Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿ.ಎಂ.ಗುರುಲಿಂಗಪ್ಪ ಆತ್ಮಹತ್ಯೆ ಪ್ರಕರಣ : ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಪ್ರತಿಭಟನೆ

04:38 PM Dec 19, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.19 : ಚಳ್ಳಕೆರೆ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಥಮ ದರ್ಜೆ ಸಹಾಯಕ ಸಿ.ಎಂ.ಗುರುಲಿಂಗಪ್ಪ ಕಚೇರಿಯಲ್ಲಾದ ಅವಮಾನ ಹಾಗೂ ಕೆಲಸದ ಒತ್ತಡದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು, ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ಚಳ್ಳಕೆರೆ ತಾಲ್ಲೂಕು ಶಾಖೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕಳೆದ 30 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಕೆಲಸ ಮಾಡುತ್ತಿದ್ದ ಸಿ.ಎಂ.ಗುರುಲಿಂಗಪ್ಪ ಆತ್ಮಹತ್ಯೆಗೂ ಮುನ್ನ ಕೆಲಸದ ಒತ್ತಡ ಹಾಗೂ ಅವಮಾನದಿಂದ ಸಾವಿಗೆ ಶರಣಾಗುತ್ತಿದ್ದೇನೆನ್ನುವುದನ್ನು ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ಸರ್ಕಾರದಿಂದ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ಯಾವುದೇ ರೀತಿಯ ಅಡೆತಡೆಯಿಲ್ಲದೆ ಒದಗಿಸಬೇಕು. ಕುಟುಂಬಕ್ಕೆ ಅನುಕಂಪದ ನೌಕರಿಯನ್ನು ತುರ್ತಾಗಿ ನೀಡಬೇಕು. ಮೇಲಾಧಿಕಾರಿಗಳು ಅನವಶ್ಯಕವಾಗಿ ಕೈಕೆಳಗಿನ ನೌಕರರಿಗೆ ನೀಡುವ ಕಿರುಕುಳ ನಿಲ್ಲಬೇಕು.

ಸಕಾಲ ರ್ಯಾಂಕಿಂಗ್ ಪದ್ದತಿಯನ್ನು ಕಿತ್ತೊಗೆದು ಸರ್ಕಾರ ನಿಗಧಿಪಡಿಸಿರುವ ವೇಳೆಯಲ್ಲಿ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಇದರಿಂದ ಖಾತೆ ಬದಲಾವಣೆಗಳಲ್ಲಾಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಅನ್ಯ ಇಲಾಖೆ ಕೆಲಸಗಳನ್ನು ಕಂದಾಯ ಇಲಾಖೆ ನೌಕರರ ಮೇಲೆ ಹೇರುವುದು ಸರಿಯಲ್ಲ. ಸರ್ಕಾರ ನಿಗಧಿಪಡಿಸಿರುವ ಕೆಲಸದ ವೇಳೆಯನ್ನು ಹೊರತುಪಡಿಸಿ ಇತರೆ ಸಮಯದಲ್ಲಿ ನೌಕರರಿಗೆ ಕೆಲಸದ ಒತ್ತಡವನ್ನು ಹಾಕಬಾರದು.

ಸಾರ್ವತ್ರಿಕ ರಜಾ ದಿನಗಳಲ್ಲಿ ಕೆಲಸಗಳನ್ನು ಹೇಳಬಾರದು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ ಎಲ್ಲಾ ಕೆಲಸಗಳನ್ನು ಆನ್‍ಲೈನ್‍ನಲ್ಲಿಯೇ ನಿಭಾಯಿಸುವಂತೆ ಒತ್ತಡ ಹೇರಲಾಗುತ್ತಿರುವುದರಿಂದ ನೌಕರರು ಆಸಕ್ತಿ ಕಳೆದುಕೊಂಡು ಆತ್ಮಹತ್ಯೆಯಂತ ಕೃತ್ಯಕ್ಕೆ ಮನಸ್ಸು ಮಾಡುವಂತಾಗಿದೆ.
ಲ್ಯಾಪ್‍ಟಾಪ್, ಪ್ರಿಂಟರ್, ಮೊಬೈಲ್ ಹಾಗೂ ಕಚೇರಿಗಳ ವ್ಯವಸ್ಥೆಯೊಂದಿಗೆ ಸೂಕ್ತ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ ಎಂದು ಪ್ರತಿಭಟನಾನಿರತ ಕಂದಾಯ ಇಲಾಖೆ ನೌಕರರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ತಿಮ್ಮಾರೆಡ್ಡಿ, ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷ ಬಿ.ಆರ್.ಸಿದ್ದೇಶ್, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ವಿ.ಪಾಂಡುರಂಗಪ್ಪ, ಚಳ್ಳಕೆರೆ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಲಿಂಗೇಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Tags :
chitradurgaCM Gurulingappafamilygovernment employeesJusticeProtestsuddionesuicide caseಆತ್ಮಹತ್ಯೆಕುಟುಂಬಚಿತ್ರದುರ್ಗದುಃಖತಪ್ತನ್ಯಾಯಪ್ರಕರಣಪ್ರತಿಭಟನೆಸರ್ಕಾರಿ ನೌಕರರುಸಿ.ಎಂ.ಗುರುಲಿಂಗಪ್ಪಸುದ್ದಿಒನ್
Advertisement
Next Article