ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಪೂರ್ಣಗೊಳಿಸಿ, ಕೇಂದ್ರ ಸಚಿವರಿಂದ ಉದ್ಘಾಟಿಸಿ : ಟಿ. ಪ್ರಕಾಶ್ ಮನವಿ
ವರದಿ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ತಾಲ್ಲೂಕಿನ ಗೊಡಬನಹಾಳ್ ಗ್ರಾಮದ ಹತ್ತಿರ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ 2011-12 ರಲ್ಲಿ ಸರ್ಕಾರ ಮಂಜೂರು ಮಾಡಿದ್ದು, ಹತ್ತು ವರ್ಷಗಳ ನಂತರ ಕಾಮಗಾರಿಯು ಶೇ.80 ರಷ್ಟು ಪೂರ್ಣಗೊಂಡಿದ್ದು, ಮುಗಿಯುವ ಹಂತಕ್ಕೆ ತಲುಪಿದೆ.
ಇದಕ್ಕಾಗಿ 12 ಕೋಟಿ ರೂ.ಗಳ ವೆಚ್ಚವಾಗಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿರವರು ಕಾಮಗಾರಿಯನ್ನು ನಿಲ್ಲಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡಿರುವ ಎ.ನಾರಾಯಣಸ್ವಾಮಿರವರು ಕಾಮಗಾರಿಯನ್ನು ನಿಲ್ಲಿಸುವ ಕೆಲಸಕ್ಕೆ ಕೈಹಾಕುವವರಲ್ಲ.
ಅಧಿಕಾರಿಗಳು ಯಾವುದೇ ಭಯವಿಲ್ಲದೆ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿಯನ್ನು ಪೂರ್ಣಗೊಳಿಸಿ ಕೇಂದ್ರ ಸಚಿವರಿಂದಲೇ ಉದ್ಘಾಟಿಸಬೇಕೆಂದು ಭಾರತೀಯ ಜನತಾಪಕ್ಷ ಅನ್ನೇಹಾಳ್ ಮಂಡಲ ಅಧ್ಯಕ್ಷ ಟಿ.ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲೇಶ್, ನಿರಂಜನಮೂರ್ತಿ, ಕಾಂತರಾಜ್ ಇವರುಗಳು ಮನವಿ ಮಾಡಿದ್ದಾರೆ.