ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ , ಡಿ. 22 : ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ವತಿಯಿಂದ 2025ನೇ ಸಾಲಿನ ದಿನದರ್ಶಿಕೆಯನ್ನು ಇಂದು ಚಿತ್ರದುರ್ಗದ ಶ್ರೀ ಚಿನ್ಮೂಲಾದ್ರಿ ಬೃಹನ್ಮಠದ ತ್ರಿವಿಧ ದಾಸೋಹ ತತ್ವದ ರೂವಾರಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ಶುಭ ಸಂದರ್ಭದಲ್ಲಿ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಸೇತುವೆಯ ಹತ್ತಿರ ಶ್ರೀ ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಹೆಬ್ಬಾಳ್‍ನ ವಿರಕ್ತ ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ಬಿಡುಗಡೆಗೂಳಿಸಿದರು.
ಈ ಸಂದರ್ಭದಲ್ಲಿ ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಕೆ. ಎಂ. ವೀರೇಶ್, ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಸಮಾಜದ ಸಂಘಟನಾ ಕಾರ್ಯದರ್ಶಿ ಕೆ. ಬಿ. ಸುರೇಶ್, ಅ.ಭಾ.ವೀ. ಮಹಾ ಸಭಾದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಷಡಾಕ್ಷರಯ್ಯ, ಸಹ ಕಾರ್ಯದರ್ಶಿ ಶರಣಯ್ಯ, ರಂಗ ಕಲಾವಿದ ಗಣೇಶಯ್ಯ, ರಾಜೇಶ್, ಜಾಲಿಕಟ್ಟೆ ರುದ್ರಣ್ಣ, ರುದ್ರೇಶ್ ಐಗಳ್ ಶಿಕ್ಷಕರಾದ ಚನ್ನಯ್ಯ ನಿವೃತ್ತ ಪ್ರಚಾರ್ಯರು ಮುರುಗೇಂದ್ರಯ್ಯ ಉಪಸ್ಥಿತರಿದ್ದರು.