Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಐಸಿಡಿಎಸ್ ಯೋಜನೆಯನ್ನು ರದ್ದುಗೊಳಿಸಿದಂತೆ ಸಿಐಟಿಯು ಸಂಘಟನೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 

06:39 PM Jun 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ,
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜೂ.17 : ರಾಜ್ಯದಲ್ಲಿ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಆರ್ ಡಿ ಪಿ ಆರ್ ರೂಪಿಸಿರುವ ಯಾವುದೇ ಕಾರ್ಯಕ್ರಮಗಳನ್ನು ಮತ್ತು ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸಿರುವ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಂದು ನಗರದ ನೆಹರು ವೃತ್ತದಲ್ಲಿ ಸಿಐಟಿಯು ಸಂಘಟನೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

Advertisement

ಈ ವೇಳೆ ಮಾತನಾಡಿದ ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ 1974ರ ರಾಷ್ಟ್ರೀಯ ಮಕ್ಕಳ ಶಿಕ್ಷಣ ನೀತಿಯ ಭಾಗವಾಗಿನೇಶನ್ಸ್ ರಾಷ್ಟ್ರಗಳು ಪ್ರಾರಂಭಿಸಿದ ಸಂಸ್ಥೆಯ ಮುಖಾಂತರ ಆರು ವರ್ಷದ ಮಕ್ಕಳು ದೇಶದ ಸಂಪತ್ತು ಮಾತ್ರವಲ್ಲದೆ ಸಮಾಜದ ಪುನರ್ ಪಾದನೆ ಎಂದು ಘೋಷಿಸಿ 1975ರಲ್ಲಿ ಐಸಿಡಿಎಸ್ ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ.

ಈ ಯೋಜನೆ ಪ್ರಾರಂಭವಾದ ಮೇಲೆ ಭಾರತದಲ್ಲಿ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿ ಅಪೌಷ್ಟಿಕತೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸರ್ಕಾರದ ಇಬ್ಬಗೆ ನೀತಿಗಳಿಂದ ಐಸಿಡಿಎಸ್ ಕಾರ್ಯಕ್ರಮ ಹಳ್ಳ ಹಿಡಿಯುವಂತೆ ಆಗಿದೆ ರಾಜ್ಯದಲ್ಲಿ ಶಿಕ್ಷಣ ನೀತಿಯನ್ನು ರೂಪಿಸಲು ಪ್ರತ್ಯೇಕ ಆಯೋಗವನ್ನು ಸ್ಥಾಪನೆ ಮಾಡಲಾಗಿದ್ದು ಆಯೋಗದ ವರದಿ ಬರುವ ಮುಂಚೆ ಏಕಮುಖವಾಗಿ ನಾಲ್ಕು ವರ್ಷದ ಮೇಲ್ಪಟ್ಟ ಮಕ್ಕಳನ್ನು ಶಿಕ್ಷಣ ಇಲಾಖೆಯಲ್ಲಿ ಸೇರಿಸಿದರೆ ಅಂಗನವಾಡಿಯಲ್ಲಿ ದೊರೆಯುವ ಪೌಷ್ಟಿಕ ಆಹಾರಗಳಿಂದ ವಂಚಿತರಾಗುವುದರಲ್ಲದೆ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತದೆ ಆದ್ದರಿಂದ ಐಸಿಡಿಎಸ್ ಯೋಜನೆಯನ್ನು ರದ್ದುಗೊಳಿಸದೆ ಎಲ್ ಕೆಜಿ ಯುಕೆಜಿ ಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ತೆರೆಯುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಬೇಕು.
ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಇದೇ ತಿಂಗಳ 19ರಿಂದ ಅನರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದಿರಮ್ಮ ಮಾತನಾಡಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಗಳನ್ನು ಪ್ರಾರಂಭಿಸಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಅಂಗನವಾಡಿ ನೌಕರರಿಗೆ ಕೆಲಸವಿಲ್ಲದಂತೆ ಮಾಡುತ್ತಿದ್ದು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ. ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯು ಕೆ ಜಿಗಳನ್ನು ಪ್ರಾರಂಭಿಸುವುದರಿಂದ ಪೋಷಕರು ಅಂಗನವಾಡಿಗಳಿಗೆ ದಾಖಲಿಸುವುದನ್ನು ನಿರಾಕರಿಸುತ್ತಾರೆ.

ಇದರಿಂದಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉತ್ತಮ ಆಹಾರ ದೊರೆಯುವುದಿಲ್ಲ ಕೇವಲ ಶಿಕ್ಷಣಕ್ಕಾಗಿ ಅಂಗನವಾಡಿಗಳನ್ನು ತುಚ್ಯ ಮನಭಾವದಿಂದ ಕಾಣುತ್ತಿರುವುದು ಸರಿಯಲ್ಲ ನಮ್ಮ ಕಾರ್ಯಕರ್ತರಲ್ಲಿಯೂ ಸಹ ಪದವಿ ಪಡೆದ ಶಿಕ್ಷಕರಿದ್ದಾರೆ ಕೂಡಲೇ ಸರ್ಕಾರ ಐಸಿಡಿಎಸ್ ಯೋಜನೆಯನ್ನು ರದ್ದುಗೊಳಿಸುವ ನಿರ್ಧಾರದಿಂದ ಹೊರಬಂದು ಶಿಕ್ಷಣ ಇಲಾಖೆಯ ನೀತಿಗಳನ್ನು ಅಂಗನವಾಡಿಗಳ ಮೇಲೆ ಹೇರದೆ ಪ್ರತ್ಯೇಕವಾಗಿ ಕಂಡು ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ಉತ್ತಮ ಗೌರವ ಧನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಶಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಶಾಸಕ ಟಿ ರಘುಮೂರ್ತಿ ಮಾತನಾಡಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಅಂಗನವಾಡಿ ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಸಿದ್ದರಿದ್ದಾರೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ತಿಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಇಂದಿರಮ್ಮ, ಪ್ರಧಾನ ಕಾರ್ಯದರ್ಶಿ ಗಳಾದ ಬೋರಮ್ಮ, ಖಜಾಂಚಿ ಗಂಗಮ್ಮ, ತಿಪ್ಪೇಸ್ವಾಮಿ,  ನಗರಸಭೆ ಸದಸ್ಯರಾದ ರಮೇಶ್ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Tags :
Anganwadi workersbengalurucancellationchitradurgaCituICDS schemeorganizationProtestsuddionesuddione newsಅಂಗನವಾಡಿ ಕಾರ್ಯಕರ್ತೆಯರುಐಸಿಡಿಎಸ್ ಯೋಜನೆಚಿತ್ರದುರ್ಗಪ್ರತಿಭಟನೆಬೆಂಗಳೂರುರದ್ದುಸಂಘಟನೆಸಿಐಟಿಯುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article