Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಖ್ಯಾತ ಉದ್ಯಮಿ ನವರತನ್ ಮಲ್ ನಿಧನ

12:25 PM Mar 26, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್. 26 : ನಗರದ ಖ್ಯಾತ ಉದ್ಯಮಿ ಹಾಗೂ ಹೋಲ್ ಸೇಲ್ ಬಟ್ಟೆ ವ್ಯಾಪಾರಿ ನವರತನ್ ಮಲ್ (75 ವರ್ಷ) ಇಂದು (ಮಂಗಳವಾರ) ಬೆಳಿಗ್ಗೆ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಇಂದು ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ನೇತ್ರ ದಾನ : ನವರತನ್ ಮಲ್ ಅವರ ನಿಧನದ ನಂತರ ಕುಟುಂಬದವರ ಅನುಮತಿಯ ಮೇರೆಗೆ ಕಣ್ಣುಗಳನ್ನು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ದಾನ ನೀಡಿದ್ದಾರೆ. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದು ಅಂಧರ ಬಾಳಿಗೆ ಬೆಳಕಾಗಿದ್ದಾರೆ.

ಸಂತಾಪ : ನವರತನ್ ಮಲ್ ಅವರ ನಿಧನಕ್ಕೆ ಜೈನ ಸಮುದಾಯದ ಮುಖಂಡರು, ಸೇರಿದಂತೆ ನಗರದ ಪ್ರಮುಖ ಸಂಘ ಸಂಸ್ಥೆಗಳು, ಸಂಘಟನೆಗಳ ಮುಖಂಡರು ಉದ್ಯಮಿಗಳು ಅವರ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

Advertisement
Tags :
bengaluruBusinessmanchitradurgaFamousNavrathan Malpassed awaysuddionesuddione newsಖ್ಯಾತ ಉದ್ಯಮಿಚಿತ್ರದುರ್ಗನವರತನ್ ಮಲ್ನಿಧನ ವಾರ್ತೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article