ಕಾಂಗ್ರೆಸ್‍ನವರು ದಲಿತ ಪರ, ಅಹಿಂದ ಪರ ಎಂದು ತೋರ್ಪಡಿಕೆಗೆ ಹೇಳುವುದನ್ನು ನಿಲ್ಲಿಸಲಿ : ಬಾಳೆಕಾಯಿ ಶ್ರೀನಿವಾಸ್
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 17 : ಹಿಂದು ಧರ್ಮದಲ್ಲಿ ದಲಿತರನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ, ಅವರನ್ನು ಎಲ್ಲೂ ಸಹಾ ಬಿಡುತ್ತಿಲ್ಲ, ದೇವಾಲಯದ ಹೊರಗಡೆ ಇಟ್ಟಿದ್ದಾರೆ, ಸವರ್ಣಿಯರ ಓಣಿಗಳಲ್ಲಿ ಓಡಾಡಲು ಬಿಡುತ್ತಿಲ್ಲ, ಇದು ಹೀಗೇಯೇ ಮುಂದುವರೆದರೆ ಎಲ್ಲಾ ದಲಿತರು ಭೌದ್ದ ಧರ್ಮವನ್ನು ಅನುಸರಿಸಲಾಗುವುದೆಂದು ದಲಿತ ಮುಖಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟಗಳ ಬಾಳೆಕಾಯಿ ಶ್ರೀನಿವಾಸ್ ಎಚ್ಚರಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ಭಯವಿಲ್ಲದೆ ನಡೆಯುತ್ತಿದೆ. ಸಾರ್ವಜನಿಕವಾಗಿ ಯಾವುದೇ ಕಾನೂನಿನ ಭಯವಿಲ್ಲದೆ ನಡೆಯುತ್ತಿದೆ. ಕರ್ನಾಟಕದಲ್ಲಿ ಪ್ರತಿಯೊಂದು ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತಿಯೊಂದು ಗ್ರಾಮದಲ್ಲೂ ಕೂಡ ಅಸ್ಪøಶ್ಯತೆ ಆಚರಣೆ ಕೊನೆಗೊಂಡಿರುವುದಿಲ್ಲ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಜನಪ್ರಿಯ ಮುಖ್ಯಮಂತ್ರಿ ಕೂಡ ನಾವು ದಲಿತ ಹಾಗೂ ಅಹಿಂದ ಪರ ಎಂದು ಕೂಡ ನಾಟಕೀಯ ಹೇಳಿಕೆಯನ್ನು ಕೊಡುತ್ತಾರೆ. ತಾವೇನಾದರೂ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಧ್ವನಿಯಾದರೆ ಘಟನೆ ನಡೆದ ತಕ್ಷಣವೇ ಇಂತಹ ಘಟನೆಗಳು ಮರುಕಳಿಸದಂತೆ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.
ಶಾಸಕ ಮುನಿರತ್ನ ಅವರ ಜಾತಿ ನಿಂದನೆ ಕೊಲೆ ಬೆದರಿಕೆ ಹಾಗೂ ಲಂಚಕ್ಕೆ ಬೇಡಿಕೆ ಇವೆಲ್ಲವೂ ನಡೆದರು "ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು" ಎನ್ನುವ ಬಿ.ಜೆ.ಪಿಯ ರಾಜ್ಯ ಮುಖಂಡರು ತದ್ದಿರುದ್ಧ ಹೇಳಿಕೆ ನೀಡುತ್ತಾ ಶಾಸಕರ ಪರ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ತಕ್ಷಣವೇ ಬಿ.ಜೆ.ಪಿಯಿಂದ ಆರ್.ಆರ್. ನಗರದ ಶಾಸಕ ಮುನಿರತ್ನರವರನ್ನು ಉಚ್ಚಾಟಿಸಿದ್ದಲ್ಲದೇ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಪಡೆದು ನಂತರ ಬಿ.ಜೆ.ಪಿ ಪಕ್ಷವು ದಲಿತರ ಪರ ಎನ್ನುವ ನಿಲುವು ತೋರಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‍ನವರು ದಲಿತ ಪರ ಸರ್ಕಾರ ಅಹಿಂದ ಪರ ಮುಖ್ಯಮಂತ್ರಿ ಎಂದು ತೋರ್ಪಡಿಕೆಗೆ ಹೇಳುವುದನ್ನು ನಿಲ್ಲಿಸಬೇಕು ಈ ಸರ್ಕಾರದಲ್ಲಿ ದಲಿತರ ಮೇಲೆ ಜಾತಿ ನಿಂದನೆ, ಹಲ್ಲೆ, ಸಾಮಾಜಿಕ ಬಹಿಷ್ಕಾರ, ಹೆಣ್ಣು ಮಕ್ಕಳ ಸಾಮೂಹಿಕ ಅತ್ಯಾಚಾರ ಹೆಚ್ಚಾಗಿ ಸಾಮಾಜಿಕ ನ್ಯಾಯ ಕನಸಾಗಿದೆ. ಈ ದೇಶ ಕಟ್ಟುವಲ್ಲಿ ದಲಿತ ಅಸ್ಪೃಶ್ಯ ಸಮಾಜದ ಕೊಡುಗೆ ಇದೆ. ಎನ್ನುವುದು ಆಳುವ ವರ್ಗಕ್ಕೆ ತಿಳಿದಿರಬೇಕು ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಉಗಲವಾಟ ಗ್ರಾಮದಲ್ಲಿ ದ್ಯಾಮವ್ವನಗುಡಿಗೆ ಹೋಗಿದ್ದಕ್ಕೆ ಅರ್ಜುನ ಮಾದರ ಎಂಬ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ದ್ಯಾಮವ್ವನಗುಡಿಯ ಗರ್ಭ ಗುಡಿಯೊಳಕ್ಕೆ ಏಕೆ ಹೋಗಿದ್ದೆ ಎಂದು ಪ್ರಶ್ನಿಸಿ ಕೇರಿ ಜನರು ನಮ್ಮ ಏರಿಯಾಕ್ಕೆ ಬರಬೇಡಿ, ನೀವು ನಿಮ್ಮ ಏರಿಯಾದಲ್ಲಿರಿ, ನಾವು ನಮ್ಮ ಏರಿಯಾದಲ್ಲಿರುತ್ತೇವೆ ಎಂದು ಡಂಗೂರ ಸಾರಿಸಿದ್ದಾರೆ. ಇದುವರೆಗೂ ಆ ಗ್ರಾಮದಲ್ಲಿ ಕೆಲ ಪುಂಡರನ್ನು ಬಂಧಿಸಿರುವುದಷ್ಟೆ . ಹೊರತು ಗ್ರಾಮದ ಅಸ್ಪೃಶ್ಯತೆ ಬಹಿಷ್ಕಾರವನ್ನು ಇದುವರೆಗೂ ಸರ್ಕಾರ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಬಂದು 18. ತಿಂಗಳಾದರೂ ಕೂಡ ಸಾಮಾಜಿಕ ನ್ಯಾಯ ನೀವು ಕೊಡುತ್ತಿಲ್ಲ. ಇದೇ ರೀತಿ ಮುಂದುವರೆದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜಕಾರಣಕ್ಕೆ ತಕ್ಕಪಾಠ ಕಲಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ಆಗ್ರಹಿಸುತ್ತದೆ.
ಗೋಷ್ಟಿಯಲ್ಲಿ ಎಸ್.ಎಸ್.ರಾಜ್ಯಧ್ಯಕ್ಷ ಕುಂಚಿಗನಹಾಳ್ ಮಹಲಿಂಗಪ್ಪ, ಡಿ.ಎಸ್.ಎಸ್ ಮುಖಂಡರಾದ ಕೆ.ರಾಜಣ್ಣ, ಕಸ್ತೂರಪ್ಪ, ಚಿಕ್ಕಗೊಂಡನಹಳ್ಳಿ ಮಲ್ಲಿಕಾರ್ಜುನ ಸಾಮಾಜಿಕ ಹೋರಾಟಗಾರ ಎಂ.ಆರ್.ಶಿವರಾಜ್, ಎಂ.ಆರ್.ಹೆಚ್.ಎಸ್. ಮುಖಂಡರಾದ ಏಕಾಂತಪ್ಪ, ನಿವೃತ್ತ ಉಪನ್ಯಾಸಕರಾದ ನಾಗರಾಜ್, ಮಂಜುನಾಥ, ತಿಮ್ಮಪ್ಪನಹಳ್ಳಿ, ಕಾಂತರಾಜು, ಗಾಂಧಿನಗರ, ಬಂಗಾರಪ್ಪ ಆಂಜನೇಯ, ರಾಜಪ್ಪ, ಉಮೇಶ್, ಸಹನ, ನಾಗಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.