Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು : ಛಲವಾದಿ ನಾರಾಯಣಸ್ವಾಮಿ

01:02 PM Oct 25, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಹೊರಗೆ ನಿಂತಿದ್ದಾರೆ. ಬಿಜೆಪಿ ಶಾಸಕರು ಯಾರೂ ಅಷ್ಟು ದಡ್ಡತನ ಮಾಡುವುದಿಲ್ಲ. ಈಗ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದ್ದಾರೆ. ಬಿಜೆಪಿಯ 8 ಶಾಸಕರು ಪಕ್ಷ ತೊರೆಯುತ್ತಾರೆಂದು ಎಸ್ ಟಿ ಸೋಮಶೇಖರ್ ಹೇಳಿದ್ದರು.

Advertisement

 

ಜನ ಈಗಾಗಲೇ ರಾಜ್ಯ ಸರ್ಕಾರದ ವಿರುದ್ದ ಕೋಪಗೊಂಡಿದ್ದಾರೆ. ಅಭಿವೃದ್ಧಿ ಎಂಬುದು ರಾಜ್ಯದಲ್ಲಿ ಮಾಯ ಆಗಿದೆ. ಖಜಾನೆ ದುಡ್ಡು ಎಲ್ಲಿ ಲೂಟಿ ಆಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಐದು ಗ್ಯಾರಂಟಿ ಹೆಸರಲ್ಲಿ ಒಂದೂ ವರ್ಷದಿಂದ ಸರ್ಕಾರ ಗ್ಯಾರಂಟಿ ಯೋಜನೆಗಳು ಸಹ ಯಾರಿಗೂ ತಲುಪುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಜನ ತಿರುಗಿ ಬೀಳುವ ಸಂದರ್ಭವಿದು. ಇಂಥ ಸ್ಥಿತಿಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗುವುದು ಅನುಮಾನ.

Advertisement

ಚುನಾವಣೆ ಸಂದರ್ಭದಲ್ಲಿ ಬಿಟ್ಟಿರುವ ಒಂದು ಬಾಣವಿದು ಅಷ್ಟೇ. ಸಿ ಪಿ ಯೋಗೀಶ್ವರ್ ಗೆ ಬಿಜೆಪಿ ತೊರೆಯದೆ ವಿಧಿ ಇರಲಿಲ್ಲ. ಬಿಜೆಪಿಯಿಂದ ಯೋಗೀಶ್ವರ್ ಗೆ ಅನ್ಯಾಯ ಆಗಿಲ್ಲ ಅವರೇ ಹೇಳಿದ್ದಾರೆ. ಅನುಕೂಲ ಸಿಂಧು ರಾಜಕಾರಣಕ್ಕಾಗಿ ಹೋಗಿದ್ದಾರೆ.  ಜೆಡಿಎಸ್ ಪಕ್ಷದ ಮೂಲಕ ಸ್ಪರ್ಧಿಸಿ ಎಂದೆವು
ನಮ್ಮ ಪಕ್ಷದಿಂದಲೇ ಸ್ಪರ್ಧಿಸಿ ಎಂದು ಸಹ ಹೇಳಿದ್ದೆವು
ಬಿಜೆಪಿ ಟಿಕೆಟ್ ಘೋಷಣೆ ಆಗುವ ಮುನ್ನ ರಾಜೀನಾಮೆ ನೀಡಿದರು.‌ಅನೇಕ ಆಫರ್ ಗಳು ಬಂದ ಕಾರಣ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ನಿಂದ ಗೆದ್ದರೆ ಮಂತ್ರಿ ಆಗಬಹುದೆಂದು ಹೋಗಿದ್ದಾರೆ. ಚನ್ನಪಟ್ಟಣದಲ್ಲಿ ಈಸಲ ನಿಖಿಲ್‌ ಕುಮಾರಸ್ವಾಮಿ ಗೆಲ್ಲುತ್ತಾರೆ. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ. ನಿಖಿಲ್ ಗೆದ್ದರೆ ರಾಜ್ಯಕ್ಕೆ ಹೊಸ ನಾಯಕತ್ವ ಕೊಟ್ಟಂತಾಗುತ್ತದೆ.

ಮುಡಾ ಪ್ರಕರಣ ತನಿಖೆ ಆದೇಶ ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿಎಂ ಭಯಭೀತರಾಗಿ ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಪ್ರಕರಣದಿಂದ‌ ಹೊರಬರಲು ಕೋರ್ಟ್ ಗಳಿಗೆ ಅಲೆಯುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯರಲ್ಲಿ ಕಲ್ಮಶ ಇಲ್ಲದಿದ್ದರೆ ಈಸ್ಥಿತಿ ಬರುತ್ತಿರಲಿಲ್ಲ. ಮೂರು ಕ್ಷೇತ್ರದ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ. ಶಿಗ್ಗಾವಿ ಕ್ಷೇತ್ರಕ್ಕೆ ಭರತ್ ಗೆ ಟಿಕೆಟ್ ಬೇಡ ಎಂದು ಬೊಮ್ಮಾಯಿ ಹೇಳಿದ್ದರು. ಸರ್ವೆ ರಿಪೋರ್ಟ್ ಆಧಾರದ ಮೇಲೆ ಹೈಕಮಾಂಡ್ ಟಿಕೆಟ್ ನೀಡಿದೆ ಎಂದಿದ್ದಾರೆ.

Advertisement
Tags :
bengaluruChalavadi narayanaswamychitradurgacongress partysuddionesuddione newsಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article