಮೋಸ ಹೋಗುತ್ತಿರುವವರಲ್ಲಿ ಜಾಗೃತಿ ಮೂಡಿಸಬೇಕಿದೆ. ಎ.ಪಿ.ಎಂ.ಸಿ.ಯಲ್ಲಿ ರೈತರು ಸಾಕಷ್ಟು ವಂಚನೆಗೊಳಗಾಗುವ ಸಂಭವಗಳಿರುತ್ತವೆ. ಯಾವುದೇ ವಸ್ತುವನ್ನು ಖರೀದಿಸಿದರು ಗ್ರಾಹಕರು ರಸೀದಿ ಕೇಳಿ ಪಡೆಯಬೇಕು. ಆಗ ಗುಣಮಟ್ಟದಲ್ಲಿ ಲೋಪವಾಗಿದ್ದರೆ ಪರಿಹಾರ ಪಡೆಯಲು ಸುಲಭವಾಗುತ್ತದೆ. ಆನ್‍ಲೈನ್‍ನಲ್ಲಿ ತರಿಸುವ ವಸ್ತುಗಳಲ್ಲಿಯೂ ಕೆಲವೊಮ್ಮೆ ವಂಚನೆಯಾಗಬಹುದು. ಹೆಚ್ಚಿನ ಬಡ್ಡಿ ಆಸೆಗಾಗಿ ಹಣ ಹೂಡುವವರು ಎಚ್ಚರಿಕೆಯಿಂದಿದ್ದರೆ ಮೋಸ ವಂಚನೆಗೆ ಒಳಗಾಗುವ ಪ್ರಸಂಗ ಬರುವುದಿಲ್ಲ ಎಂದರು.

ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ಅನ್ನ, ಬಟ್ಟೆ, ವಸತಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳುವ ರೇಷನ್‍ನ ತೂಕದಲ್ಲಿ ಮೋಸವಾದರೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ನ್ಯಾಯ ಪಡೆದುಕೊಳ್ಳಬಹುದು. ಬಿ.ಪಿ.ಎಲ್.ಕಾರ್ಡ್‍ನಿಂದ ಏನೇನು ಸೌಲತ್ತುಗಳಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ತೂಕ ಮತ್ತು ಅಳತೆಯಲ್ಲಿ ವಂಚನೆಯಾದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಪಡೆಯಬಹುದು. ಹಣ ನೀಡಿ ಯಾವುದೇ ವಸ್ತುವನ್ನು ಖರೀಧಿಸುವ ಗ್ರಾಹಕರು ಮೊದಲು ಗುಣಮಟ್ಟವನ್ನು ಪರಿಶೀಲಿಸಬೇಕು. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ತಡವಾಗುವುದಿಲ್ಲ. ಕೇವಲ ಮೂರು ತಿಂಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕೌಟಿಲ್ಯನ ಅರ್ಥಶಾಸ್ತ್ರದ ಕಾಲದಿಂದಲೂ ಗ್ರಾಹಕರಿದ್ದಾರೆ. ಗ್ರಾಹಕರು ಹಣ ನೀಡಿ ವಸ್ತು ಖರೀಧಿಸಿದಾಗ ಬಿಲ್ ಪಡೆಯುವುದು ಅಷ್ಟೆ ಮುಖ್ಯ. ದಾಖಲೆಗಳನ್ನು ಇಟ್ಟುಕೊಂಡಿದ್ದರೆ ಮೋಸ ಹೋದಾಗ ಪರಿಹಾರ ಪಡೆಯಬಹುದು. ನಮ್ಮ ಆಯೋಗದಲ್ಲಿ ಒಂದು ರೂ.ನಿಂದ ಐವತ್ತು ಲಕ್ಷ ರೂ.ಗಳವರೆಗೆ ಪರಿಹಾರ ದೊರಕುತ್ತದೆ. ರಾಷ್ಟ್ರೀಯ ಆಯೋಗದಲ್ಲಿ ಎರಡು ಕೋಟಿ ರೂ.ಗಳವರೆಗೆ ಪರಿಹಾರ ಪಡೆಯುವ ಅವಕಾಶವಿದೆ. ಜೀವವಿಮೆ, ಡ್ರೈವಿಂಗ್ ಲೈಸೆನ್ಸ್ ಕೆಲವೊಮ್ಮೆ ರಿನೀವಲ್ ಆಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಏನಾದರೂ ಅಪಘಾತವಾದರೆ ಪರಿಹಾರ ಪಡೆಯುವುದು ಕಷ್ಟವಾಗುತ್ತದೆ. ರೈತರು ಕಳಪೆ ಬಿತ್ತನೆ ಬೀಜದ ವಿರುದ್ದವೂ ಎಚ್ಚರಿಕೆ ವಹಿಸಬೇಕು. ಒಟ್ಟಾರೆ ಗ್ರಾಹಕರು ಸದಾ ಜಾಗೃತರಾಗಿದ್ದಾಗ ಮಾತ್ರ ಮೋಸದಿಂದ ಬಚಾವ್ ಆಗಬಹುದು ಎಂದು ತಿಳಿಸಿದರು.

ಕಾನೂನು ಮಾಪನಶಾಸ್ತ್ರ ಇಲಾಖೆಯ ರಾಘುನಾಯ್ಕ ಮಾತನಾಡುತ್ತ ಬಟ್ಟೆ ಅಂಗಡಿ, ಪೆಟ್ರೋಲ್ ಬಂಕ್, ನ್ಯಾಯಬೆಲೆ ಅಂಗಡಿ ಹೀಗೆ ಎಲ್ಲೆಲ್ಲಿ ತಕ್ಕಡಿಯನ್ನು ಬಳಸುತ್ತಾರೋ ಅಂತಹ ಕಡೆಗಳಲ್ಲಿ ಗ್ರಾಹಕರು ಮೋಸಕ್ಕೆ ಒಳಗಾಗುವುದುಂಟು. ತಕ್ಕಡಿಯಿಟ್ಟುಕೊಂಡು ವ್ಯಾಪಾರ ಮಾಡುವವರು ವರ್ಷಕ್ಕೆ ಎರಡು ವರ್ಷಕ್ಕೊಮ್ಮೆ ಸೀಲ್ ಮಾಡಿಸಬೇಕು. ಗ್ರಾಹಕರು ಸದಾ ಎಚ್ಚರಿಕೆಯಿಂದ ಇದ್ದರೆ ಮೋಸ ಹೋಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ವಾರ್ತಾಧಿಕಾರಿ ಬಿ.ವಿ.ತುಕಾರಾಂ ಮಾತನಾಡಿ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡುವುದಕ್ಕಾಗಿಯೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸ್ಥಾಪನೆಯಾಗಿದೆ. ಆದರೆ ಗ್ರಾಹಕರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಜಾಗೃತಿ ಮಾಹಿತಿಯ ಕೊರೆಯಿರಬಹುದು. ಗ್ರಾಹಕರು ಹಣ ನೀಡಿ ಯಾವುದೇ ವಸ್ತು ಖರೀಧಿಸಿದಾಗ ಬಿಲ್ ಪಡೆಯುವುದನ್ನು ಮರೆಯಬಾರದು. ಹೋಗ್ಲಿ ಬಿಡು ಎಂದು ನಿರ್ಲಕ್ಷೆ ಮಾಡಿದರೆ ಮೋಸ ಮಾಡುವವರ ಸಂಖ್ಯೆ ಇನ್ನು ಜಾಸ್ತಿಯಾಗುತ್ತದೆ ಎಂದು ಗ್ರಾಹಕರನ್ನು ಎಚ್ಚರಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಿರುವುದೆ ಗ್ರಾಹಕರಿಗೆ ನ್ಯಾಯ ಒದಗಿಸುವುದಕ್ಕಾಗಿ ವ್ಯಾಪಾರಸ್ಥರಿಗೆ ಲಾಭ ಮಾಡಿಕೊಡುವುದಕ್ಕಲ್ಲ. ಗ್ರಾಹಕರು ಜಾಗೃತರಾದಾಗ ಮೋಸ ವಂಚನೆ ಕಡಿಮೆಯಾಗುತ್ತದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಹೆಚ್.ಯಶೋಧ ಮಾತನಾಡುತ್ತ ಸಂವಿಧಾನದ ಮೂಲಭೂತ ಹಕ್ಕಿನಲ್ಲಿ ಗ್ರಾಹಕರ ಹಕ್ಕು ಅತ್ಯಂತ ಪ್ರಮುಖವಾದುದು. ಹಣ ಕೊಟ್ಟು ವಸ್ತುಗಳನ್ನು ಖರೀಧಿಸುವವರೆಲ್ಲಾ ಗ್ರಾಹಕರು. ಅದೇ ರೀತಿ ಕೊಂಡುಕೊಂಡ ವಸ್ತುವಿಗೆ ರಸೀದಿ ಪಡೆಯಬೇಕು ಎನ್ನುವುದನ್ನು ಗ್ರಾಹಕರಿಗೆ ಮನವರಿಕೆ ಮಾಡಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಚಳ್ಳಕೆರೆಯ ನವೀನ್‍ಕುಮಾರ್ ವೇದಿಕೆಯಲ್ಲಿದ್ದರು.

Advertisement
Tags :
Advertisement