Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮಳೆಗೆ ಮನೆ ಕುಸಿದು ಮಹಿಳೆ ಸಾವು : ಶಾಸಕ ವೀರೇಂದ್ರ ಭೇಟಿ : ಸ್ಥಳದಲ್ಲೇ ಪರಿಹಾರ 5 ಲಕ್ಷ ಮಂಜೂರು

05:47 PM Oct 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru,

Advertisement

ಸುದ್ದಿಒನ್, ಚಿತ್ರದುರ್ಗ ಅ. 17 : ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ಈಚಲನಾಗೇನಹಳ್ಳಿ ಗ್ರಾಮದಲ್ಲಿ ಮನೆ ಬಿದ್ದು ರಂಗಮ್ಮ ಮೃತ ಪಟ್ಟಿದ್ದು ಸ್ಥಳಕ್ಕೆ ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ರವರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.

ಮೃತ ಮಹಿಳೆ ರಂಗಮ್ಮ ಸುಮಾರು 63ವರ್ಷ ವಯಸ್ಸಿನವರಾಗಿದ್ದು ಇಬ್ಬರು ಹೆಣ್ಣು,ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತ ಮಹಿಳೆ ತನ್ನ ಮಗನೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದು ತನ್ನ ಮಗ ಕೆಲಸಕ್ಕೆ ತೆರಳಿದ್ದು ತಾನು ಮನೆಯಲಿದ್ದ ಸಂಧರ್ಭದಲ್ಲಿ ಮನೆಯ ಗೋಡೆ ಮತ್ತು ಚಾವಡಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

 

ಸ್ಥಳಕ್ಕೆ ಬೇಟಿ ನೀಡಿದ ಶಾಸಕರಾದ ವೀರೇಂದ್ರ ಪಪ್ಪಿ ರವರು ಈ ಕೂಡಲೇ ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರನ್ವಯ ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದಂತಹ ಸಂದರ್ಭದಲ್ಲಿ ಸದರಿ ಮೃತರ ವಾರಸುದಾರರಿಗೆ ರೂ.4.00 ಲಕ್ಷಗಳನ್ನು ಪಾವತಿ ಮಾಡುವಂತೆ ಆದೇಶಿಸಿರುತ್ತಾರೆ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮೃತರ ಕುಟುಂಬಕ್ಕೆ ಹೆಚ್ಚುವರಿಯಾಗಿ ರೂ.1.00 ಲಕ್ಷಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದು ಒಟ್ಟು ರೂ.5.00 ಲಕ್ಷಗಳನ್ನು ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದಂತಹ ಸಂದರ್ಭದಲ್ಲಿ ಪರಿಹಾರ ಪಾವತಿಸುವಂತೆ ಆದೇಶಿಸಿರುತ್ತಾರೆ.

ಮೃತರ ಕುಟುಂಬಕ್ಕೆ ರೂ.5.00 ಲಕ್ಷಗಳನ್ನು ಮಂಜೂರು ಮಾಡಿ ಕುಟುಂಬದವರಿಗೆ ಆದೇಶ ಪ್ರತಿಯನ್ನು ಶಾಸಕರಾದ ಕೆ ಸಿ ವೀರೇಂದ್ರ ಪಪ್ಪಿ ರವರು ಮತ್ತು ತಹಶೀಲ್ದಾರರಾದ ನಾಗವೇಣಿರವರು ನೀಡಿದರು.

 

ಈ ಸಂದರ್ಭದಲ್ಲಿ ಪಂಚಾಯ್ತಿ ಅಧ್ಯಕ್ಷರಾದ ನಿರ್ಮಲ ದೇವರಾಜ್,ಸದಸ್ಯರಾದ ಸುರೇಶ್,ಮಾಜಿ ಸದಸ್ಯರಾದ ಸಿದ್ದಣ್ಣ,ಜಿಲ್ಲಾ ಕಾಂಗ್ರೆಸ್ ಪದವೀಧರರ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ರಾಮಾನಾಯ್ಕ್,ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಸಯ್ಯದ್ ಖುದ್ದೂಸ್ ,ಎಸ್ಟಿ ವಿಭಾಗದ ಅಧ್ಯಕ್ಷರಾದ ಬಿ ಮಂಜುನಾಥ್ ,ಕೆಡಿಪಿ ಸದಸ್ಯರಾದ ನಾಗರಾಜ್,ಜಗದೀಶ್ ಮತ್ತಿತರು ಉಪಸ್ಥಿತರಿದ್ದರು

 

ಚಿತ್ರದುರ್ಗ ಅ. 17 : ಚಿತ್ರಹಳ್ಳಿ ಗ್ರಾಮದಲ್ಲಿ ಮಳೆ ಅಬ್ಬರಕ್ಕೆ ಮನೆ ಗೋಡೆ ಕುಸಿತಗೊಂಡು ಹಾನಿ ಉಂಟಾಗಿದೆ. ಇನ್ನೂ ಗುರುವಾರ ಮಧ್ಯಾಹ್ನ 1 ಗಂಟೆಗೆ ದೃಶ್ಯ ಕಂಡು ಬಂದಿದ್ದು ದೇವರಾಜ್ ಎಂಬುವವರ ಮನೆ ಕುಸಿದು ಮನೆ ಮಾಲೀಕರು ಬೀದಿಗೆ ಬಿದ್ದಿದ್ದಾರೆ.

ಇನ್ನೂ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿತ್ತಿರುವ ಮಳೆಯಿಂದಾಗಿ ಅಲಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲೂ ಕೂಡ ಮನೆಯ ಗೋಡೆ ಬಿದ್ದಿದ್ದು ಮನೆಯ ಮಾಲೀಕ ಸಂಕಷ್ಟಕ್ಕೇಡಾಗಿದ್ದು ಅದೃಷ್ಟವಶಾತ್ ಪ್ರಾಣ ಹಾನಿ ತಪ್ಪಿದಂತಾಗಿದೆ.

ಇನ್ನಷ್ಟು ದಿನಗಳ ಕಾಲ ಮಳೆ ಇರುವುದರಿಂದ ಮನೆಯಲ್ಲಿ ವಾಸಿಸುವುದಕ್ಕೆ ಭಯದ ವಾತಾವರಣ ಉಂಟಾಗಿದ್ದು ಮನೆಯ ಗೋಡೆ ಸಂಪೂರ್ಣವಾಗಿ ಶೀತಲಗೊಂಡಿದ್ದು ಸಂಪೂರ್ಣ ಬೀಳುವ ಹಂತ ತಲುಪಿದ್ದು ದೇವರಾಜ್ ಕುಟುಂಬದವರು ಸದ್ಯ ಗ್ರಾಮದ ಸಮುದಾಯ ಭವನದಲ್ಲಿ ವಾಸವಾಗಿದ್ದು, ನೆರವಿನ ಆಶಯ ವ್ಯಕ್ತಪಡಿಸಿದ್ದಾರೆ.

Advertisement
Tags :
bengaluruchitradurgacompensation!house collapsesMLA Veerendrasuddionesuddione newsಚಿತ್ರದುರ್ಗಬೆಂಗಳೂರುಮಹಿಳೆ ಸಾವುಶಾಸಕ ವೀರೇಂದ್ರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article