For the best experience, open
https://m.suddione.com
on your mobile browser.
Advertisement

ಸೆಪ್ಟೆಂಬರ್ 04ರಂದು ಬಿಎಸ್‌ಎಫ್ ನಿವೃತ್ತ ಯೋಧ ಡಿ.ತಿಪ್ಪೇಸ್ವಾಮಿಗೆ ಅಭಿನಂದನಾ ಸಮಾರಂಭ : ಯೋಧನ ಸ್ವಾಗತಕ್ಕೆ ಜಿ.ಆರ್.ಹಳ್ಳಿ ಗ್ರಾಮಸ್ಥರಿಂದ ಸಿದ್ಧತೆ

05:17 PM Aug 31, 2024 IST | suddionenews
ಸೆಪ್ಟೆಂಬರ್ 04ರಂದು ಬಿಎಸ್‌ಎಫ್ ನಿವೃತ್ತ ಯೋಧ ಡಿ ತಿಪ್ಪೇಸ್ವಾಮಿಗೆ ಅಭಿನಂದನಾ ಸಮಾರಂಭ   ಯೋಧನ ಸ್ವಾಗತಕ್ಕೆ ಜಿ ಆರ್ ಹಳ್ಳಿ ಗ್ರಾಮಸ್ಥರಿಂದ ಸಿದ್ಧತೆ
Advertisement

ಚಿತ್ರದುರ್ಗ: ಭಾರತೀಯ ಗಡಿಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಸುಧೀರ್ಘ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮವಾದ ಚಿತ್ರದುರ್ಗ ತಾಲ್ಲೂಕಿನ ಗುಡ್ಡದ ರಂಗವ್ವನಹಳ್ಳಿ ಗ್ರಾಮಕ್ಕೆ ಸೆಪ್ಟೆಂಬರ್ 04ರಂದು ಬುಧವಾರ ಆಗಮಿಸುತ್ತಿರುವ ಡಿ.ತಿಪ್ಪೇಸ್ವಾಮಿ ಅವರ ವಿಜೃಂಭಣೆಯ ಸ್ವಾಗತಕ್ಕೆ ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement


ಗ್ರಾಮದ ಶ್ರೀಮತಿ ದೊಡ್ಡಕ್ಕ ದಿ.ದಾಸಪ್ಪ ಅವರ ಅವರಿಗೆ ಮೂರು ಜನ ಮಕ್ಕಳು. ಅದರಲ್ಲಿ ಎರಡನೇ ಮಗ ಡಿ.ಜಯ್ಯಣ್ಣ ಅವರು 1993ರಲ್ಲಿ ಗಡಿಭದ್ರತಾ ಪಡೆಯಲ್ಲಿ 20 ವರ್ಷ 6 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮೂರನೇ ಮಗ ಆದ ಡಿ.ತಿಪ್ಪೇಸ್ವಾಮಿ ಅವರು 2002ರಲ್ಲಿ ದೇಶಸೇವೆಗೆ ಸೇರಿ 22 ವರ್ಷ ಸೇವೆ ಸಲ್ಲಿಸಿದ್ದಾರೆ. ಡಿ.ತಿಪ್ಪೇಸ್ವಾಮಿ ಅವರು ಜಮ್ಮುಕಾಶ್ಮಿರ, ಛತ್ತಿಸ್ ಘಡ್, ಪಶ್ಚಿಮ ಬಂಗಾಳ, ತ್ರಿಪುರ ಸೇರಿದಂತೆ ವಿವಿಧ ರಾಜ್ಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ದೇಶಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತಾಯ್ನಾಡಿಗೆ ಆಗಮಿಸುತ್ತರುವ ಡಿ.ತಿಪ್ಪೇಸ್ವಾಮಿ ಅವರಿಗೆ ಹೃದಯಪೂರ್ವ ಅಭಿನಂದನಾ ಸಮಾರಂಭವನ್ನು ಸೆಪ್ಟೆಂಬರ್ 04ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.


ಅಭಿನಂದನಾ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುದ್ದರಾಜ, ಜಿ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುದ್ರಮ್ಮ, ಉಪಾಧ್ಯಕ್ಷೆ ವಿ.ಟಿ.ರೂಪ ಮಂಜುನಾಥ್, ಸದಸ್ಯರಾದ ಬಿ.ಎನ್.ಜ್ಯೋತಿ, ಟಿ.ರುದ್ರಸ್ವಾಮಿ, ಮಾರುತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಗುರುಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಬಿ.ಪ್ರಸನ್ನ, ಜಿ.ಆರ್.ಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಕೆ.ಹೊನ್ನೂರಪ್ಪ, ಕೆಎಸ್‌ಎಫ್‌ಸಿ ಮ್ಯಾನೇಜರ್ ಆರ್.ಬಾಬು, ಚಿತ್ರದುರ್ಗ ಅರೆಸೇನ ಮಾಜಿ ಯೋಧರ ಸಂಘದ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಡಿ.ಜಯ್ಯಣ್ಣ, ಕಾರ್ಯದರ್ಶಿ ರವಿಶಂಕರ್, ಖಜಾಂಚಿ ಮಂಜುನಾಥ, ಮಾಜಿ ಸೈನಿಕರಾದ ಹಾಲಪ್ಪ ನಾಗಜ್ಜಿ, ಎನ್.ಬಿ.ಹನುಮಂತರೆಡ್ಡಿ, ಎನ್.ಜಯ್ಯಣ್ಣ, ವಿ.ಪಿ.ಸಂದೀಪ್ ಪಾಟೇಲ್, ಪಿ.ಆರ್.ಶ್ರೀನಿವಾಸರೆಡ್ಡಿ, ಜೋಡಿ ಚಿಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.ಸೋಮಣ್ಣ, ಮುಖ್ಯಶಿಕ್ಷಕಿ ನೇತ್ರಾವತಿ, ಜಿ.ಆರ್.ಹಳ್ಳಿಯ ಎಸ್‌ಡಿಎಂಸಿ ಅಧ್ಯಕ್ಷ ರಾಘು, ಉಪಾಧ್ಯಕ್ಷೆ ಶಿಲ್ಪಾ ಹಾಗೂ ಸದಸ್ಯರು ಭಾಗವಹಿಸುವರು.

Advertisement

Tags :
Advertisement