Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲೆಯಲ್ಲೇ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು..!

01:41 PM Jul 08, 2024 IST | suddionenews
Advertisement

ಚಿತ್ರದುರ್ಗ: 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ನವೋದಯ ಶಾಲೆಯ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾರೆ. ಹಿರಿಯೂರು ತಾಲೂಕಿನ ಉಡುವಳ್ಳಿ ನವೋದಯ ಶಾಲೆಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಪ್ರೇಮ ಸಾ್ರ ಎಂಬ ವಿದ್ಯಾರ್ಥಿ ನೇಣಿಗೆ ಕೊರಳೊಡ್ಡಿದ್ದಾರೆ.

Advertisement

ಪ್ರೇಮ ಸಾಗರ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದವನು. ಸೀನಿಯರ್ ವಿದ್ಯಾರ್ಥಿಗಳು ರೇಗಿಸುತ್ತಿದ್ದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿ ತಾನಿದ್ದ ಕೊಠಡಿಗೆ ಬಂದು ನೇಣು ಬಿಗಿದುಕೊಂಎಉ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಗರ್ ಮೃತದೇಹವನ್ನು ಸದ್ಯ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿರಿಯೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿಈ ಪ್ರಕರಣ ನಡೆದಿದೆ.

ಶಾಲಾ-ಕಾಲೇಜುಗಳಲ್ಲಿ ರ್ಯಾಗಿಂಗ್ ಬ್ಯಾನ್ ಆಗಿ ಎಷ್ಟೋ ವರ್ಷಗಳು ಕಳೆದಿವೆ. ರ್ಯಾಗಿಂಗ್ ಮಾಡುವುದರಿಂದಾನೇ ಮಕ್ಕಳ ಮನಸ್ಸು ಹಾಳಾಗುತ್ತರ, ಪ್ರಾಣವನ್ನು ಕಳೆದುಕೊಳ್ಳಬಹುದು ಎಂಬ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ. ಆದರೂ ಎಷ್ಟೋ ಶಾಲಾ ಕಾಲೇಜುಗಳಲ್ಲಿ ರ್ಯಾಗಿಂಗ್ ನಡೆಯುತ್ತದೆ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಕೆಲವೊಂದಿಷ್ಟು ಸೀನಿಯರ್ ಗಳು ತಮಾಷೆ‌ ಮಾಡುವುದಕ್ಕೆ ತೆಗೆದುಕೊಳ್ಳುವ ಟಾಪಿಕ್ ಜೂನಿಯರ್ ಮಕ್ಕಳಿಗೆ ಹರ್ಟ್ ಆಗಬಹುದು. ಪದೇ ಪದೇ ಅದನ್ನೇ ಮಾಡುತ್ತಿದ್ದರೆ, ಜಿಗುಪ್ಸೆಯೂ ಬರಬಹುದು. ಈಗ ನವೋದಯ ಶಾಲೆಯಲ್ಲಿ ಸೀನಿಯರ್ ಗಳು ರೇಗಿಸಿದರು ಎಂಬ ಕಾರಣಕ್ಕೆ ವಿದ್ಯಾರ್ಥಿ ನೇಣು ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಯಾವ ವಿಚಾರವನ್ನು ರೇಗಿಸುತ್ತಿದ್ದರು, ಆ ವಿದ್ಯಾರ್ಥಿಗೆ ಮನಸ್ಸಿಗೆ ನೋವಾಗುವಂತದ್ದು ಏನಾಗಿತ್ತು ಎಂಬೆಲ್ಲಾ ವಿಚಾರಗಳು ವಿಚಾರಣೆಯ ನಂತರ ಬೆಳಕಿಗೆ ಬರಬೇಕಿದೆ.

Advertisement

Advertisement
Tags :
8ನೇ ತರಗತಿ ವಿದ್ಯಾರ್ಥಿbengaluruchitradurgachitradurga districtClass 8 studenthanged himselfschoolsuddionesuddione newsಚಿತ್ರದುರ್ಗನೇಣಿಗೆ ಶರಣುಬೆಂಗಳೂರುಶಾಲೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article