For the best experience, open
https://m.suddione.com
on your mobile browser.
Advertisement

ಬಡ ಜನರ ಆಶಾಕಿರಣವಾದ ಕಾಂಗ್ರೆಸ್ಸಿನ ಪಂಚ ಯೋಜನೆಯಿಂದ ರಾಜ್ಯದ ಬಡ ಜನತೆಗೆ ಅನುಕೂಲವಾಗಿದೆ: ಸತೀಶ್ ಜಾರಕಿಹೊಳಿ

07:35 PM Apr 14, 2024 IST | suddionenews
ಬಡ ಜನರ ಆಶಾಕಿರಣವಾದ ಕಾಂಗ್ರೆಸ್ಸಿನ ಪಂಚ ಯೋಜನೆಯಿಂದ ರಾಜ್ಯದ ಬಡ ಜನತೆಗೆ ಅನುಕೂಲವಾಗಿದೆ  ಸತೀಶ್ ಜಾರಕಿಹೊಳಿ
Advertisement

ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 14 :  ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಿಂದ ರಾಜ್ಯದ ಬಡ ಕುಟುಂಬಗಳಾದ ಕೂಲಿ ಕಾರ್ಮಿಕರು ಮಹಿಳೆಯರು ರೈತರು  ವೃದ್ಧರು ವಿಧವೆಯರು ಜನಸಾಮಾನ್ಯರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಮಾನ ಪಂಚಭಾಗ್ಯಗಳನ್ನು ನೀಡಿ ನಿರಾಶ್ರಿತರ ಕಣ್ಣೀರು ಒರೆಸಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Advertisement
Advertisement

Advertisement

ಇವರು ನಗರದ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶ ಹಾಗೂ ಡಾಕ್ಟರ್ ಬಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಇವರು,

Advertisement
Advertisement

ಇತ್ತೀಚಿನ ದಿನಗಳಲ್ಲಿ ಮಳೆ ಬೆಳೆ ಇಲ್ಲದೆ ಬರ ಆವರಿಸಿಕೊಂಡು ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು, ಹತಾಶರಾಗಿದ್ದಾರೆ ಈ ಹಿನ್ನೆಲೆಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಪಂಚ ಭಾಗ್ಯಗಳಾದ ಹೆಣ್ಣು ಮಕ್ಕಳಿಗೆ ಬಸ್ ಫ್ರೀ, ಮಹಿಳೆಯರಿಗೆ 2000 ಮಾಸಿಕ ವೇತನ , ಹತ್ತು ಕೆಜಿ ಅಕ್ಕಿ, ವಿದ್ಯಾರ್ಥಿಗಳಿಗೆ 3000 ವೇತನ, 200 ವ್ಯಾಟ್ ವಿದ್ಯುತ್ ಫ್ರೀ, ಮಾಡಿ ಬಡ ಕುಟುಂಬಗಳಿಗೆ ಆಶ್ರಯವಾಗಿದೆ,

ಇದು ಅಲ್ಲದೆ ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ಘಟಬಂಧನ್ ಸರ್ಕಾರ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ 1 ಲಕ್ಷ ಫ್ರೀ, ಅಲ್ಲದೆ 25 ಗ್ಯಾರಂಟಿಗಳನ್ನು ಜನಸಾಮಾನ್ಯರಿಗೆ ನೀಡುತ್ತೇವೆ,

ಈ ನಿಟ್ಟಿನಲ್ಲಿ ಬಡವರ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಚಿತ್ರದುರ್ಗ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾದ ಚಂದ್ರಪ್ಪನವರನ್ನು ಅತಿಹೆಚ್ಚಿನ ಮತದಲ್ಲಿ  ಜಯಶೀಲರನ್ನಾಗಿ ಮಾಡಿ ಎಂದು ಹೇಳಿದರು,

ಇನ್ನು ಈ ವೇಳೆ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದು ಬಡತನ ನಿರ್ಮೂಲನೆಯಾಗಿದೆ,

ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನತೆಗೆ ಹೇಳಿದಂತೆ ನಡೆದುಕೊಂಡಿದ್ದಾರೆ ಬಿಜೆಪಿ ರವರು ಸುಳ್ಳು ಭರವಸೆಗಳನ್ನು ಕೊಟ್ಟು ಜನಸಾಮಾನ್ಯರಿಗೆ ಜಾತಿ ಜಾತಿಗೆ ನಡುವೆ ವಿಷ ಬೀಜ ಬಿತ್ತಿ ರಾಷ್ಟ್ರ ಹಾಗೂ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸಿದ್ದಾರೆ

ಕಳೆದ ಕೆಲವು ವರ್ಷಗಳಿಂದ ಭದ್ರಾ ಮಲ್ದೆ ಮೇಲ್ದಂಡೆ ಯೋಜನೆ ಸ್ಥಗಿತಗೊಂಡಿದ್ದು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡಿ ಎಂದು ಕೇಳಿದರೆ ನಮ್ಮಲ್ಲಿ ಹಣವಿಲ್ಲವೆಂದು ಹಾರಕ್ಕೆ ಉತ್ತರ ಹೇಳಿದ್ದಾರೆ, ಈ ಒಂದು ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇವಲ ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಇದರಿಂದಾಗಿ ಕೇಂದ್ರ ಬಿಜೆಪಿ ಸುಳ್ಳು ಭರವಸೆಗಳನ್ನು ನಂಬದೇ ವಿಶ್ವಾಸವುಳ್ಳ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಚಂದ್ರಪ್ಪನವರಿಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಹೇಳಿದರು,

ಇನ್ನು ಈ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದ ಎಂಎಲ್ಎ ವೀರೇಂದ್ರ ಪಪ್ಪಿ,   ಮೊಣಕಾಲ್ಮೂರು ಎಂಎಲ್ಎ ಎಂ ವ್ಯ ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಎಂಎಲ್ಎ ಟಿ ರಘುಮೂರ್ತಿ, ಎಚ್ ಆಂಜನೇಯ, ಲೋಕಸಭೆ ಅಭ್ಯರ್ಥಿ ಡಿಎಚ್ ಚಂದ್ರಪ್ಪ, ಸಮಾರಂಭದಲ್ಲಿ ಮಾತನಾಡಿದರು,

ಇನ್ನು ಈ ಸಂದರ್ಭದಲ್ಲಿ ಜಿ.ಎಸ್. ಮಂಜುನಾಥ್, ಅನ್ವರ್ ಪಾಷಾ, ಓ ಶಂಕರ್, ಕೃಷ್ಣಮೂರ್ತಿ, ಗೀತಾನಂದಿನಗೌ ಮಂಜುನಾಥಗೌಡ, ರೈತರ ಸಂಘದ ಮುಖಂಡ ಸೋಮಗುದ್ದು ರಂಗಸ್ವಾಮಿ,  ವಿಜಯ್ ಕುಮಾರ್, ನಾಗರಾಜ್, ಸೈಯದ್, ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು,

Advertisement
Tags :
Advertisement